ಸಂಪಾದಕೀಯ

ಗಯಾ ರಾಮಾ-ಆಯಾರಾಮ, ಪಲ್ಟುರಾಮ ಜಗದೀಶ್ ಶೆಟ್ಟರ ಕಥೆ-ವ್ಯೆಥೆ.

ಗಯಾ ರಾಮಾ-ಆಯಾರಾಮ, ಪಲ್ಟುರಾಮ ಜಗದೀಶ್ ಶೆಟ್ಟರ ಕಥೆ-ವ್ಯೆಥೆ.

ಜಗದೀಶ್ ಶೆಟ್ಟರ
ಕಾಂಗೈನೊಂದಿಗಿನ 10 ತಿಂಗಳ ಹನಿಮೂನ್ Breakup ಆಗಿ ತವರಿಗೆ ವಾಪಿಸ್ಸಾಗಿದ್ದಾರೆ. ರಾಜಕೀಯದಲ್ಲಾಗಲೀ ನಿಜ ಜೀವನದಲ್ಲಾಗಲೀ ಅತೀ ಆಶೆ, ಅತೀಯಾದ ಅಧಿಕಾರದ ಮೋಹವಿದ್ದ ವ್ಯಕ್ತಿ ಚಂಚಲಿತನಾಗಿರುತ್ತಾನೆ. ಶೆಟ್ಟ್ರು ಹ್ಯಾಗೆಂದರೇ ” ಮಿಲೇತೋ ಮಾರಿ.‌ ನಹಿ ತೋ ಸದಾ ಬ್ರಹ್ಮಚಾರಿ ” ಎಂಬ ಸ್ವಭಾವದ ವ್ಯಕ್ತಿ. ರಾಜಕೀಯದಲ್ಲಿ ರಿಸ್ಕ ತೆಗೆದುಕೊಳ್ಳದೇ ಎಲ್ಲಾ ಥರಹದ ಅಧಿಕಾರವನ್ನು ಅನುಭವಿಸಿದಂತಹ ಅದೃಷ್ಟಶಾಲಿ, ಶಾಸಕರಾಗಿದ್ದು ಸಹ ಅದೃಷ್ಟವೇ ಸರಿ.‌ ಯಾಕೆಂದರೇ, ಹುಬ್ಬಳ್ಳಿ-ಧಾರವಾಡ ಲಿಂಗಾಯತ್ ಮತ್ತು ಅದರ ಹಲವಾರು ಪಂಗಡಗಳ ಬಹು ಸಂಖ್ಯೆ ಮತ್ತು ಮತದಾರರನ್ನು ಹೊಂದಿದಂಥಹ ಪ್ರದೇಶ, ಶೆಟ್ಟ್ರು ತಂದೆಯವರು ಬಹು ಕಾಲದಿಂದಲೂ ಆರ್.ಎಸ್.ಎಸ್. ಪ್ರೇಮಿ ಮತ್ತು‌ ಲಿಂಗಾಯತ್ ಕೋಮಿನ ಲೀಡರ್ ಅಗಿದ್ದವರು. ಆ ವೇಳೆಯಲ್ಲಿ ಶೆಟ್ಟರ್ ಲಾಯರ ಆಗಿ ಪ್ರಾಕ್ಟಿಸ ಮಾಡಲು ಶುರುವಿಟ್ಟುಕೊಂಡಾಗಲೇ ತಂದೆಯ ಪ್ರಭಾವದಿಂದ ರಾಜಕೀಯ ಸೆಳೆತ ಆರಂಭವಾಯಿತು. 1990ರಲ್ಲಿ ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರದ ಬಿ.ಜೆ.ಪಿ.‌ ಅಧ್ಯಕ್ಷ ರಾಗಿ ತಮ್ಮ‌ ರಾಜಕೀಯ ಜೀವನ ಆರಂಭಿಸಿದರು. 1994 ರಲ್ಲಿ ಧಾರವಾಡ ಜಿಲ್ಲಾ ಬಿ.ಜೆ.ಪಿ.‌ಅಧ್ಯಕ್ಷರಾಗಿ ಪಕ್ಷದಲ್ಲಿ ಕಾರ್ಯನಿರತರಾದರು. 1986 ರಲ್ಲಿ ಕರ್ನಾಟಕ ಬಿ.ಜೆ.ಪಿ ಪಕ್ಷದ ಕಾರ್ಯದರ್ಶಿಯಾಗಿ ರಾಜ್ಯಮಟ್ಟದಲ್ಲಿ ಕಾರ್ಯ ಆರಂಭಿಸಿದರು.

  1. ಎರಡನೇ ಬಾರಿ ಶಾಸಕರಾಗಿ, ಎಸ್.ಎಮ್.ಕೃಷ್ಣ ಅವರ ಮುಖ್ಯಮಂತ್ರಿ ಆಡಳಿತದಲ್ಲಿ
    ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿದ್ದರು.

2004 ಶೆಟ್ಟರ 3 ನೇ ಬಾರಿ ಶಾಸಕರಾಗಿದ್ದರು.

2005.‌ಕರ್ನಾಟಕ ರಾಜ್ಯ ಬಿ.ಜೆ.ಪಿ. ರಾಜ್ಯಧ್ಯಕ್ಷರಾಗಿದ್ದರು.

2006 ರಲ್ಲಿ ಬಿ.ಜೆ.ಪಿ ಮತ್ತು ಜೆ.ಡಿ.ಎಸ್.
ಸಮ್ಮೀಶ್ರ ಸರ್ಕಾರದಲ್ಲಿ ಕಂದಾಯ ಸಚಿವರಾಗಿದ್ದರು.

2008 ರಲ್ಲಿ ಸ್ಪೀಕರ ಆಗಿದ್ದರು. 2009 ರಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಸಚಿವರಾಗಿದ್ದರು.

2012.12 ಜುಲೈ ರಂದು ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಅವರು 8 ಮೇ, 2013 ರವರೆಗೆ ಆಡಳಿತ ನಡೆಯಿಸಿದರು

2018

ದಾಖಲೆಯ 6 ನೇ ಬಾರಿಗೆ ಕರ್ನಾಟಕ ವಿಧಾನಸಭೆಗೆ ಆಯ್ಕೆಯಾಗಿದ್ದರು.

26 ಆಗಸ್ಟ್ 2019 ರಂದು ಕರ್ನಾಟಕ ಸರ್ಕಾರದಲ್ಲಿ ಸಕ್ಕರೆ ಹೊರತುಪಡಿಸಿ ಬೃಹತ್ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳ ಸಚಿವರಾಗಿ ಆಡಳಿತ ನಡೆಯಿಸಿದರು.

2023 ರ ವಿಧಾನಸಭಾ ಚುನಾವಣೆ ಟಿಕೆಟ್ ನಿರಾಕರಿಸಿದ್ದರಿಂದ ಬಿ.ಜೆ.ಪಿ.ಯೊಂದಿಗೆ ಮುನಿಸಿಕೊಂಡ ಶೆಟ್ಟರ್ ಅವರು 16 ಏಪ್ರಿಲ್ 2023 ರಂದು ಶಾಸಕ ಸ್ಥಾನ ಮತ್ತು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು.
2023 ರ ಏಪ್ರಿಲ್ 17 ರಂದು ಕಾಂಗೈ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಮ್ಮುಖದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ಸೇರಿದರು.

2023 ರ ರಾಜ್ಯ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ, ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಮಹೇಶ ಟೆಂಗಿನಕಾಯಿ ವಿರುದ್ಧ ಸೋಲುಂಡರು.
ನಂತರ ಕಾಂಗೈ ಪಕ್ಷ ಇವರನ್ನು ಎಮ್.ಎಲ್.ಸಿ. ಆಗಿ ಆಯ್ಕೆ ಮಾಡಿ,ಮರ್ಯಾದೆಯಿಂದಲೇ ವಿಧಾನ ಪರಿಷತ್ತಿಗೆ ಕಳುಹಿಸಿದರು. ಕಾಂಗೈನಲ್ಲಿ ಸಚಿವ ಸ್ಥಾನ ಸಿಗಲಿಲ್ಲವೆಂಬ ಕಾರಣಕ್ಕೆ ಅಸಮಾಧಾನ ಹೊಂದಿದ್ದರು.
ಸ್ವಭಾವತ‌ ಸಂಭಾವಿತ ಸುಶಿಕ್ಷಿತ, ಮಿತಭಾಷಿಯಾಗಿರುವ ಶೆಟ್ಟರ್ಗೆ ರಾಜಕೀಯ ಗಿಮಿಕ್ ಗೊತ್ತು ಆದರೇ ಅವುಗಳನ್ನ ಉಪಯೋಗಿಸುವ ಪಟ್ಟು ಕರಗತ ಮಾಡಕೊಂಡವರಲ್ಲ. ಸುಮಾರು 30 ವರ್ಷಗಳಿಂದ‌ಲೂ ಬಿ.ಜೆ.ಪಿ.ಪಕ್ಷದೊಂದಿಗೆ ರಾಜಕೀಯದಲ್ಲಿ ಎಲ್ಲಾ‌ ಅಧಿಕಾರ ಸೌಲಭ್ಯ ಬಾಚಿಕೊಂಡ ವ್ಯಕ್ತಿ. ಅಧಿಕಾರವಿಲ್ಲದಿದ್ದರೇ ವಿಲಿ ವಿಲಿ ಒದ್ದಾಡಿದರು. ಉಚ್ಚ ಕುಲದ‌ ವ್ಯಕ್ತಿಯೊಬ್ಬ ಕೊನೆಗಾಲದಲ್ಲಿ ನೊಣ ತಿಂದು‌ ಕುಲ ಕೆಡಿಸಿಕೊಂಡ‌ ಎಂಬ ಗಾದೆಯಂತೆ ಇವರ ರಾಜಕೀಯ ಬದುಕು.

ಅದೇ ಕಾರಣಕ್ಕೆ ಇವರನ್ನು ಗಯಾ ರಾಮ- ಆಯಾ ರಾಮ. ಪಲ್ಟು ರಾಮ. ಎಂದು
ಸಾರ್ವಜನಿಕ ಸ್ಥಳಗಳಲ್ಲಿ ಜನ ನಗಾಡುತ್ತಾರೆ. ಮುಂದಿನ ಲೇಖನದಲ್ಲಿ ಇವರ ಉದ್ಧೇಶ ಯೋಜನೆ, ಯೋಚನೆ ಬಗ್ಗೆ ನೋಡಿ..

Related Articles

Leave a Reply

Your email address will not be published. Required fields are marked *

Back to top button