ದಿ. 27 ಮತ್ತು 28 ಏಪ್ರಿಲ್ ರಂದು ಕಲ್ಚರಲ್ ಫೌಂಡೇಶನ್ ವತಿಯಿಂದ ಮಕ್ಕಳಿಗಾಗಿ ಕಿರುನಾಟಕ ಮತ್ತು ರಂಗಗೀತೆಗಳ ಶಿಬಿರವನ್ನು ನಡೆಸಲಾಗುತ್ತಿದೆ.

ಇದೇ ತಿಂಗಳ 27 ಮತ್ತು 28ರಂದು ಬೆಳಗ್ಗೆ 9ರಿಂದ ಅಪರಾಹ್ನ 1.30ವರೆಗೆ ಪರಂಪರಾ ಕಲ್ಚರಲ್ ಫೌಂಡೇಶನ್ ವತಿಯಿಂದ 1ನೇ ತರಗತಿಯಿಂದ 7ನೇ ತರಗತಿವರೆಗಿನ ಮಕ್ಕಳಿಗಾಗಿ ಕಿರುನಾಟಕ ಮತ್ತು ರಂಗಗೀತೆಗಳ ಶಿಬಿರವನ್ನು ನಡೆಸಲಾಗುತ್ತಿದೆ.
ಮಕ್ಕಳ ಜಾಗೃತಿ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ನಡೆಯುವ ಈ ಶಿಬಿರವು ತಾವರೆಕೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗಾಗಿ ನಡೆಯಲಿದ್ದು, ಸಂಸ್ಥೆಯ ರಂಗಕರ್ಮಿಗಳಾದ ರಂಗನಿಧಿ ಮತ್ತು ಸಂಗಡಿಗರು ಸಂಪನ್ಮೂಲ ವ್ಯಕ್ತಿಗಳಾಗಿ ಶಿಬಿರವನ್ನು ಮುನ್ನಡೆಸಲಿದ್ದಾರೆ. ಸಂಸ್ಥೆಯ ಅಧ್ಯಕ್ಷ ಜಿ ಪಿ ರಾಮಣ್ಣ ಶಿಬಿರದ ಸಾರಥ್ಯ ವಹಿಸುವರು.
ಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯರಾದ ಉದಯ್, ಹಿರಿಯ ಮುಖ್ಯ ಶಿಕ್ಷಕರಾದ ಬಿ.ಆರ್.ಶ್ಯಾಮಲ, ಸಮಾಜ ಸೇವಕರಾದ ಟಿ.ಗಂಗಣ್ಣ, ಮಕ್ಕಳ ಜಾಗೃತಿ ಸಂಸ್ಥೆಯ ಅರುಣ ಶಿಬಿರದಲ್ಲಿ ಉಪಸ್ಥಿತರಿರುವರು.
ಶಿಬಿರದ ಆಹ್ವಾನ ಪತ್ರಿಕೆಯನ್ನು ಇಲ್ಲಿ ಇರಿಸಲಾಗಿದೆ.
ದಯವಿಟ್ಟು ನಿಮ್ಮ ಪತ್ರಿಕೆಯಲ್ಲಿ ಪ್ರಕಟಿಸಿ ಉಪಕರಿಸಿ.
ಜಿ ಪಿ ರಾಮಣ್ಣ
ಅಧ್ಯಕ್ಷ
9448202708




