ಸಂಪಾದಕೀಯ
2023 – 2024 ನೇ ಸಾಲಿನ ರಾಜ್ಯಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ .. ಸ್ಪರ್ಧೆ.

2023 – 2024 ನೇ ಸಾಲಿನ ರಾಜ್ಯಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆಯು ತುಮಕೂರಿನಲ್ಲಿ ನಡೆದಿದ್ದು ಜನಪದ ಗೀತೆ ವಿಭಾಗದಲ್ಲಿ ಕರ್ನಾಟಕದ ಎಲ್ಲ ಜಿಲ್ಲೆಗಳಿಂದ ಒಟ್ಟು 35 ಸ್ಪರ್ಧಿಗಳು ಭಾಗವಹಿಸಿದ್ದು ಯಾದಗಿರಿ ಜಿಲ್ಲೆಯಿಂದ ಶ್ರೀಮತಿ ಶಿವಲೀಲಾ ಹಾದಿಮನಿ ಸಹ ಶಿಕ್ಷಕರು ಸ.ಮಾ.ಪ್ರಾ.ಶಾಲೆ ಕಾಮನಟಗಿ ತಾಲೂಕು ಹುಣಸಿಗಿ ಇವರು ತೃತೀಯ ಸ್ಥಾನ ಪಡೆದು ಗಿರಿಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಇವರ ಈ ಸಾಧನೆಗೆ DDPI ,BEO ಸಾಹೇಬರು ECO BRP, CRP, ಶಿಕ್ಷಕರ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಮತ್ತು ಶಾಲಾ ಮುಖ್ಯ ಗುರುಗಳು, ಸಿಬ್ಬಂದಿ ವರ್ಗ ಹಾಗೂ SDMC ಅಧ್ಯಕ್ಷರು ಸರ್ವ ಸದಸ್ಯರು ಮತ್ತು ವಿದ್ಯಾರ್ಥಿಗಳು ಹಾಗೂ ಸಾಹಿತ್ಯ ಬಳಗ, ಗುರು ಬಳಗ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.
[31/01, 3:55 pm] Repo. gundappa Hunasigi: ಗುಂಡಪ್ಪ ಜೆ ಬೋಗಿ ಬೈಲಕುಂಟಿ ಯಾದಗಿರಿ ಜಿಲ್ಲಾ ವರದಿಗಾರರು



