ಶಿಕ್ಷಕರಿಲ್ಲದೆ ವಿದ್ಯಾರ್ಥಿಗಳ ಪರದಾಟ: ಪ್ರಾಂಶುಪಾಲರಿಗೆ ಮನವಿ – ಕನಕನಗಿರಿ

ಶಿಕ್ಷಕರಿಲ್ಲದೆ ವಿದ್ಯಾರ್ಥಿಗಳ ಪರದಾಟ: ಪ್ರಾಂಶುಪಾಲರಿಗೆ ಮನವಿ
ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳ ಗೋಳು
ಕನಕಗಿರಿ ಪಟ್ಟಣದ ಶ್ರೀ ಪಂಪಣ್ಣ ಶರಣಪ್ಪ ಗುಗ್ಗುಳು ಶೆಟ್ಟರ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಶಿಕ್ಷಕರಿಲ್ಲದೆ ಹೊಲೆದಾಡುತ್ತಿದ್ದಾರೆ ಇತ್ತ ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದವರು ಈಗ ಹೋರಾಟದಲ್ಲಿ ಪ್ರಸ್ತುತ ಇದ್ದು ಅವರ ವಿದ್ಯೆಗೆ ಕೊರತೆಯಾಗುತ್ತಿದೆ ಎಂದು ವಿದ್ಯಾರ್ಥಿಗಳು ಸೇರಿ ಉಪ ಪ್ರಾಂಶುಪಾಲರಾದ ಮಾರ್ವಿನ್ ಡಿಸೋಜಾ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ವಿದ್ಯಾರ್ಥಿಗಳು ತರಗತಿಗಳು ನಡೆಯದೆ ಇರುವ ಕುರಿತು ಸರ್ಕಾರ ಪ್ರಥಮ ದರ್ಜಿ ಕಾಲೇಜ್ ಕನಕಗಿರಿಯ ಬಿಕಾಂ ಬಿ ಎ ಜನರಲಿಸಂ ವಿದ್ಯಾರ್ಥಿಗಳು ಎಲ್ಲರೂ ಸೇರಿ ಯಾವುದೇ ತರಗತಿಗಳು ನಡೆಯುತ್ತಿಲ್ಲ ಎಂದು ಆಗ್ರಹಿಸಿ ಅತಿಥಿ ಉಪನ್ಯಾಸಕರನ್ನು ಅವರ ಬೇಡಿಕೆಗಳ ಈಡೇರಿಕೆಗಾಗಿ ತರಗತಿಗಳನ್ನು ಬಹಿಷ್ಕರಿಸಿ ಮುಷ್ಕರವನ್ನು ಕೈಗೊಂಡಿರುವ ಕಾರಣ ಇದರಿಂದಾಗಿ ವಿದ್ಯಾರ್ಥಿಗಳಿಗೆ ಪಾಠದ ಪ್ರವಚನಗಳು ನಡೆಯುತ್ತಿಲ್ಲ ಕಾಲೇಜಿನ ಎಲ್ಲಾ ಬಡ ಮತ್ತು ಪ್ರತಿಭಾ ವಿದ್ಯಾರ್ಥಿ ಗಳಿಗೆ ವಿದ್ಯಾಭ್ಯಾಸದಲ್ಲಿ ಸಮಸ್ಯೆ ಉಂಟಾಗಿದೆ ಅತಿಥಿ ಉಪನ್ಯಾಸಕರನ್ನು ಅವರ ಬೇಡಿಕೆಯನ್ನು ಈಡೇರಿಸಬೇಕೆಂದು ಯುವ ಉತ್ತೇಜನ ಸೇವಾ ಪಡೆ ಸಂಘಟನೆಯ ವಿದ್ಯಾರ್ಥಿಗಳ ರಾಜ್ಯ ಘಟಕದಿಂದ ಉನ್ನತ ಶಿಕ್ಷಣ ಸಚಿವರು ಪ್ರಾಂಶುಪಾಲರ ಕಡೆಯಿಂದ ಮನವಿ ಮಾಡಿದರು ಮುಂದಿನ ದಿನಮಾನಗಳಲ್ಲಿ ಬೇಡಿಕೆ ಈಡೇರದಿದ್ದಲ್ಲಿ ಸಂಘಟನೆಯು ರಾಜ್ಯಾದ್ಯಂತ ಹೋರಾಟಕ್ಕೂ ಕರೆ ಕೊಟ್ಟಿದ್ದೆ ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು ಪ್ರಾಂಶುಪಾಲರು ಕೂಡಲೇ ತಮ್ಮ ಕಾಲೇಜಿನ ಅತಿಥಿ ಉಪನ್ಯಾಸಕರು ಮರಳಿ ಎಂದಿನಂತೆ ಎಲ್ಲಾ ವಿದ್ಯಾರ್ಥಿಗಳಿಗೆ ತರಗತಿಗಳನ್ನು ಪಾಠ ಪ್ರವಚನಗಳನ್ನು ಪ್ರಾರಂಭಿಸಬೇಕೆಂದು ಯುವ ಉತ್ತೇಜನ ಸೇನಾ ಪಡೆ ಸಂಘದ ವಿದ್ಯಾರ್ಥಿಗಳು ಸೇರಿ ಪ್ರಾಂಶುಪಾಲರಾದ ಮಾರ್ವಿನ್ ಡಿಸೋಜಾ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಕಾಲೇಜ್ ವಿದ್ಯಾರ್ಥಿಗಳು ಶಿಕ್ಷಕರು ಉಪನ್ಯಾಸಕರು ಉಪಸ್ಥಿತರಿದ್ದರು.
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ




