ಕಲ್ಯಾಣ ಕರ್ನಾಟಕ ಉಳಿಸಿ ಆಂದೋಲನಕ್ಕೆ ಬೆಂಬಲಿಸಿ.ಪ್ರೋ.ಶಿವರಾಜ ಪಾಟೀಲ್

ಕಲ್ಯಾಣ ಕರ್ನಾಟಕ ಉಳಿಸಿ ಆಂದೋಲನಕ್ಕೆ ಬೆಂಬಲಿಸಿ. ಕಲ್ಯಾಣ ಕರ್ನಾಟಕದಲ್ಲಿ ವಾಸಿಸುವ ಎಲ್ಲ ಕನ್ನಡಿಗರಿಗೆ ಈ ಮೂಲಕ ವಿನಂತಿಸಿಕೊಳ್ಳುವುದೇನೆಂದರೆ ಈಗ ನಾವು ಕಲ್ಯಾಣ ಕರ್ನಾಟಕ ಉಳಿಸಿ ಬೆಳೆಸಿ ಆಂದೋಲನವನ್ನು ಮಾಡಬೇಕಾದ ತುರ್ತು ಅಗತ್ಯತೆ ಇದೆ ನಮ್ಮ ಬೆಳವಣಿಗೆಗಾಗಿ ಹೋರಾಟ ಮಾಡಿದ್ದಾಯಿತು ಈಗ ಉಳುವಿಗಾಗಿ ಹೋರಾಟ ಮಾಡಬೇಕಾದ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗುತ್ತಿದೆ 371 ಜೆ ಕಲಂ ಅರ್ಥಪೂರ್ಣವಾಗಿ ಪರಿಣಾಮಕಾರಿಯಾಗಿ ಜಾರಿಗೆ ಆಗುತ್ತಿಲ್ಲ ಕಲ್ಯಾಣ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಕುಡಿಯುವ ನೀರು ನಡೆಯುವ ರಸ್ತೆ ವಿದ್ಯುತ್ ಶಕ್ತಿಯ ಕೊರತೆ ಎದ್ದು ಕಾಣುತ್ತಿದೆ ಅತಿವೃಷ್ಟಿ ಅನಾವೃಷ್ಟಿಯಿಂದ ಈ ಪ್ರದೇಶ ನರಳುತ್ತಿದೆ ರೈತರು ಕಂಗಾಲಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಅಭಿವೃದ್ಧಿ ಕಾರ್ಯಗಳು ಶೂನ್ಯವಾಗಿವೆ ನಮ್ಮ ಜನಪ್ರತಿನಿಧಿಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಅವರು ತಮ್ಮ ಮಕ್ಕಳನ್ನು ತಮ್ಮ ಹೆಂಡತಿಯರನ್ನು ಸಂಬಂಧಿಕರನ್ನು ರಾಜಕೀಯದಲ್ಲಿ ಬೆಳೆಸಲು ಆಸಕ್ತರಾಗಿದ್ದಾರೆ ಜನಪರ ಅಭಿವೃದ್ಧಿಪರ ಚಿಂತನೆಗಳು ಅವರ ತಲೆಯಲ್ಲಿ ಇಲ್ಲವೇ ಇಲ್ಲ ತ್ಯಾಗ ಸೇವೆ ಸಮರ್ಪಣಾ ಭಾವದಿಂದ ದುಡಿಯುವ ಯುವಕರು ಇಂದು ನಮಗೆ ಬೇಕಾಗಿದ್ದಾರೆ ಸ್ವಾರ್ಥಿಗಳು ಪಟ್ಟಭದ್ರ ಹಿತಾಸಕ್ತಿಗಳು ಅಧಿಕಾರವನ್ನು ತಮ್ಮ ಕೈಯಲ್ಲಿ ಹಿಡಿದುಕೊಂಡು ಈ ಪ್ರದೇಶವನ್ನು ಕಳೆದ ನಾಲ್ಕೈದು ದಶಕಗಳಿಂದ ಆಳುತ್ತಾ ಬಂದಿದಾರೆ ವಂಶ ಪಾರಂಪರ್ಯ ಕುಟುಂಬ ರಾಜಕಾರಣ ನಿಲ್ಲಿಸಬೇಕು ಕಾರ್ಯಕರ್ತರನ್ನ ಬೆಳೆಸಬೇಕು ಹೋರಾಟಗಾರರಿಗೆ ಆದ್ಯತೆ ಸಿಗಬೇಕು ಕೆಲವು ಜನ ಹೋರಾಟಗಾರರು ಮಾರಾಟವಾಗಿದ್ದಾರೆ ಅವರು ಒಂದು ಪಕ್ಷಕ್ಕೆ ಅಥವಾ ಕೆಲವು ವ್ಯಕ್ತಿಗಳಿಗೆ ಅಂಟಿಕೊಂಡು ಕೊಡುತ್ತಿದ್ದಾರೆ ಇದನ್ನು ಕಂಡು ಕಾಣದಂತೆ ನಾವು ಇರುವುದು ಸರಿಯಲ್ಲ ಈಗ ಕಲ್ಯಾಣ ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗಾಗಿ ಪ್ರಗತಿ ಮತ್ತು ಸುಧಾರಣೆ ಹಾಗೂ ಬದಲಾವಣೆಗಾಗಿ ನಾವು ಹೋರಾಡಬೇಕಾದದ್ದು ಅವಶ್ಯಕತೆ ಇದೆ ಈ ಪ್ರದೇಶದ ಜನತೆಯನ್ನು ಮಲತಾಯಿ ಧೋರಣೆಯಿಂದ ನೋಡುತ್ತಿದ್ದಾರೆ ಹಳೆ ಮೈಸೂರಿನ ಪ್ರಾಂತ್ಯದ ಜನತೆಗೆ ಇರುವ ಸೌಲಭ್ಯಗಳಲ್ಲಿ 10 ಪ್ರತಿಶತವು ನಮಗೆ ಇಲ್ಲ ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬೆಣ್ಣೆ ಹಚ್ಚುವ ಕೆಲಸ ನಡೆದಿದೆ ಬೆಳಗಾವಿಯಿಂದ ಬೀದರವರೆಗೆ 13 ಜಿಲ್ಲೆಗಳಲ್ಲಿ ಅಭಿವೃದ್ಧಿ ಕಾಣದೆ ಬರಗಾಲ ಪೀಡಿತ ಪ್ರದೇಶಗಳಂತೆ ಕಾಣುತ್ತೇವೆ ಕೆರೆಗಳು ಒಣಗಿ ಹೋಗಿವೆ ಬಾವಿಗಳು ಬತ್ತಿ ಹೋಗಿವೆ ದನಕರಗಳಿಗೆ ಮೇವಿಲ್ಲದಂತಾಗಿದೆ ಅಭಿವೃದ್ಧಿ ಶೂನ್ಯವಾಗಿ ಈ ಪ್ರದೇಶ ನರಳುತ್ತಿದೆ ಕೇವಲ ಆಕ್ಸಿಜನ್ ಮೇಲೆ ಇದ್ದ ಹಾಗೆ ರೈತರು ಬದುಕುತ್ತಿದ್ದಾರೆ, ಇಂತಹ ಕೆಟ್ಟ ಪರಿಸ್ಥಿತಿ ನಿರ್ಮಾಣಕ್ಕೆ ಕಾರಣ ಯಾರು ಎಂಬುದನ್ನು ಈಗ ಕಂಡು ಹಿಡಿಯಬೇಕಾದದ್ದು ತೀರಾ ಅಗತ್ಯವಾಗಿದೆ ಬಡವರು ಬಡವರಾಗಿಯೇ ಉಳಿದಿದ್ದಾರೆ ಉಳ್ಳವರು ಇಲ್ಲದವರು ಎಂಬ ಭೇದ ನಿರ್ಮಾಣವಾಗಿದೆ ಸರ್ವರಿಗೆ ಸಮಪಾಲು ಸರ್ವರಿಗೆ ಸಮ ಬಾಳು ಎಂಬ ಮಾತು ಕನಸಾಗಿ ಉಳಿದಿದೆ ಎಲ್ಲರಿಗೂ ಸಮಾನ ಅವಕಾಶಗಳು ದೊರೆಯುವಂತೆ ಮಾಡಬೇಕಾದದ್ದು ನಮ್ಮ ಮೇಲಿರುವ ಹೊಣೆಯಾಗಿದೆ ಇಲ್ಲದಿದ್ದರೆ ನಮಗೆ ಕಲ್ಯಾಣ ಕರ್ನಾಟಕದ ಇತಿಹಾಸವು ಕ್ಷಮಿಸುವುದಿಲ್ಲ ಮುಂದಿನ ಜನತೆಯು ನಮ್ಮನ್ನು ಕ್ಷಮಿಸುವುದಿಲ್ಲ ಅದಕ್ಕಾಗಿ ಈಗ ವಿದ್ಯಾವಂತರು ಸುಶಿಕ್ಷಿತರು ನಿವೃತ್ತ ಅಧಿಕಾರಿಗಳು ತಮ್ಮ ತಮ್ಮ ಅನುಭವವನ್ನು ಹೇಳಿಕೊಳ್ಳಲು ಮತ್ತು ಈ ಪ್ರದೇಶದ ಸಮಗ್ರ ಸುಧಾರಣೆಗಾಗಿ ಶ್ರಮಿಸಲು ಸಿದ್ಧರಾದವರು ಇಂದು ಟೂಂಕ ಕಟ್ಟಿ ನಿಲ್ಲಬೇಕಾಗಿದೆ ಇಲ್ಲದಿದ್ದರೆ ಈ ಪ್ರದೇಶ ಅಭಿವೃದ್ಧಿ ಕಾಣದೆ 75 ವರ್ಷಗಳ ಹಿಂದೆ ಹೇಗೆ ಇದಿಯೋ ಅದೇ ಪರಿಸ್ಥಿತಿಯಲ್ಲಿ ನಾವು ಮುಂದುವರಿಯಬೇಕಾಗುತ್ತದೆ ಇದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ ಈಗ ಉತ್ತರ ಕರ್ನಾಟಕದ ಪ್ರತ್ಯೇಕತೆ ಬಗ್ಗೆ ದನಿಯತ್ತಲಾಗುತ್ತಿದೆ ಮುಂದಿನ ದಿನಗಳಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶವು ಪ್ರತ್ಯೇಕಗೊಳಿಸಿ ಹೋರಾಟ ಆರಂಭವಾದರೂ ಆಗಬಹುದು ಇಂಥ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗುವುದಕ್ಕಿಂತ ಮುಂಚೆ ಅಖಂಡ ಕರ್ನಾಟಕ ಉಳಿಯಬೇಕು ಬೆಳೆಯಬೇಕು ಸಮಗ್ರ ಸುಧಾರಣೆಯಾಗಬೇಕು ಎಂದರೆ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 371 ಕಲಂ ಪರಿಣಾಮಕಾರಿಯಾಗಿ ಜಾರಿಗೆ ಆಗಬೇಕು ಅದಕ್ಕಾಗಿ ಒಂದು ಪ್ರತ್ಯೇಕ ಸಚಿವಾಲಯ ಸ್ಥಾಪಿಸ ಬೇಕೆಂಬ ಬೇಡಿಕೆ ಈಡೇರಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾದಂತ ಪರಿಸ್ಥಿತಿ ನಿರ್ಮಾಣವಾಗುತ್ತದೆ ವರ್ಷವೊಂದಕ್ಕೆ ಸಚಿವ ಸಂಪುಟದ ಸಭೆಯನ್ನು ಕರೆದು ಈ ಭಾಗದ ಕುಂದು ಕೊರತೆಗಳನ್ನು ಆಲಿಸಬೇಕು ಮುಖ್ಯಮಂತ್ರಿಗಳು ಜನತಾದರ್ಶನ ಕಾರ್ಯಕ್ರಮವನ್ನು ಕಲ್ಬುರ್ಗಿಯಲ್ಲಿ ನೆರವೇರಿಸಿ ಕೊಡಬೇಕು ಅಂದಾಗ ಈ ಪ್ರದೇಶ ಅಭಿವೃದ್ಧಿ ಕಾಣಲು ಸಾಧ್ಯ ಈಗ ನಾವು ತುರ್ತಾಗಿ ಮಾಡಬೇಕಾದ ಕೆಲಸವೆಂದರೆ ಕಲ್ಯಾಣ ಕರ್ನಾಟಕದ ಜನಪ್ರತಿನಿಧಿಗಳನ್ನು ಎಚ್ಚರಿಸುವುದು ಅವರ ಕೊರಳಿಗೆ ಗಂಟೆ ಕಟ್ಟುವರು ಯಾರು ಎಂಬ ಪ್ರಶ್ನೆ ಉದ್ಭವವಾಗುತ್ತಿದೆ ಕೇವಲ ಅವರು ಬೆಂಗಳೂರಿಗೆ ಹೋಗುವುದು ಮೀಟಿಂಗ್ ಅಟೆಂಡ್ ಮಾಡುವುದು ಸಂಭಾವನೆ ಪಡೆಯುವುದು ಮಾಡುತ್ತಿದ್ದಾರೆ ಅಭಿವೃದ್ಧಿ ಪರ ಚಿಂತನಗಾಗಿ ಒಂದು ಬಾರಿಯೂ ಎಲ್ಲ ಶಾಸಕರು ಪಕ್ಷಾತೀತವಾಗಿ ಸಭೆ ಸೇರಿ ಈ ಭಾಗದ ಸಮಸ್ಯೆಗಳಿಗೆ ಸ್ಪಂದಿಸುವುದಾಗಲಿ ಅಳಿವು ಉಳಿವಿನ ಬಗ್ಗೆ ಮಾತನಾಡುವುದಾಗಲಿ ಮಾಡದೆ ಇರುವುದು ದುರಂತದ ಸಂಗತಿಯಾಗಿದೆ ಮುಂದಿನ ದಿನಗಳಲ್ಲಿ ಈ ಪ್ರದೇಶದ ಶಾಸಕರು ಅಭಿವೃದ್ಧಿಪರ ಜನಪರ ಕೆಲಸ ಮಾಡದೆ ಇದ್ದರೆ ಜನರೇ ಇವರನ್ನು ದಂಡಿಸುವಂತಹ ಕೆಟ್ಟ ಪರಿಸ್ಥಿತಿ ನಿರ್ಮಾಣವಾದರೂ ಆಶ್ಚರ್ಯ ಪಡಬೇಕಾಗಿಲ್ಲ ಮುಂಚೆ ನಾವು ಕಲ್ಯಾಣ ಕರ್ನಾಟಕದ ಉಳುವಿಗಾಗಿ ಹೋರಾಟ ಮಾಡಲು ಸಾಹಿತಿಗಳು ಬುದ್ಧಿಜೀವಿಗಳು ಹೋರಾಟಗಾರರು ನಿವೃತ್ತ ಅಧಿಕಾರಿಗಳು ಶಿಕ್ಷಣ ತಜ್ಞರು ಚಿಂತಕರು ಎಲ್ಲರೂ ಸೇರಿ ನಮ್ಮ ಕಲ್ಯಾಣ ಕರ್ನಾಟಕದ ಎಲ್ಲ ಜಿಲ್ಲೆಯ ಉಸ್ತುವಾರಿ ಸಚಿವರುಗಳಿಗೆ ಮತ್ತು ಮುಖ್ಯಮಂತ್ರಿಗಳಿಗೆ ಅಮೂಲ್ಯವಾದ ಸಲಹೆಗಳನ್ನು ನೀಡಬೇಕಾಗಿದೆ ಅದಕ್ಕಾಗಿ ಒಂದು ಥಿಂಕ್ ಟ್ಯಾಂಕ್ ಸಂಸ್ಥೆಯನ್ನು ಹುಟ್ಟು ಹಾಕುತ್ತಿದ್ದೇವೆ ಈ ಸಂಸ್ಥೆಗೆ ಸದಸ್ಯರಾಗಲಿಚ್ಛಿಸುವ ಉತ್ಸಾಹಿ ಪದವೀಧರ ಸ್ನಾತಕೋತ್ತರ ಪದವೀಧರರು ಹಾಗೂ ಬುದ್ಧಿಜೀವಿಗಳು ಸದಸ್ಯರಾಗಬೇಕು ಈ ಹೋರಾಟಕ್ಕೆ ಎಲ್ಲ ರೀತಿಯ ಪ್ರೋತ್ಸಾಹ ದೊರೆತು ನಮ್ಮ ಉದ್ಧಾರ ನಮ್ಮಿಂದಲೇ ಆಗಬೇಕು ಯಾರೂ ನಮ್ಮನ್ನು ಉದ್ದರಿಸಲಾರರು ಎಂಬ ಭಾವನೆಯನ್ನು ತಂದುಕೊಂಡು ನಮ್ಮ ಉಳುವಿಗಾಗಿ ಮತ್ತು ನಮ್ಮ ಬೆಳವಣಿಗೆಗಾಗಿ ಈ ಸಂಸ್ಥೆಗೆ ತಾವು ಸದಸ್ಯರಾಗಬೇಕೆಂದು ವಿನಮ್ರವಾಗಿ ಪ್ರಾರ್ಥಿಸಿಕೊಳ್ಳುತ್ತೇನೆ ಹೆಚ್ಚಿನ ಮಾಹಿತಿಗಾಗಿ ೯೩೪೨೩೫೨೫೧೮ ಈ ಸಂಚಾರಿ ವಾಣಿಗೆ ಸಂಪರ್ಕಿಸಿ ಸದಸ್ಯತ್ವ ಪಡೆದುಕೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತೇನೆ ಪ್ರೊ.ಶಿವರಾಜ್ ಪಾಟೀಲ್ ಚಿಂತಕರು ಕಲ್ಬುರ್ಗಿ




