ಸಂಪಾದಕೀಯ

ಸುರಪುರದ ಸಂಸ್ಥಾನದಲ್ಲಿ 1857ರ ವಿಜಯೋತ್ಸವ. ಸಂಸ್ಥಾನದ ಅರಮನೆಯಲ್ಲಿ ಕಾರ್ಯಕ್ರಮ.

ಇಂದು ದಿನಾಂಕ 8/2/2024 ರಂದು ಯಾದಗಿರಿ ಜಿಲ್ಲೆ ಸಗರನಾಡು ಎಂದು ಖ್ಯಾತಿ ಪಡೆದಿರುವ ಸುರಪುರದ ಸಂಸ್ಥಾನದಲ್ಲಿ ಇಂದು 1857ರ ವಿಜಯೋತ್ಸವ ಅಂಗವಾಗಿ ಸಂಸ್ಥಾನದ ಅರಮನೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು,
ಇಂದಿನ ದಿನಗಳಲ್ಲಿ ಸುರಪುರು ಸಂಸ್ಥಾನದ ಶೂರರ ನಾಡೆಂದು ಧೀರರನಾಡೆಂದು ಇದು ಸೂರ್ಯರ ಪೂರು ಎಂದು ಹೆಸರುವಾಸಿಯಾಗಿದ್ದು ಸುರಪುರದ ದೊರೆಗಳ ಸುರಪುರ ಸಂಸ್ಥಾನವು ನಮ್ಮ ದೇಶದ ಭೂಪಟದಲ್ಲಿ ಎರಡು ಬಾರಿ ಗಮನ ಸೆಳೆದಿದೆ ಮೊದಲನೆಯದು ದೆಹಲಿಯ ಔರಂಗಜೇಬನನ್ನು ಕ್ರಿ,ಶ 1705 ರಲ್ಲಿ ಸುರಪುರದ ಮೇಲೆ ದಾಳಿ ಮಾಡಿದಾಗ ಅಂದಿನ ರಾಜ್ಯ ಪಿತಂಬರಿ ಬಹರಿ ಗಡ್ಡಿಪಿಡ್ಡ ನಾಯಕರು ಔರಂಗಜೇಬನಿಗೆ ಸೋಲಿನ ಅನುಭವವನ್ನು ತೋರಿಸಿದರು,
ಎರಡನೇ ಯುದ್ಧ 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದಕ್ಷಿಣಾ ಭಾರತದ ನೇತೃತ್ವವನ್ನು ರಾಜ ನಾಲ್ವಡಿ ವೆಂಕಟಪ್ಪ ನಾಯಕರು ಬ್ರಿಟಿಷರ ವಿರುದ್ಧ ಹೋರಾಡಿದರು ಹಾಗೂ 1858ರ ಫೆಬ್ರವರಿ 8ರಂದು ಸುರಪುರ ಸಂಸ್ಥಾನದ ನಡುವೆ ಹಾಗೂ ಬ್ರಿಟಿಷರ ಮಧ್ಯೆ ನಡೆದ ಯುದ್ಧದಲ್ಲಿ ಬ್ರಿಟಿಷ ಸೇನಾಧಿಕಾರಿ ನ್ಯೂ ಬರಿ ಅವರನ್ನು ಕೊಂದಗಳಿಗೆ ನೆನಪಿಗಾಗಿ ಪ್ರತಿ ವರ್ಷ ನಿರಂತರವಾಗಿ ಸುರಪುರ ಸಂಸ್ಥಾನದ ವಿಜಯೋತ್ಸವ ಆಚರಣೆ ಮಾಡಲಾಗುತ್ತದೆ,
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಡಾ, ರಾಜ್ಯ ಕೃಷ್ಣಪ್ಪ ನಾಯಕ ಬಲವಂತ ಬಹರಿ ಬಹದ್ದೂರ್ ಸಂಸ್ಥಾನ ಸುರಪುರ
ಉದ್ಘಾಟಕರು, ಪ್ರೊ, ಚೆಲುವರಾಜು ಸಂಸ್ಕೃತ ಚಿಂತಕರು ಹಾಗೂ ಮಾನ್ಯ ಡಿನ್ನರ್ ಸಮಾಜ ವಿಜ್ಞಾನ ನಿಖಾಯ ಕನ್ನಡ ವಿಶ್ವವಿದ್ಯಾಲಯ ಹಂಪಿ ,
ಮುಖ್ಯ ಅತಿಥಿಗಳಾದ, ಡಾ, ಲಕ್ಷ್ಮಿಕಾಂತ ವಿ ಮೋಹರೀರ್ ಸಂಸ್ಕೃತ ಪ್ರಾಧ್ಯಾಪಕರು ಬಿಳಗಿ ,
ಶ್ರೀ ಭಾಸ್ಕರ್ ರಾವ್ ಮುಡಬೂಳು ಇತಿಹಾಸಕಾರರು ಸುರಪುರ,
ಡಾ, ರಾಜ್ಯ ವೆಂಕಟಪ್ಪ ನಾಯಕ ತಾಲೂಕು ವೈದ್ಯಧಿಕಾರಿ ಸುರಪುರು ,
ಶ್ರೀ ಕೃಷ್ಣ ಸುಬೇದಾರ್ ಆರಕ್ಷಕ ಉಪ ನಿರೀಕ್ಷಕರು ಕಾ,ಸು ವಿಭಾಗ ಸುರಪುರು ,

ಶ್ರೀ ರಾಜುಗೋಪಾಲ್ ಯುಭೂತಿ, ಶ್ರೀ ರಾಜಕುಮಾರ ದೊರೆ, ಶ್ರೀ ಮರಿಯಪ್ಪ ನಾಯಕ ಗುಡ್ಡಕಾಯಿ, ಶ್ರೀ ಮಾಂತೇಶ್ ಗಿಂಡಿ, ಶ್ರೀ ಪರುಶುರಾಮ ನಾಯಕ ಗುಡ್ಡ ಕಾಯಿ , ಶ್ರೀ ರಮೇಶ್ ಕುಲಕರಣಿ ಹಾಗೂ ಸುರಪುರ ನಗರದ ಮುಖಂಡರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು,

ಗುಂಡಪ್ಪ ಜೆ ಬೋಗಿ ಬೈಲಕುಂಟಿ ಯಾದಗಿರಿ ಜಿಲ್ಲಾ ವರದಿಗಾರರು

Related Articles

Leave a Reply

Your email address will not be published. Required fields are marked *

Back to top button