ಸಂಪಾದಕೀಯ

ಕನಕಗಿರಿಯಾ ಪ್ರತಿ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು :

ಕನಕಗಿರಿಯಾ ಪ್ರತಿ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು :
ಅಯೋಧ್ಯೆಯ ರಾಮಲಾಲ್ಲ ಪ್ರಾಣ ಪ್ರತಿಷ್ಠಾಪನೆ ನಿಮ್ಮಿತ್ತ

ಕನಕಗಿರಿ ಕನಕಚಲಪತಿಯ ಹಾಗೂ ಸುತ್ತಮುತ್ತಲಿನ ಪ್ರತಿಯೊಂದು ಆಂಜನೇಯ ಸ್ವಾಮಿಗಳ ಹಾಗೂ ವಿವಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಕನಕಗಿರಿಯಲ್ಲಿ ಅಯೋಧ್ಯದ ರಾಮ ಲಾಲ ಪ್ರತಿಷ್ಠಾಪನೆ ಕುರಿತು ಕನಕಗಿರಿ ಪಟ್ಟಣದ ಆರಾಧ್ಯ ದೈವ ವಾದ ಎರಡನೇ ತಿರುಪತಿ ಎಂದು ಸುಪ್ರಸಿದ್ಧವಾದ ಕನಕಾಚಲಪತಿ ದೇವಸ್ಥಾನದಲ್ಲಿ ಇಂದು ಸರ್ಕಾರ ಆದೇಶದಂತೆ ವಿಶೇಷವಾಗಿ ಪೂಜೆಗಳನ್ನು ಸಲ್ಲಿಸಿ ಹನುಮಂತೋಸವ ಹಾಗೂ ಸೀತಾರಾಮ ಕಲ್ಯಾಣ ಮತ್ತು ಮತ್ತು ಭಕ್ತರಿಂದ ರಾಮ್ ಭಜನೆ ಹಮ್ಮಿಕೊಳ್ಳಲಾಗಿತ್ತು ಎಂದು ದೇವಸ್ಥಾನದ ಅರ್ಚಕರಾದ ಮಧುಸೂದನ್ ಅವರು ತಿಳಿಸಿದರು.

ನಂತರ ಕ್ಷೇತ್ರ ಪಾಲಕ ಆಗಿರುವ ಸಂಜೀವರಾಯ ಆಂಜನೇಯ ಹಾಗೂ ಕರಡಿ ಗುಡ್ಡದ ಆಂಜನೇಯ ಸ್ವಾಮಿಗೆ ಪಂಚಾಮೃತ ಅಭಿಷೇಕ ಪೂಜಾ ಅಲಂಕಾರ ಮಾಡಿ ದೇವಸ್ಥಾನದಲ್ಲಿ ರಾಮನಿಗೆ ಪ್ರಿಯವಾದ ನೈವೇದ್ಯಗಳ ಭೋಗಗಳನ್ನು ಅರ್ಪಿಸಿದ್ದೇವೆ ನಂತರ ಅದನ್ನು ಬಂದ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು ಎಂದು ಸಂಜೀವರಾಯ ದೇವಸ್ಥಾನದ ಅರ್ಚಕ ಪ್ರಾಣೇಶ್ ಪೂಜಾರಿ ಅವರು ತಿಳಿಸಿದರು.

ಈ ಸಮಯದಲ್ಲಿ ಕನಕಗಿರಿ ಆಡಳಿತ ಅಧಿಕಾರಿಗಳು ವಿಶ್ವನಾಥ್ ಮುರುಡಿ ಸಿದ್ದಲಿಂಗಯ್ಯ ಸ್ವಾಮಿ ದೇವಸ್ಥಾನದ ಕಮಿಟಿ ಭಜನಾ ಮಂಡಳಿ ಹಾಗೂ ಊರಿನ ಗುರು ಹಿರಿಯರು ಮತ್ತು ಸಹಸ್ರಾರು ಭಕ್ತರು ಪಾಲ್ಗೊಂಡು ಪೂಜಾ ಕಾರ್ಯಕ್ರಮ ದಲ್ಲಿ ದೇವರ ಕೃಪೆಗೆ ಪಾತ್ರರಾಗಿದ್ದರು.
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ.

Related Articles

Leave a Reply

Your email address will not be published. Required fields are marked *

Back to top button