ಗುತ್ತಿಗೆ ಪದ್ಧತಿ ರದ್ದು ಮಾಡಿ ನೇರ ಪಾವತಿ/ ನೇರ ನೇಮಕಾತಿ ಮಾಡಬೇಕು ಇಲ್ಲ ಅನಿರ್ಧಿಷ್ಠಾವದಿ ಮುಷ್ಕರ ಮಾರ್ಚ್16- ಪಾವಗಡ ಶ್ರೀರಾಮುಲು

ಗುತ್ತಿಗೆ ಪದ್ಧತಿ ರದ್ದು ಮಾಡಿ ನೇರ ಪಾವತಿ/ ನೇರ ನೇಮಕಾತಿ ಮಾಡಬೇಕು ಇಲ್ಲ ಅನಿರ್ಧಿಷ್ಠಾವದಿ ಮುಷ್ಕರ ಮಾರ್ಚ್16- ಪಾವಗಡ ಶ್ರೀರಾಮುಲು
ಬೆಂಗಳೂರು . ನೀರು ಸರಬರಾಜು ನೌಕರರ ಗುತ್ತಿಗೆ ಪದ್ಧತಿ ರದ್ದು ಮಾಡಿ ನೇರ ಪಾವತಿ/ ನೇರ ನೇಮಕಾತಿ ಮಾಡಬೇಕು ಇಲ್ಲ ಎಂದರೆ
ಅನಿರ್ಧಿಷ್ಠಾವದಿ ಮುಷ್ಕರ – ಪಾವಗಡ ಶ್ರೀರಾಮುಲು ಅನಿರ್ಧಿಷ್ಠಾವದಿ ಮುಷ್ಕರ ನಡೆಸುವ ಕುರಿತು ಇಂದು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ತಿಳಿಸಿದರು.
ರಾಜ್ಯ ಸರ್ಕಾರ ಮುಂದಿನ ದಿನಗಳಲ್ಲಿ ಮಂಡಿಸಲಿರುವ ರಾಜ್ಯ ಬಜೆಟ್ ನಲ್ಲಿ ತಮ್ಮ ಬೇಡಿಕೆಗಳನ್ನು ಈಡೇರಿಸಬೇಕು, ಈಡೇರಿಸದಿದ್ದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಮಾರ್ಚ್ 16 ರಂದು ಅನಿರ್ಧಿಷ್ಟಾವಧಿ ಮುಷ್ಕರ ಕೈಗೊಳ್ಳುವ ಕುರಿತು ಪತ್ರಿಕಾ ಗೋಷ್ಠಿ ಏರ್ಪಡಿಸಿರುತ್ತಾರೆ.
ರಾಜ್ಯದ ಮಹಾನಗರ ಪಾಲಿಕೆ , ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹೊರಗುತ್ತಿಗೆ ಪೌರ ನೀರು ಸರಬರಾಜು ನೌಕರರ ಈ ಕೆಳಕಂಡ ಬೇಡಿಕೆಗಳನ್ನು ರಾಜ್ಯ ಸರ್ಕಾರ ಮುಂಬರುವ ಬಜೆಟ್ ನಲ್ಲಿ ಈಡೇರಿಸಬೇಕು, ಈ ನಮ್ಮ ಬೇಡಿಕೆಗಳ ಬಗ್ಗೆ ಹಲವಾರು ಬಾರಿ ಪ್ರತಿಭಟನೆ ನಡೆಸಿ ಮನವಿಗಳನ್ನು ನೀಡಿದ್ದರು, ನಮ್ಮ ಬೇಡಿಕೆಗಳು ಈಡೇರುವುದಿಲ್ಲ. ಆದ್ದರಿಂದ ರಾಜ್ಯ ಸರ್ಕಾರ ದಿನಾಂಕ 6.3.2026ರಂದು ಮಂಡಿಸಲಿರುವ ಬಜೆಟ್ ನಲ್ಲಿ ತಮ್ಮ ಬೇಡಿಕೆಗಳನ್ನ ಈಡೇರಿಸಬೇಕು. ಈಡೇರಿಸದಿದ್ದಲ್ಲಿ 10 ದಿನಗಳ ಕಾಲಾವಕಾಶ ನೀಡಿ, ಆಗಲೂ ಈಡೇರಿಸದಿದ್ದಲ್ಲಿ, ಮಾರ್ಕ್ 16 ರಂದು ನೀರು ಸರಭರಾಜನ್ನು ನಿಲ್ಲಿಸಿ ಫ್ರೀಡಂ ಪಾರ್ಕ್ ನಲ್ಲಿ ಸುಮಾರು 2500 ರಿಂದ 3000 ಜನ ಸೇರಿ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳುತ್ತೇವೆಂದು ತಿಳಿಸಿದ್ದು, ಆದಾಗ್ಯು ಸರ್ಕಾರ ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳಬೇಕಾಗುತ್ತದೆಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿರುತ್ತಾರೆ.
ಗುತ್ತಿಗೆ ಪದ್ಧತಿ ರದ್ದು ಮಾಡಿ ನೇರ ಪಾವತಿ/ ನೇರ ನೇಮಕಾತಿ ಮಾಡಬೇಕು. ನಿವೃತ್ತಿ ಅಥವಾ ಮರಣ ಹೊಂದಿದ ನಂತರ 10 ಲಕ್ಷ ರೂ ಹಿಡಿಯಗಂಟನ್ನು ನೀಡಬೇಕು.
ಶೀಘ್ರವೇ ಖಾಲಿ ಹುದ್ದೆಯನ್ನು ಭರ್ತಿ ಮಾಡಬೇಕು.
ಮಾನ್ಯ ಮುಖ್ಯಮಂತ್ರಿಗಳು ಕೂಡಲೇ ಹೊರಗುತ್ತಿಗೆ ಪೌರ ನೀರು ಸರಬರಾಜು ನೌಕರರ ಪ್ರತ್ಯೇಕ ಕಡತವನ್ನು ಆರ್ಥಿಕ ಇಲಾಖೆಗೆ ಕಳುಹಿಸಿ ನ್ಯಾಯ ಒದಗಿಸುವಂತೆ ಕ್ರಮವಹಿಸಬೇಕು. ಕರ್ನಾಟಕ ರಾಜ್ಯ ಪೌರ ನೀರು ಸರಬರಾಜು ನೌಕರರ ಮಹಾ ಸಂಘ (ರಿ) ವತಿಯಿಂದ ಸಂಸ್ಥಾಪಕ ಅಧ್ಯಕ್ಷರಾದ ಪಾವಗಡ ಶ್ರೀರಾಮ್ ಉಪಾಧ್ಯಕ್ಷರಾದ ಸತೀಶ್, ಮಂಜುನಾಥ್ ಡಿ ಆರ್, ಪುರುಷೋತ್ತಮ, ಕಿರಣ್ ಕುಮಾರ್ ಡಿ ಎನ್ ಮುಂತಾದವರು ಪತ್ರಿಕಾ ಗೋಷ್ಠಿ ಯಲ್ಲಿ ಉಪಸ್ಥಿತರಿದ್ದರು . ವರದಿ. ಮಂಜುಳಾ ರೆಡ್ಡಿ.



