ಕರ್ನಾಟಕ ರಾಜ್ಯದಲ್ಲಿ ಮತ್ತೊಂದು ರಾಜಕೀಯ ಪಕ್ಷದ ಪ್ರವೇಶ. ” ರಾಷ್ಟ್ರವಾದಿ ಜನವಿಕಾಸ ಪಾರ್ಟಿಯ ” ಕರ್ನಾಟಕ.

ಕರ್ನಾಟಕ ರಾಜ್ಯದಲ್ಲಿ ” ರಾಷ್ಟ್ರವಾದಿ ಜನವಿಕಾಸ ಪಾರ್ಟಿಯ ” ಆಟ ಶುರು.
ಈ ಪಕ್ಷದ ಸಾರಥ್ಯ ವಹಿಸಿಕೊಂಡಿರುವ ಪಾದರಸದಂಥಹ ವ್ಯಕ್ತಿತ್ವದ ಡಾ.ಕೆ.ಎಸ್.ಸ್ಟಿಫನ್.
ಕರ್ನಾಟಕ ರಾಜ್ಯದಲ್ಲಿ ಮತ್ತೊಂದು ರಾಜಕೀಯ ಪಕ್ಷದ ಪ್ರವೇಶ.
ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಗರಿಗೆದರುತ್ತಿವೆ. ಈಗಾಗಲೇ ರಾಜಕೀಯ ರಂಗದಲ್ಲಿ ಸಕ್ರೀ ಯವಾಗಿರುವ ರಾಷ್ಟ್ರೀಯ ಪಕ್ಷಗಳೊಂದಿಗೆ ಪ್ರಾದೇಶಿಕ ಪಕ್ಷಗಳು ಹಾಗೂ ಹೊಸತಾಗಿ ಹುಟ್ಟಿಕೊಳ್ಳುತ್ತಿರುವ ಹಲವಾರು ರಾಷ್ಟ್ರೀಯ ಪಕ್ಷಗಳು ತಮ್ಮ ಧ್ಯೇಯ ಧೋರಣೆಗಳು, ಪ್ರಜಾಹಿತಕ್ಕಾಗಿ ಹಾಕಿಕೊಂಡಿರುವ ಹಲವಾರು ಸಾಮಾಜಿಕ, ಆರ್ಥಿಕ, ಅರೋಗ್ಯ, ಹೀಗೆ ಹಲವಾರು ಕ್ಷೇತ್ರಗಳ ಪ್ರಗತಿಗಾಗಿ ಹೊಸ ಪ್ರಯೋಗಗಳನ್ನು ತಮ್ಮ ಪಕ್ಷದ ಪ್ರಣಾಳಿಕೆಗಳಲ್ಲಿ ಸೇರಿಸಿಕೊಂಡು ಆಯಾಯಾ ಪಕ್ಷದ ಧುರೀಣರು ಸಾರ್ವಜನಿಕ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.
ಇದೇ ಹಾದಿಯಲ್ಲಿ ಸಾಗುತ್ತಿರುವ ಹರಿಯಾಣ, ದೆಹಲಿ ಮೂಲದ ” ರಾಷ್ಟ್ರವಾದಿ ಜನವಿಕಾಸ ಪಾರ್ಟಿ ” ಎಂಬ ಹೆಸರಿನ ರಾಷ್ಟ್ರೀಯ ಪಕ್ಷ ಕರ್ನಾಟಕ ರಾಜ್ಯದಲ್ಲಿ ಕಾಲೂರಿದೆ. ಕನ್ನಡಿಗರ ಮನ ಗೆಲ್ಲಲು ಉತ್ಸಾಹದಿಂದ ರಂಗ ಪ್ರವೇಶ ಮಾಡಿದೆ. ” ರಾಷ್ಟ್ರವಾದಿ ಜನವಿಕಾಸ ಪಾರ್ಟಿ ” ಯ ಸಂಸ್ಥಾಪಕರು, ಈ ಹಿಂದೆ ರಾಜಕೀಯ ಪಕ್ಷದಲ್ಲಿ ಹಲವಾರು ವರ್ಷ ಕಾರ್ಯಕರ್ತರಾಗಿ ದುಡಿದು ಒಳ್ಳೆಯ ಅನುಭವ ಹೊಂದಿದವರುವ ಡಾ. ಜಿತೇಂದ್ರ ಕೌಶಿಕ್ ಹಿಂದಿ. ಇಂಗ್ಲೀಷ, ತಮಿಳು ಭಾಷಾ ಪ್ರವೀಣ ರಾಗಿದ್ದಾರೆ. ಮಾಜೀ ಸೈನಿಕರೂ , ರಾಷ್ಟ್ರವಾದಿ ಜನವಿಕಾಸ ಪಕ್ಷ ಅಧ್ಯಕ್ಷ ಶ್ರೀ ಡಾ.ಜೀತೆಂದ್ರ ಕೌಶಿಕ ಇವರು ದೇಶದ ಹಲವಾರು ಕಡೆ ಓಡಾಡಿಕೊಂಡು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ” ರಾಷ್ಟ್ರವಾದಿ ಜನವಿಕಾಸ ಪಾರ್ಟಿಯ ” ಚುಕ್ಕಾಣೆ ಹಿಡಿದಿರುವ ಪಾದರಸದಂಥಹ ವ್ಯಕ್ತಿತ್ವದ, ಬಿ.ಎಸ್.ಎನ್.ಎಲ್. ಮಾಜಿ ನೌಕರರೂ, ಬಿ.ಎಸ್.ಎನ್.ಎಲ್. ನೌಕರರ ಸಂಘದ ( ಲೇಬರ್ ಯುನಿಯನ್ ) ಆಲ್ ಇಂಡಿಯಾ ಅಧ್ಯಕ್ಷರು ಮತ್ತು ಕರ್ನಾಟಕ ರಾಜ್ಯದ ಕಾರ್ಯದರ್ಶಿಯಾಗಿ ಸಂಘದಲ್ಲಿ ಹಲವಾರು ವರ್ಷಗಳಿಂದ ಹಲವಾರು ಹುದ್ದೆಗಳನ್ನು ಅಲಂಕರಿಸಿ, ಸಂಘದ ನೌಕರರ ಹಲವಾರು ಸಮಸ್ಯೆಗಳನ್ನು ರಾಜ್ಯಮಟ್ಟದಲ್ಲೂ, ಕೇಂದ್ರಮಟ್ಟದ ಅಧಿಕಾರಿಗಳು, ಸಂಭಂಧಿಸಿದ ಸಚಿವರ ಮಟ್ಟದಲ್ಲಿ ಹೋರಾಡಿ ನ್ಯಾಯ ಗಿಟ್ಟಿಸಿಕೊಂಡಂಥಹ ಖಡಾ ಖಂಡಿತವಾಗಿ ಮಾತಾಡಬಲ್ಲ ವ್ಯಕ್ತಿತ್ವದ ಡಾ. ಕೆ.ಎಸ್.ಸ್ಟೀಫನ್ ಇವರು ಕರ್ನಾಟಕ ರಾಜ್ಯದ ” ರಾಷ್ಟ್ರವಾದಿ ಜನವಿಕಾಸ ಪಾರ್ಟಿಯ ” ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಡಾ.ಕೆ.ಎಸ್.ಸ್ಟೀಫನ್ ಅವರ ಅಧ್ಯಕ್ಷತೆ ಮತ್ತು ಸಾರಥ್ಯದಲ್ಲಿ
” ರಾಷ್ಟ್ರವಾದಿ ಜನವಿಕಾಸ ಪಾರ್ಟಿಯ ” ಪಕ್ಷ ರಾಜ್ಯದಲ್ಲಿ ಸದ್ದು ಮಾಡಲು ಪ್ರಾರಂಭಿಸುತ್ತದೆ. ತನ್ನ ಇರುವಿಕೆಯನ್ನು ಕಾಲ ಕಾಲಕ್ಕೆ ತೋರಿಸಿಕೊಡುತ್ತದೆ ಎಂಬ ಲಕ್ಷಣಗಳು ಕಾಣಿಸುತ್ತಿದೆ ಎಂದು ಪಕ್ಷದ ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ದಿನಾಂಕ ೨೨/೧೧/೨೦೨೩. ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಡಾ.ಕೆ.ಎಸ್.ಸ್ಟೀಫನ್ ಅವರು ರಾಷ್ಟ್ರೀಯ ಅಧ್ಯಕ್ಷ ರಿಂದ ಅಧಿಕಾರ ವಹಿಸಿಕೊಂಡಾಗಲೇ ತನ್ನ ಬಲ ಪ್ರದರ್ಶನ ಮಾಡಿದೆ.




