ದೇಶವಿದೇಶ

ಅಳಿವಿನ ಅಂಚಿನಲ್ಲಿ ಪತ್ರಿಕೋದ್ಯಮ. ಬೆಳವಣಿಗಾಗಿ ಅಲ್ಲ. ಉಳಿವಿಗಾಗಿ ಹೋರಾಟ.

ಅಳಿವಿನ ಅಂಚಿನಲ್ಲಿ ಪತ್ರಿಕೋದ್ಯಮ ಪ್ರೊ ಪಾಟೀಲ್ ಪತ್ರಿಕೋದ್ಯಮವು ಇಂದು ಬೆಳವಣಿಗಾಗಿ ಅಲ್ಲ ಉಳಿವಿಗಾಗಿ ಹೋರಾಟ ಮಾಡುವ ಕೆಟ್ಟ ಪರಿಸ್ಥಿತಿ ಬಂದಿದೆ ಓದುಗರು ಮುದ್ರಣ ಮಾಧ್ಯಮ ತಿರಸ್ಕರಿಸಿ ಡಿಜಿಟಲ್ ಮಾಧ್ಯಮವನ್ನು ಪುರಸ್ಕರಿಸುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ ಆಧುನಿಕ ಯುಗದಲ್ಲಿ ಡಿಜಿಟಲೀಕರಣ ಮಾಧ್ಯಮ ದಾಪುಗಾಲು ಹಾಕಿ ಚಂಡ ಮಾರುತದಂತೆ ಮುನ್ನಡೆಯುತ್ತಿದೆ ಸ್ಕ್ರೀನ್ ಟಚ್ ವ್ಯವಸ್ಥೆ ಪತ್ರಿಕಾ ಮಾಧ್ಯಮವನ್ನು ಹಿಂದಿಕ್ಕಿ ಪತ್ರಿಕೆ ಓದುದ ರಿಂದ ದೂರಾಗುವಂತೆ ಮತ್ತು ನಿರ್ಲಕ್ಷಿಸುವಂತೆ ಮಾಡುತ್ತಿದೆ ಇಂದು ಪತ್ರಿಕೆ ಓದುಗರ ಸಂಖ್ಯೆ ಕುಸಿದು ಮುದ್ರಣ ಮಾಧ್ಯಮ ಸೊರಗುತ್ತಿದೆ ಸಣ್ಣ ಮತ್ತು ಅತಿ ಸಣ್ಣ ಪತ್ರಿಕೆಗಳು ಸರಕಾರಿ ಜಾಹೀರಾತು ಎಂಬ ಆಕ್ಸಿಜನ್ ಮೂಲಕ ಬದುಕುತ್ತಿವೆ. ದೊಡ್ಡ ಪತ್ರಿಕೆಗಳು ಸರಕಾರ ಮತ್ತು ಸಾಹುಕಾರರ ಜಾಹೀರಾತು ನಂಬಿ ಬದುಕುತ್ತಿವೆ ಹೀಗಾಗಿ ಇವುಗಳಿಗೆ ಮುಂದಿನ ದಿನಗಳಲ್ಲಿ ಭವಿಷ್ಯವಿಲ್ಲ ಎಂದು ಭವಿಷ್ಯ ನುಡಿದರು ಅವು ಉಳ್ಳವರ ಪರವಾಗಿ ಬರೆಯುತ್ತಿವೆ ಜನಸಾಮಾನ್ಯರ ದನಿಯಾಗುತ್ತಿಲ್ಲ ಹೀಗಾಗಿ ಸ್ವಯಂಸವಾ ಸಮಾಧಿ ಮಾಡಿ ಕೊಳ್ಳುವತ್ತ ಮುನ್ನಡೆದಿವೆ ಮಾಧ್ಯಮ ಉದ್ಯಮಿಗಳ ಕೈಗೆ ಸಿಕ್ಕುನಲಗುತ್ತಿದೆ ಮಾಧ್ಯಮ ಉದ್ಯಮವಾಗಲೇ ಅದರ ಅವನತಿ ಪ್ರಾರಂಭವಾಗಿದೆ ಉದ್ಯಮಿಗಳು ಮಾಧ್ಯಮವನ್ನು ಕೈಗೆ ತೆಗೆದುಕೊಂಡಾಗ ಅದು ಬಂಡವಾಳಶಾಹಿಗಳ ಕೈಗೊಂಬೆ ಯಾಯಿತು ಹಣ ಹಾಕಿ ಹಣ ತೆಗೆಯುವ ಕೆಲಸ ಎಲ್ಲಿಯವರೆಗೆ ನಡೆಯುತ್ತದೆಯೋ ಅಲ್ಲಿಯವರೆಗೆ ಪತ್ರಿಕೆಗಳು ಜನಪ್ರಿಯ ವಾಗುವುದಿಲ್ಲ ಎಂದು ಪ್ರೊ ಶಿವರಾಜ್ ಪಾಟೀಲ್ ಹೇಳಿದರು ಅವರು ಶ್ರೀ ಸಿದ್ಧಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನ ಸಂಸ್ಥೆ ಏರ್ಪಡಿಸಿದ ಓದುಗರ ಅಂಗಳದಲ್ಲಿ ವಿಜಯವಾಣಿ ಎಂಬ ವಿಷಯ ಕುರಿತು ಏರ್ಪಡಿಸಿದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು ಪತ್ರಿಕೆಗಳಿಗೆ ವರದಿ ಬರೆಯಲಿಕ್ಕೆ ಬಾರದವರು ಹಿರಿಯ ಸಂಪಾದಕ ಮತ್ತು ಉಪ ಸಂಪಾದಕರು ಸ್ಥಾನಿಕ ಸಂಪಾದಕರು ಆಗುತ್ತಿರುವುದು ಪತ್ರಿಕಾ ಮಾಧ್ಯಮದ ದುರಂತವಾಗಿದೆ ಪತ್ರಿಕೆಗಳು ಎಡಿಟೋರಿಯಲ್ ಬರೆಯುವುದನ್ನು ಬಿಟ್ಟು ಅಡ್ವಟೂರಿಯಲ್ ಬರೆಯಲು ಹೊರಟಿದ್ದು ಅವುಗಳ ಅವನತಿಗೆ ಇನ್ನೊಂದು ಪ್ರಮುಖ ಕಾರಣವಾಗಿದೆ ಎಂದು ವಿಶ್ಲೇಷಿಸಿದರು ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು ಅವರನ್ನು ಆಲಕ್ಷಿಸಿ ಉಳ್ಳವರು ಆಳುವವರ ಪರವಾಗಿ ಬರೆಯಲು ಹೊರಟರೆ ಪತ್ರಿಕೆಗಳು ತಿರಸ್ಕಾರಕ್ಕೆ ಒಳಗಾಗುವುದರಲ್ಲಿ ಸಂದೀಹವಿಲ್ಲ ಎಂದು ಖಾರವಾಗಿ ನುಡಿದರು ಆಕಾಶವಾಣಿ ದೂರದರ್ಶನ ಮಾಜಿ ನಿರ್ದೇಶಕರಾದ ಎಂ ಬಿ ಪಾಟೀಲರು ಪ್ರಸ್ತುತ ಸಂದರ್ಭದಲ್ಲಿ ಸಮಸ್ಯೆ ಮತ್ತು ಸವಾಲುಗಳನ್ನು ಅರಿತುಕೊಂಡು ಬದಲಾಗುತ್ತಿರುವ ಡಿಜಿಟಲೀಕರ್ಣ ವ್ಯವಸ್ಥೆಯನ್ನು ಒಪ್ಪಿಕೊಂಡಾಗ ಮಾತ್ರ ನಾವು ವೇಗವಾಗಿ ಬೆಳೆಯಲು ಸಾಧ್ಯವೆಂದು ತಿಳಿಸಿದರು ಸಾಹಿತಿ ಡಾ. ಮೀನಾಕ್ಷಿ ಬಾಳಿಯವರು ಮಾತನಾಡಿ ಇಂದಿನ ತಲ್ಲಣಗಳು ಮತ್ತು ಸಮಸ್ಯೆಗಳ ಮೇಲೆ ಬೆಳಕು ಚೆಲುವಂತಹ ಲೇಖನಗಳು ಬರೆಯಬೇಕು ಮತ್ತು ಆಧುನಿಕರಣದ ಜಗತ್ತಿಗೆ ಮುಖ ಮಾಡಿ ಬೆಳೆಯದಿದ್ದರೆ ಮತ್ತೆ ನಾವು ಐವತ್ತು ವರ್ಷಗಳ ಕಾಲ ಹಿಂದೆ ಹೋಗುತ್ತೇವೆ ಎಂದು ಎಚ್ಚರಿಸಿದರು ಇಂದು ಇಪ್ಪತ್ತು ನಾಲ್ಕು ಗಂಟೆ ಕಾಯುವ ಅವಶ್ಯಕತೆ ಇಲ್ಲ ಕ್ಷಣಾರ್ಧದಲ್ಲಿ ಜಗತ್ತನ್ನು ವ್ಯಾಪಿಸುವ ಸುದ್ದಿ ಮಾಧ್ಯಮ ಡಿಜಿಟಲಿಕರಣ ಆಗಿರುವುದರಿಂದ ಸಾಮಾಜಿಕ ಜಾಲ ಸಂಸ್ಥೆಗಳು ಪ್ರಬಲವಾಗಿ ಬೆಳೆಯುತ್ತಿರುವುದರಿಂದ ಮುದ್ರಣ ಮಾಧ್ಯಮ ಕುಸಿಯುತ್ತಿರುವುದು ಸಹಜ ಎಂದು ವಿವರಿಸಿದರು ಪ್ರಕಾಶನದ ಮಾಲೀಕರಾದ ಬಸವರಾಜ್ ಕೊನೆಕ್ ಅವರು ಮಾತನಾಡಿ ಪತ್ರಿಕೆಗಳು ಓದುವುದರಿಂದ ಆಗುವ ಆನಂದ ಮೊಬೈಲ್ ಇ ಪತ್ರಿಕೆಗಳನ್ನು ಓದುವುದರಿಂದ ಸಿಗಲಾರದು ಇದರಲ್ಲಿರುವ ತೃಪ್ತಿಯೇ ಬೇರೆ ಜನರು ಪತ್ರಿಕೆ ಓದುವ ಅಭಿರುಚಿ ಬೆಳೆಸುವಂತೆ ಮಾಡಲು ಸರಕಾರ ಗ್ರಂಥಾಲಯಗಳಿಗೆ ಹೆಚ್ಚಿನ ಪತ್ರಿಕೆಗಳು ಸರಬರಾಜು ವಾಗುವಂತೆ ಮಾಡಬೇಕು ಮುತ್ತು ಪತ್ರಿಕಾ ಓದುಗರ ಸಂಖ್ಯೆ ಬೆಳೆಯುವುದಕ್ಕೆ ಯೋಜನೆಗಳನ್ನು ರೂಪಿಸಬೇಕೆಂದು ಮನವಿ ಮಾಡಿಕೊಂಡರು ಇಂದಿನ ಯುಗಮಾನದಲ್ಲಿ ಮಕ್ಕಳು ಸಹಿತ ಮೊಬೈಲ್ ಬಳಸುವುದರಿಂದ ಶ್ರೀಸಾಮಾನ್ಯರು ಫೋನ್ ಪೇ ಗಳಿಗೆ ಅವಲಂಬಿಸಿರುವುದರಿಂದ ಡಿಜಿಟಲ್ ಜನಪ್ರಿಯ ವಾಗುವುದು ಸಹಜ ಎಂದು ಸಾಹಿತಿ ಚಿ ಸಿ ನಿಂಗಣ್ಣ ಅಭಿಪ್ರಾಯ ಪಟ್ಟರು ಪುಸ್ತಕಗಳು ಮತ್ತು ಪತ್ರಿಕೆಗಳು ಓದುವ ಸಂಸ್ಕೃತಿಯನ್ನು ಪ್ರಯತ್ನಪೂರ್ವಕವಾಗಿ ಉಳಿಸಿಕೊಳ್ಳಬೇಕೆಂದು ಶರಣಬಸಪ್ಪ ವಡ್ಡನಕೇರಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು ಡಿಜಿಟಲ್ ವ್ಯವಸ್ಥೆಯನ್ನು ನಾವು ಅಳವಡಿಸಿಕೊಳ್ಳದಿದ್ದರೆ ಬೆಳೆಯುತ್ತಿರುವ ಜಗತ್ತನ್ನು ಅರಿತುಕೊಳ್ಳಲು ಕಷ್ಟವಾಗುತ್ತದೆ ಇಂದು ಬದಲಾಗುತ್ತಿರುವ ಜಗತ್ತಿಗೆ ನಾವು ಸ್ಪಂದಿಸದಿದ್ದರೆ ಹಿಂದೆ ಉಳಿಯುತ್ತೇವೆ ಅದನ್ನು ಬಳಸಿಕೊಂಡು ಬೆಳೆಯಬೇಕೆಂದು ಕಾವ್ಯಶ್ರೀ ಮಹಾಗಾ ವ್ಕರ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು ಈ ಕಾರ್ಯಕ್ರಮದಲ್ಲಿ ವಿಜಯವಾಣಿ ಪತ್ರಿಕೆಯ ಬಾಬುರಾವ್ ಯಡ್ರಾಮಿ ಪ್ರಾಸ್ತಾವಿಕ ಮಾತುಗಳನ್ನು ಆಡಿದರು ಜಯತೀರ್ಥ ಪಾಟೀಲ್ ರಮೇಶ್ ಬುಳ್ಳ ರಾಜಕುಮಾರ್ ಉದನೂರು ಉದನೂರು ಭಾಗವಹಿಸಿದ್ದರು ಅಲ್ಲವೇ ವಿಶ್ವನಾಥ್ ಬಕರೆ ಸಿ ಎಸ್ ಆನಂದ್ ಕಿರಣ ಪಾಟಿಲ್ ವಿನಯ್ ಗುತ್ತೇದಾರ್ ಅರುಣ ಗಡ್ಡದ ಸಂವಾದದಲ್ಲಿ ಭಾಗವಹಿಸಿದ್ದರು ಸಂವಾದದ ಕೊನೆಯಲ್ಲಿ ಮಾತನಾಡಿದ ಹಿರಿಯ ಸಾಹಿತಿ ಡಾ. ಸ್ವಾಮಿರಾವ್ ಕುಲಕರ್ಣಿ ಯಾವುದೇ ಹೊಸ ಮಾಧ್ಯಮ ಬಂದಾಗ ಜನ ಗಲಿಬಿಲಿಗೆ ಒಳಗಾಗುವದು ಸಹಜ ಮತ್ತೆ ಕ್ರಮೇಣ ಓದುವ ಸಂಸ್ಕೃತಿಯನ್ನು ಬೆಳೆಸಿ ಕೊಳ್ಳುತ್ತಾರೆ ಹೊಸದಾಗಿ ರುವುದರ ಕಡೆ ಆರಂಭದ ದಿನಗಳಲ್ಲಿ ಆಕರ್ಷಣೆ ಯಾಗುವುದು ಸಹಜ ಮುಂದಿನ ದಿನಮಾನಗಳಲ್ಲಿ ಪತ್ರಿಕಾ ಮಾಧ್ಯಮವು ಉಳಿದು ಬೆಳೆಯುತ್ತದೆ ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸಿದರು ಬೆರಳ ಮೇಲೆ ಏಣಿಸುವಷ್ಟು ಜನ ಮಾತ್ರ ಸಂವಾದದಲ್ಲಿ ಭಾಗವಹಿಸಿರುವುದು ನೋಡಿದರೆ ಪತ್ರಿಕಾ ಮಾಧ್ಯಮ ಕುಸಿಯುತ್ತಿರುವುದಕ್ಕೆ ಮುನ್ನುಡಿ ಬರೆದಂತಿತ್ತು ಸುದ್ದಿ. ಜೈ ಭೀಮ್ ಗದೆ ವಾರ್ತೆ ಕಲ್ಬುರ್ಗಿ

Related Articles

Leave a Reply

Your email address will not be published. Required fields are marked *

Back to top button