ದಯಾನಂದನಗರ ವಾರ್ಡ್ ನಲ್ಲಿ ಅಂಬೇಡ್ಕರ್ ಭವನ, ಅಂಬೇಡ್ಕರ್ ಪ್ರತಿಮೆ, ಅಂಬೇಡ್ಕರ್ ಪಾರ್ಕ್ ಉದ್ಘಾಟನೆ..

ದಯಾನಂದನಗರ ವಾರ್ಡ್ ನಲ್ಲಿ ಅಂಬೇಡ್ಕರ್ ಭವನ, ಅಂಬೇಡ್ಕರ್ ಪ್ರತಿಮೆ, ಅಂಬೇಡ್ಕರ್ ಪಾರ್ಕ್ ಉದ್ಘಾಟನೆ
ಧ್ವನಿ ಇಲ್ಲದವರಿಗೆ ಧ್ವನಿಯಾದರು, ಎಲ್ಲರು ಸಮಾನವಾಗಿ ಬದುಕಲು ಅರ್ಥಪೂರ್ಣ ಸಂವಿಧಾನ ಕೊಡುಗೆ-ಶಾಸಕ ಎಸ್.ಸುರೇಶ್ ಕುಮಾರ್
ರಾಜಾಜಿನಗರ ವಿಧಾನಸಭಾ ಕ್ಷೇತ್ರ: ದಯಾನಂದನಗರ ವಾರ್ಡ್-58ರಲ್ಲಿ
ಭಾರತರತ್ನ ,ಸಂವಿಧಾನ ಶಿಲ್ಪಿ ಡಾ||ಬಿ.ಆರ್.ಅಂಬೇಡ್ಕರ್ ರವರ 135ನೇ ಜನ್ಮದಿನಾಚರಣೆ ಪ್ರಯುಕ್ತ ಪ್ರಯುಕ್ತ ನವೀಕರಣಗೊಂಡ ಡಾ||ಬಿ.ಆರ್.ಅಂಬೇಡ್ಕರ್ ಉದ್ಯಾನವನ ಲೋಕರ್ಪಣೆ ಮತ್ತು ನೂತನವಾಗಿ ನಿರ್ಮಿಸಿರುವ ಡಾ||ಬಿ.ಆರ್.ಅಂಬೇಡ್ಕರ್ ಪ್ರತಿಮೆ ಉದ್ಘಾಟನೆ. ಡಾ||ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ಉದ್ಘಾಟನೆ ಸಮಾರಂಭ.
ಮಾಜಿ ಶಿಕ್ಷಣ ಸಚಿವರು, ಶಾಸಕರಾದ ಎಸ್.ಸುರೇಶ್ ಕುಮಾರ್ ಉದ್ಘಾಟನೆ ಮಾಡಿದರು. ಮಾಜಿ ಬಿಬಿಎಂಪಿ ಸದಸ್ಯರುಗಳಾದ ಎಂ.ಮುನಿರಾಜು, ಶ್ರೀಮತಿ ಶಕೀಲ ಮುನಿರಾಜುರವರು, ಮಂಡಲ ಬಿಜೆಪಿ ಕಾರ್ಯದರ್ಶಿ ಎಂ.ಎಸ್.ಸಂಜಯ್ ಕುಮಾರ್ ರವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಎಸ್.ಸುರೇಶ್ ಕುಮಾರ್ ರವರು ಮಾತನಾಡಿ ವಿಶ್ವದ ಅತಿಡೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತ ದೇಶಕ್ಕೆ ಸಂವಿಧಾನ ಎಂಬ ಪವಿತ್ರ ಗ್ರಂಥವನ್ನು ಭಾರತರತ್ನ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರು ಕೊಡುಗೆಯಾಗಿ ನೀಡಿದರು.
ಮದುವೆ ಸಮಾರಂಭಗಳಿಗೆ ಅತಿ ಹೆಚ್ಚು ವೆಚ್ಚವಾಗುವ ಕಲ್ಯಾಣ ಮಂಟಪದ ಬಾಡಿಗೆ ದರ ಬಡವರು, ಮಧ್ಯಮವರ್ಗದವರಿಗೆ ಹೊರೆಯಾಗಲಿದೆ ಅದ್ದರಿಂದ ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣ ಮಾಡಿ ಕಡಿಮೆ ವೆಚ್ಚ ಬಾಡಿಗೆಯಿಂದ ಸಭೆ, ಸಮಾರಂಭಗಳು ಮಾಡಲು ಸಾರ್ವಜನಿಕರಿಗೆ ಅನುಕೂಲವಾಗಲಿದೆ.
ಪ್ರಧಾನಿ ನರೇಂದ್ರಮೋದಿರವರು ಅಂಬೇಡ್ಕರ್ ರವರ ನಡೆದು ಬಂದ ಹಾದಿಯ ಪ್ರಮುಖ ಸ್ಥಳಗಳು,ಪರಿನಿರ್ಮಾಣ ಪುಣ್ಯಕ್ಷೇತ್ರಗಳನ್ನು ತೀರ್ಥಕ್ಷೇತ್ರವಾಗಿ ಮಾಡಿದ್ದಾರೆ.
ಧ್ವನಿ ಇಲ್ಲದವರಿಗೆ ಧ್ವನಿಯಾದರು, ಎಲ್ಲರ ಬಾಳಿಗೆ ಬೆಳಕಾದರು. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಾಬಾಳು ಸಾಗಲು ಅರ್ಥಪೂರ್ಣ ಸಂವಿಧಾನ ನೀಡಿದರು.
ಮಂಡಲ ಅಧ್ಯಕ್ಷ ಸುದರ್ಶನ್, ಬಿಜೆಪಿ ಮುಖಂಡರುಗಳಾದ ರಾಘವೇಂದ್ರರಾವ್, ಗಿರೀಶ್ ಗೌಡ, ಕಾಮಧೇನು ಸುರೇಶ್, ಗಂಗಾಧರ್ (ಗೂಳಿ) ರವರು ಸ್ಥಳೀಯ ಸಾರ್ವಜನಿಕರು ಪಾಲ್ಗೊಂಡಿದ್ದರು.





