ತುರವಿಹಾಳ ಪೊಲೀಸ್ ಠಾಣೆಯಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಕುಂದು ಕೊರತೆಗಳ ಸಭೆ ಜರುಗಿತು.
ತುರವಿಹಾಳ ಪೊಲೀಸ್ ಠಾಣೆಯಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಕುಂದು ಕೊರತೆಗಳ ಸಭೆ ಜರುಗಿತು
ಈ ಸಭೆಯಲ್ಲಿ ಅಧ್ಯಕ್ಷತೆಯನ್ನು ವಹಿಸಿದ್ದ ಠಾಣಾಧಿಕಾರಿ ಸುಜಾತ.ಡಿ.ಎನ್ ಅವರು ಮಾತನಾಡಿ ನಿಮ್ಮ ಸಮಸ್ಯೆಗಳು ಏನೇ ಇದ್ದರೂ ನಮ್ಮ ಗಮನಕ್ಕೆ ತನ್ನಿ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುತ್ತೇವೆಂದು ಹೇಳಿದರು.
ನಂತರ ಮಾತನಾಡಿದ ಶಿವುಪುತ್ರಪ್ಪ ಪಟ್ಟಣದ ದಲಿತ ಮುಖಂಡ ಸಮಾಜದಲ್ಲಿ ಅಶಾಂತಿ ಕದಡುವಂತೆ ಮಟ್ಕಾ ಜುಜಾಟ ಇಸ್ಪೀಟು ಮಧ್ಯಪಾನ ಗಾಂಜಾ ಅತಿ ಹೆಚ್ಚು ಪಟ್ಟಣದಲ್ಲಿ ನಡೆಯುತ್ತಿದ್ದು ಈ ಅಕ್ರಮ ದಂದೆಗಳಲ್ಲಿ ಮಹಿಳೆಯರು ಕೂಡ ಭಾಗಿ ಆಗುತ್ತಿರುವುದು ಸೋಚನೆಯ
ಕೂಡಲೇ ಪಟ್ಟಣದಲ್ಲಿರುವ ಠಾಣೆಯ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಜರುಗಿಸಿ ಎಲ್ಲಾ ಅಕ್ರಮ ದಂಧೆಗಳನ್ನು ತಡೆಯಬೇಕು ಇಲ್ಲವಾದಲ್ಲಿ ಪಟ್ಟಣದಲ್ಲಿ ಶಾಂತಿ ನೆಮ್ಮದಿ ಹಾಳಾಗಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಕುಂಠಿತವಾಗಿ ನಾವು ದುರ್ಬಲರಾಗಿ ಉಳಿಯುವಂತ ಪರಿಸ್ಥಿತಿ ಬರುತ್ತದೆ ಇದಕ್ಕೆ ಕೂಡಲೇ ಕಡಿವಾಣ ಹಾಕಿ ಎಂದು ಮನವಿ ಮಾಡಿದರು.
ತದನಂತರ ಮಾತನಾಡಿದ ಕಲ್ಮಂಗಿ ಗ್ರಾಮದ ಮುಖಂಡ ಹುಸೇನಪ್ಪ ಅವರು ಮಾತನಾಡಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಜನತೆ ಕೆಟ್ಟ ಚಟಗಳಿಗೆ ಬಲಿಯಾಗಿ ಮನೆಯಲ್ಲಿರುವ ದವಸ ಧಾನ್ಯಗಳನ್ನು ಕೂಡ ಮಾರಿ ತಮ್ಮ ಚಟಗಳನ್ನು ತೀರಿಸಿಕೊಳ್ಳುತ್ತಾರೆ ಮತ್ತು ಬಲಿಯಾಗುತ್ತಿದ್ದಾರೆ ಕೂಡಲೇ ಠಾಣೆಯ ಅಧಿಕಾರಿಗಳು ಎಚ್ಚೆತ್ತುಕೊಂಡು ಎಲ್ಲಾ ಅಕ್ರಮ ದಂದೆಗಳಿಗೆ ಕಡಿವಾಣ ಹಾಕಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ತುರವಿಹಾಳ, ಕಲಮಂಗಿ ಚಿಕ್ಕಬೆರಗಿ ಹತ್ತಿಗುಡ್ಡ ಹಿರೇಬೇರ್ಗಿ ಇನ್ನೂ ಮುಂತಾದ ಗ್ರಾಮದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಮುಖಂಡರು ಭಾಗಿಯಾಗಿದ್ದರು.
ವರದಿ: ವಿಜಯ್ ಕುಮಾರ್ ಹಿರೇಮಠ್
ತುರುವಿಹಾಳ.




