ಶ್ರೀರಾಮ ಎಲ್ಲರಿಗೂ ಬೇಕು. ಅನುಯಾಯಿಗಳು ಅವನಂತೆ ಇರಬೇಕು.ಪ್ರೊ. ಶಿವರಾಜ್ ಪಾಟೀಲ್ ಚಿಂತಕರು ಕಲ್ಬುರ್ಗಿ.

ಶ್ರೀರಾಮ ಎಲ್ಲರಿಗೂ ಬೇಕು ಅನುಯಾಯಿಗಳು ಅವನಂತೆ ಇರಬೇಕು. ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ಶ್ರೀ ರಾಮನ ಮಂದಿರ ಉದ್ಘಾಟನೆಗೆ ಕ್ಷಣಗಣನೆ ಪ್ರಾರಂಭವಾಗಿದ್ದು ಇಡೀ ದೇಶ ಸಂಭ್ರಮಿಸುತ್ತಿದೆ ಶ್ರೀರಾಮನ ಬಗ್ಗೆ ಅಪಾರ ಗೌರವ ಮತ್ತು ಪ್ರೀತಿ ಭಕ್ತಿ ಎಲ್ಲರ ಮನದಲ್ಲಿದೆ ಶ್ರೀರಾಮ ಎಲ್ಲರಿಗೂ ಬೇಕು ಆದರೆ ಅವನ ಅನುಯಾಯಿಗಳೂ ಸಹ ಅವನಂತೆ ಇರಬೇಕೆಂದು ಇಡೀ ದೇಶ ಅಪೇಕ್ಷಿಸುತ್ತದೆ ಶ್ರೀರಾಮನನ್ನು ಮತ್ತು ಆತನ ಮಂದಿರವನ್ನು ನಿರ್ಮಾಣ ಮಾಡುವುದಕ್ಕೆ ಬಿಜೆಪಿ ಗುತ್ತಿಗೆ ಪಡೆದಂತೆ ವರ್ತಿಸುತ್ತಿದೆ ಇದು ಸರಿಯಾದ ಮಾರ್ಗವಲ್ಲ ಶ್ರೀರಾಮ ಬಿಜೆಪಿಗೆ ಸೇರಿದವನಲ್ಲ ಅಥವಾ ಶ್ರೀ ರಾಮನ ವಂಶ ಪರಂಪರೆಯಲ್ಲಿ ಬಿಜೆಪಿ ಬಂದದ್ದು ಅಲ್ಲ ಆದರೆ ರಾಮ ಮಂದಿರದ ಉದ್ಘಾಟನೆ ಕಾರ್ಯಕ್ರಮವನ್ನು ಮುಂಬರುವ ಲೋಕಸಭಾ ಚುನಾವಣೆಗೆ ಬಳಸಿಕೊಂಡು ಇಡೀ ಕಾರ್ಯಕ್ರಮ ಹೈಜಾಕ್ ಮಾಡಿಕೊಳ್ಳತ್ತಿರುವುದು ವಿಷಾದನೀಯ ಸಂಗತಿ ರಾಮ ಮರ್ಯಾದ ಸರ್ವೋತ್ತಮ ಅವತಾರಿ ಪುರುಷ ಪ್ರಜಾಪಾಲಕ ಸರ್ವರಿಗೆ ಸಮಪಾಲು ಸರ್ವರಿಗೆ ಸಮಬಾಳು ನೀಡಿದ ಮಹಾನ್ ವ್ಯಕ್ತಿ ಇಂಥ ವ್ಯಕ್ತಿಯ ಮಂದಿರ ನಿರ್ಮಾಣಕ್ಕೆ ಯಾರೂ ವಿರೋಧಿಸುವುದಿಲ್ಲ ವಿರೋಧಿಸುವ ಅವಶ್ಯಕತೆಯೂ ಇಲ್ಲ ಆದರೆ ಅನಾವಶ್ಯಕವಾಗಿ ಬಿಜೆಪಿಯವರು ವಾದ ವಿವಾದ ಸೃಷ್ಟಿಸುವುದು ರಾಮ ತಮಗೆ ಸೇರಿದವನೆಂದು ಹೇಳಿಕೊಳ್ಳುವಂತೆ ವರ್ತಿಸುತ್ತಿರುವುದು ಇಡೀ ಅಯೋಧ್ಯೆಯ ಕಾರ್ಯಕ್ರಮ ಬಿಜೆಪಿಯ ಕಾರ್ಯಕ್ರಮವನ್ನಾಗಿ ರೂಪಿಸುತ್ತಿರುವದು ಎಲ್ಲರಿಗೂ ಬೇಸರವನ್ನುಂಟು ಮಾಡಿದೆ ಮೋದಿ ಅವರು ಈ ದೇಶದ ಪ್ರಧಾನಿಯಾಗಿ ವರ್ತಿಸಬೇಕೆ ವಿನಹ ಬಿಜೆಪಿ ಮುಖವಾಡದಂತೆ ವರ್ತಿಸಬಾರದು ಯಾಕೆಂದರೆ ಈ ದೇಶದ ಪ್ರಧಾನಿ 140 ಕೋಟಿ ಜನರ ಆಶಯದಂತೆ ಇರಬೇಕು ಅಧಿಕಾರ ತ್ಯಜಿಸಿದ ಮೇಲೆ ಬಿಜೆಪಿಯ ಕಾರ್ಯಕರ್ತನಂತೆ ವರ್ತಿಸಲಿ ಪ್ರಧಾನಿ ಹುದ್ದೆಯನ್ನು ವಹಿಸಿಕೊಳ್ಳುವಾಗ ದೇವರ ಸಾಕ್ಷಿಯಾಗಿ ಸ್ವಜನ ಪಕ್ಷಪಾತ ಜಾತಿಯತೆ ಮಾಡುವುದಿಲ್ಲವೆಂದು ಪ್ರಮಾಣಿಕರಿಸಿ ಸಂವಿಧಾನವನ್ನು ಗೌರವಿಸುವುದಾಗಿ ಹೇಳಿ ಪ್ರಧಾನಿ ಹುದ್ದೆಯನ್ನು ವಹಿಸಿಕೊಂಡಿದ್ದಾರೆ ಈಗ ಈ ರೀತಿಯಾಗಿ ವರ್ತಿಸುತ್ತಿರುವುದು ಇದು ಸಂವಿಧಾನಕ್ಕೆ ಮತ್ತು ಇಡೀ ದೇಶದ ಜನತೆಗೆ ಮಾಡುವ ಮೋಸವಾಗಿದೆ ಮೋದಿ ಅವರ ಬಗ್ಗೆ ಅಪಾರ ಗೌರವ ಹೊಂದಿರುವ ನಾವುಗಳು ಇವರೇಕೇ ಹೀಗೆ ವರ್ತಿಸುತ್ತಿದ್ದಾರೆಂದು ಸಂಶಯ ಪಡುವಂತಾಗಿದೆ ಜಾತ್ಯಾತೀತತೆ ಸಮಾನತೆ ಸಹೋದರತೆ ಆತ್ಮೀಯತೆ ಇವು ನಮ್ಮ ದೇಶದ ಮಂತ್ರಗಳು ಆಗಬೇಕು ಮೋದಿ ಅವರೂ ಸಹ ಶ್ರೀರಾಮನಂತೆ ಸರ್ವೋದಯ ಅಂತ್ಯೋದಯ ಮಂತ್ರಗಳನ್ನು ಜಪಿಸುತ್ತಾ ಶ್ರೀರಾಮ ಮಂದಿರವನ್ನು ಉದ್ಘಾಟಿಸಲು ಮುಂದಾಗಬೇಕೆ ವಿನಃ ಬಿಜೆಪಿ ರಾಮನನ್ನಾಗಿ ಬಿಜೆಪಿ ಮಂದಿರವನ್ನಾಗಿ ಮಾಡುವ ದಿಸೆಯಲ್ಲಿ ಪ್ರಯತ್ನಿಸಬಾರದು ಎಂಬುದು ನಮ್ಮ ಆಶಯ ಮತ್ತು ಕಳಕಳಿಯಾಗಿದೆ ಈಗ ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿರುವುದರಿಂದ ರಾಮ ಮಂದಿರ ನಿರ್ಮಾಣ ರಾಮ ಲಲ್ಲ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕೇಂದ್ರ ಸರ್ಕಾರವೇ ನಿರ್ವಹಿಸುತ್ತಿದೆ ಎನ್ನುವ ಭಾವನೆ ಬರುತ್ತಿದೆ ಆದರೆ ಹಾಗೆ ಆಗಬಾರದು ಶ್ರೀರಾಮ ಮಂದಿರ ತೀರ್ಥ ಟ್ರಸ್ಟ್ ಹಿಂದೂ ಧರ್ಮದ ಆಚಾರ್ಯರನ್ನು ಮತ್ತು ಪ್ರಮುಖರನ್ನು ವಿದ್ವಾಂಸವನ್ನು ಆಮಂತ್ರಿಸಿದಂತೆ ಭಾರತದಲ್ಲಿರುವ ಎಲ್ಲ ಜಾತಿ ಜನಾಂಗದ ಭಾವನೆಗಳನ್ನು ಗೌರವಿಸುವ ರಾಜಕೀಯ ಮುಖಂಡರನ್ನು ಹಾಗೂ ನಾಯಕರನ್ನು ಆಹ್ವಾನಿಸಬೇಕು ಎಲ್ಲ ಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಮಮಂದಿರ ಉದ್ಘಾಟಿಸಬೇಕೆ ವಿನಃ ತಮಗೆ ಬೇಕಾದವರನ್ನು ಕರೆದು ಉದ್ಘಾಟಿಸುವುದು ಸರಿಯಾದ ಕ್ರಮವಲ್ಲ ನಾಲ್ಕು ಜನ ಶಂಕರಾಚಾರ್ಯರಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗುವಂತೆ ಬಿಜೆಪಿ ನಡೆದುಕೊಳ್ಳುತ್ತಿದೆ ಇದು ಶೋಭೆ ತರುವಂತದ್ದಲ್ಲ ಬಿಜೆಪಿ ತನ್ನ ಚುನಾವಣಾ ಪ್ರಚಾರಕ್ಕಾಗಿ ಈ ಕಾರ್ಯಕ್ರಮವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂಬ ಆಪಾದನೆ ಕೇಳಿ ಬರುತ್ತಿದೆ ಇಂದು ಭಾರತದ ತುಂಬಾ ವ್ಯಾಪಿಸಿರುವ ಬಿಜೆಪಿ ಕಾರ್ಯಕರ್ತರು ಅಯೋಧ್ಯೆಯಲ್ಲಿ ಜನವರಿ 22ರಂದು ಸೇರುತ್ತಿರುವುದು ನೋಡಿದರೆ ಬಹುಶಃ ಇದು ಬಹುದೊಡ್ಡ ಪ್ರಮಾಣದ ಬಿಜೆಪಿ ಚುನಾವಣಾ ಪ್ರಚಾರದ ಅಜೆಂಡ ಆಗಿದೆ ಎನಿಸುತ್ತಿದೆ ಆದರೆ 140 ಕೋಟಿ ಜನರ ಆಶಯದಂತೆ ಹಿಂದೂ ಧರ್ಮದ ಸಂಪ್ರದಾಯದಂತೆ ಅವತಾರಿ ಹಾಗೂ ಮಹಾ ಮೇಧಾವಿ ಮರ್ಯಾದ ಸರ್ವೋತ್ತಮನಾದ ಶ್ರೀ ರಾಮನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ಮಂದಿರದ ಉದ್ಘಾಟನೆ ಕಾರ್ಯಕ್ರಮ ಹಿಂದೂ ಧರ್ಮದ ಸನಾತನ ಪರಂಪರೆಯಂತೆ ನಡೆಯಬೇಕೆ ವಿನಹ ಇದೊಂದು ಬಿಜೆಪಿ ಚುನಾವಣಾ ಪ್ರಚಾರದ ಕಾರ್ಯತಂತ್ರವಾಗಬಾರದು ಹಿಂದೂ ಮುಸ್ಲಿಂ ಕ್ರೈಸ್ತ ಸಿಖ್ ಇಸಾಯಿ ಬೌದ್ಧ ಜೈನ ಎಲ್ಲಾ ಪ್ರಮುಖ 14 ಧರ್ಮಗಳ ಮುಖಂಡರನ್ನೊಳಗೊಂಡಂತೆಶ್ರೀರಾಮ ಮಂದಿರದ ಉದ್ಘಾಟನಾ ಕಾರ್ಯಕ್ರಮ ನಡೆಯಬೇಕು ಶ್ರೀರಾಮ ಭಾರತದ ಬಹು ದೊಡ್ಡ ಅರಸು ದೊರೆ ಪ್ರಜಾಪಾಲನೆ ಮಾಡಿದ ರಾಜ ರಾಮದ್ರೋಹಿಗಳು ಯಾರು ಇಲ್ಲ ಎಲ್ಲರೂ ರಾಮಾಭಿಮಾನಿಗಳು ಇಂಥ ಸಂದರ್ಭದಲ್ಲಿ ಅನಾವಶ್ಯಕವಾಗಿ ಸಮಸ್ಯೆಗಳನ್ನು ಸೃಷ್ಟಿಸುತ್ತಿರುವ ಬಿಜೆಪಿ ಕ್ರಮ ಸರಿಯಾದದ್ದಲ್ಲ ಕೇಂದ್ರ ಸರ್ಕಾರವು ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ದೇಶದ ನಾನಾ ಮೂಲೆಗಳಿಂದ ಎಲ್ಲ ಪ್ರಮುಖರನ್ನು ಕರೆಸಿ ಬಿಜೆಪಿ ಸಮಾರಂಭ ಮಾಡ ಹೊರಟಿರುವದು ನಿಜಕ್ಕೂ ಶೋಚನೀಯ ಸಂಗತಿಯಾಗಿದೆ ಪ್ರೊಫೆಸರ್ ಶಿವರಾಜ್ ಪಾಟೀಲ್ ಚಿಂತಕರು ಕಲ್ಬುರ್ಗಿ



