ಮ್ಯಾನ್ ಕೈಂಡ್ ಫಾರ್ಮಾ ಬಾಲಕಿಯರು ಮತ್ತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಅಭಿಯಾನ ಹಮ್ಮಿಕೊಂಡಿತು
.
ಮ್ಯಾನ್ ಕೈಂಡ್ ಫಾರ್ಮಾ ಬಾಲಕಿಯರು ಮತ್ತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಅಭಿಯಾನ ಹಮ್ಮಿಕೊಂಡಿತು
ಇಂಡಿ ಪಟ್ಟಣದ ಶ್ರೀ ಸಾಯಿ ಪಬ್ಲಿಕ್ ಶಾಲೆಯಲ್ಲಿ ಮ್ಯಾನ್ ಕೈಂಡ್ ಫಾರ್ಮಾ ಮೂಲಕ ಆರೋಗ್ಯ ಜಾಗೃತಿ ಅಭಿಯಾನ ಆಯೋಜಿಸಲಾಗಿತ್ತು. ಈ ಅಭಿಯಾನದಲ್ಲಿ ಡಾ||ಮಯೂರಿ ಧನಶೆಟ್ಟಿ ಅವರು ಬಾಲಕಿಯರಿಗೆ ಕಿಶೋರಾವಸ್ಥೆಯಲ್ಲಿ ಅವರಲ್ಲಾಗುವ ಶಾರೀರಿಕ ಮತ್ತು ಮಾನಸಿಕ ಬದಲಾವಣೆಗಳ ಬಗ್ಗೆ ಅರಿವು ಮೂಡಿಸಿದರು. ಅವರು ಬಾಲಕಿಯರಿಗೆ ಸರಿಯಾದ ಆಹಾರ ಸೇವನೆ, ಮಾಸಿಕ ಋತು ಚಕ್ರದ ಬಗ್ಗೆ ಕೂಡಾ ತಿಳಿಯಪಡಿಸಿದರು. ಅಂದರೆ ಮಾಸಿಕ ಋತು ಚಕ್ರದ ಸಮಯದಲ್ಲಿ ನೈರ್ಮಲ್ಯ ಕುರಿತಂತೆ ಯಾವ ವಿಷಯಗಳ ಬಗ್ಗೆ ಜಾಗರೂಕತೆ ವಹಿಸಬೇಕು, ಸ್ವಚ್ಛತೆ ಕಾಪಾಡಿಕೊಳ್ಳುವುದು ಎಷ್ಟು ಅತ್ಯಗತ್ಯ, ಮತ್ತು ಮಾಸಿಕ ಋತು ಚಕ್ರ ಸಂಬಂಧಿತ ಸುಳ್ಳು ಮತ್ತು ತಪ್ಪು ಕಲ್ಪನೆಗಳಿಂದ ಹೇಗೆ ದೂರವಿರಬೇಕು ಇತ್ಯಾದಿ ಕುರಿತು ತಿಳುವಳಿಕೆ ಮೂಡಿಸಿದರು.
ಡಾ||ಮಯೂರಿ ಧನ ಶೆಟ್ಟಿ ಅವರು ಸ್ವಚ್ಛತೆಯ ಮಹತ್ವದ ಬಗ್ಗೆ ತಿಳಿಸಿದರು ಮತ್ತು ಯಾವುದೇ ರೀತಿಯ ತೊಂದರೆ ಅಥವಾ ಸಮಸ್ಯೆ ಕಂಡುಬಂದಲ್ಲಿ ಸಮೀಪದ ವೈದ್ಯರನ್ನು ಸಂಪರ್ಕಿಸಬೇಕೆಂದು ಮನವಿ ಮಾಡಿದರು
ವರದಿಗಾರರು
ಶ್ರೀ ಪಾಂಡುರಂಗ ಪೂಜಾರಿ
ಇಂಡಿ ತಾಲೂಕು ವರದಿಗಾರರು



