ಸಂಪಾದಕೀಯ

ರಾಜನಕೋಳೂರು ಗ್ರಾಮ ಪಂಚಾಯಿತನಲ್ಲಿ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವದ ಕಾರ್ಯಕ್ರಮ

ಇಂದು ಗಣರಾಜ್ಯೋತ್ಸವದ ಅಂಗವಾಗಿ ಹುಣಸಗಿ ತಾಲೂಕಿನ ರಾಜನಕೋಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂರನೇ ತರಗತಿಯಲ್ಲಿ ವ್ಯಾಸ ಮಾಡುತ್ತಿರುವ ಕುಮಾರ್ ಸಮರ್ಥ ಶೇಖರ್ ಮುದುಗಲ್ ಎಂಬ ಮುದ್ದು ವಿದ್ಯಾರ್ಥಿ ಭಾರತ ದೇಶದ ಹಲವಾರು ಧರ್ಮಗಳು ಹಲವಾರು ಭಾಷೆಗಳು ಇದ್ದರೂ ಸಂವಿಧಾನವೇ ಶ್ರೇಷ್ಠ ನಮ್ಮ ಭಾರತ ದೇಶ ನಮ್ಮ ಪುಣ್ಯ ಭೂಮಿ ಎಂದು ಭಾರತ ದೇಶವನ್ನು ಸುಂದರವಾಗಿ ತನ್ನ ಪುಟ್ಟ ಪುಟ್ಟ ಮಾತುಗಳಿಂದ ವರ್ಣಿಸಿ ಜೊತೆಗೆ ಶ್ರೀ ರಾಮನ ಸ್ಮರಣೆ ಮಾಡಿ ಎಲ್ಲರ ಗಮನ ಸೆಳೆದು ಚಿನುಕುರಳಿಯಂತೆ ಚಟಪಟ ಮಾತನಾಡಿದ ಮುದ್ದು ವಿದ್ಯಾರ್ಥಿಗೆ ಊರಿನ ಹಿರಿಯರು ಶಾಲೆಯ ಗುರುಗಳು ವಿದ್ಯಾರ್ಥಿಯನ್ನು ಕುರಿತು ಹೆಮ್ಮೆಯ ವಿದ್ಯಾರ್ಥಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರಜಾಶ್ರೀ ಪತ್ರಿಕೆ ಜಿಲ್ಲಾ ವರದಿಗಾರರು
ಗುಂಡಪ್ಪ ಜೆ ಬೋಗಿ ಬೈಲಕುಂಟಿ ಯಾದಗಿರಿ

Related Articles

Leave a Reply

Your email address will not be published. Required fields are marked *

Back to top button