ಸಂಪಾದಕೀಯ

ನಿವೃತ್ತಿ ನಂತರ ಸಿಕ್ಕ ಬೇಕಾಗಿರುವ ಸೌಲಭ್ಯಕ್ಕಾಗಿ 10 ವರ್ಷಗಳಿಂದ ಅಲೆದಾಡುತ್ತಿರುವ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಅಂಗನವಾಡಿ ಕಾರ್ಯಕರ್ತೆಯರು.

ಮನುಷ್ಯತ್ವ ಇಲ್ಲದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಅಧಿಕಾರಿಗಳು.

ನಿವೃತ್ತಿ ನಂತರ ಸಿಕ್ಕ ಬೇಕಾಗಿರುವ ಸೌಲಭ್ಯಕ್ಕಾಗಿ 10 ವರ್ಷಗಳಿಂದ ಅಲೆದಾಡುತ್ತಿರುವ ವಿಜಯನಗರ ಜಿಲ್ಲೆಯ ಅಂಗನವಾಡಿ ಕಾರ್ಯಕರ್ತೆಯರು.

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಸುಮಾರು 21 ಅಂಗನವಾಡಿ ಕಾರ್ಯಕರ್ತೆಯರು ವಯೋನಿವೃತ್ತಿ ಹೊಂದಿ 8 ವರ್ಷ, 10 ವರ್ಷ ಕಳೆದಿವೆ ಆದರೆ ಇವರ ದುರಾದೃಷ್ಟವೋ, ಜಡ್ಡುಗಟ್ಟಿದ ಆಡಳಿತದ ಪ್ರಭಾವವೋ ಅಥವಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ದಪ್ಪ ಚರ್ಮದ, ನಿರ್ಲಕ್ಷ ಅಧಿಕಾರಿಗಳ ಕಾಲಕ್ಷೇವೋ ಈ 21 ಅಂಗನವಾಡಿ ಕಾರ್ಯಕರ್ತೆಯರಿಗೆ ಗ್ರಾಚುಟಿ ಫಂಡ್. ಉಪಧನ. ಎನ್‌.ಪಿ.ಎಸ್. ಇನ್ನು ಹಲವಾರು ಇಲಾಖೆಯಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಸಂದಾಯವಾಗಬೇಕಾಗಿರುವ ತಲಾ 2 ವರೆಯಿಂದ 3 ಲಕ್ಷದವರೆಗೂ ಮಂಜೂರಿಯಾಗಬೇಕಾಗಿರುವ ಹಣ, 8 ರಿಂದ 10 ವರ್ಷ ಕಳೆದಿದ್ದರೂ ಇಂದಿನವರೆಗೂ ಕಾರ್ಯಕರ್ತೆಯರಿಗೆ ಸಂದಾಯವಾಗದೆ ವರ್ಷಾನುಗಟ್ಟಲೆ ಕಾರ್ಯಾಲಯಕ್ಕೆ ಅಲೆದು ಅಲೆದು ಸುಸ್ತಾಗಿದ್ದಾರೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವಿಜಯನಗರ ಜಿಲ್ಲಾ ಅಧಿಕಾರಿಗಳು , ಸಂಬಂಧಿಸಿದ ಇಲಾಖೆಯ ಮುಖ್ಯಸ್ಥರಿಗೆ ಮನವಿ ಪತ್ರ ಸಲ್ಲಿಸಿದ್ದೇ ಆಗಿದೆ ವಿನಃ ಪರಿಣಾಮ ಶೂನ್ಯ. ಅಧಿಕಾರಿಗಳಿಗೆ ಇಡಿ ಶಾಪ ಹಾಕುತ್ತಾ ತಮ್ಮ ಇಳಿ ವಯಸ್ಸಿನಲ್ಲಿ ತುಂಬಾ ಕಷ್ಟ ಪಡುತ್ತಿದ್ದಾರೆ.

21 ಅಂಗನವಾಡಿ ಕಾರ್ಯಕರ್ತೆಯರಲ್ಲಿ ಕೆಲ ಕಾರ್ಯಕರ್ತರು ವಯೋಸಹಜ ಕಾಯಿಲೆಯಿಂದ ನರಳುತ್ತಿದ್ದಾರೆ. ಔಷಧಿ ಖರೀದಿಸಲು ದುಡ್ಡಿಲ್ಲದೆ ಪರಿತಪಿಸುತ್ತಿದ್ದಾರೆ. ಈ ಕಾರ್ಯಕರ್ತೆಯರಲ್ಲಿ ಒಬ್ಬರು ಕ್ಯಾನ್ಸರ್ ಎಂಬ ಮಹಾಮಾರಿ ರೋಗಕ್ಕೆ ತುತ್ತಾಗಿ ಇಹಲೋಕ ತ್ಯಜಿಸಿದ್ದಾರೆ ಅವರ ಎರಡು ಗಂಡು ಮಕ್ಕಳು ದಿಕ್ಕು ದಿಸೆಯಿಲ್ಲದೆ ಅನಾಥರಾಗಿದ್ದಾರೆ.

ಕೆಲವು ಕಾರ್ಯಕರ್ತರು ಬಿ.ಪಿ. ಶುಗರ್, ಥೈರಾಯ್ಡ್, ಹಲವಾರು ರೋಗಗಳಿಂದ ಬಳಲುತ್ತಿದ್ದು ತಿಂಗಳಿಗೆ 3 ರಿಂದ 5000 ಔಷಧಿ ಖರ್ಚಿಗೆ ದುಡ್ಡು ಇಲ್ಲದೆ ಕುಟುಂಬದ ಕಡುಬಡತನದಲ್ಲಿ ಅತಂತ್ರರಾಗಿದ್ದಾರೆ. ನರಳುತ್ತಿದ್ದಾರೆ.

21 ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆ, ತೊಂದರೆ, ಹದಗೆಟ್ಟ ಆರ್ಥಿಕ ಪರಿಸ್ಥಿತಿ ಯಾವ ವೈರಿಗೂ ಬರಬಾರದು ಎಂದು ಇವರನ್ನು ಸಮೀಪದಿಂದ ಕಂಡ ಜನರು ಮಮ್ಮಲ ಮರುಗುತ್ತಿದ್ದಾರೆ.

ಈ ಅಂಗನವಾಡಿ ಕಾರ್ಯಕರ್ತೆಯರು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ತಮ್ಮ ಸಮಸ್ಯೆಯನ್ನು ಹೇಳಿಕೊಂಡಾಗ ಉಡಾಫೆ ಮಾತಾಡುವುದು, ” ನಿಮಗೆ ಬರಬೇಕಾಗಿರುವ ಹಣ ನಿಮಗೆ ಸಿಕ್ಕದಿದ್ದರೂ ನಿಮ್ಮ ಮಕ್ಕಳಿಗೆ, ಮೊಮ್ಮಕ್ಕಳಿಗೆ ಸಿಕ್ಕುತ್ತದೆ ಹೋಗಿ ಹೋಗಿ” ಎಂದು ದುರಹಂಕಾರದ ಮಾತಾಡುತ್ತಿದ್ದಾರೆ.

ಈ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಕಾರ್ಯಾವಧಿಯಲ್ಲಿ ಹಲವಾರು ಚುನಾವಣೆಗಳಲ್ಲಿ ದುಡಿದಿದ್ದಾರೆ. ಸೆನ್ಸಸ್ ನಡೆಸಿದ್ದಾರೆ, ಮತದಾರರ ಪಟ್ಟಿ ತಯಾರಿಸಿದ್ದಾರೆ. ಭಾಗ್ಯಲಕ್ಷ್ಮಿ ಬಾಂಡ್ ವಿತರಣೆ ಮಾಡಿದ್ದಾರೆ. ಜನನ ಮತ್ತು ಮರಣ ಕಾರ್ಯ ನಡೆಯಿಸಿದ್ದಾರೆ. ಇನ್ನೂ ಹಲವಾರು ತರಹದ ಸರಕಾರ ನಿಗದಿ ಪಡಿಸಿದ ಕೆಲಸಗಳೆಲ್ಲವನ್ನು ಮಾಡಿ ಇಂದು ಅನಾಥರಾಗಿ ಬರೀ ಕೈಯಿಂದ ಬೀದಿಗೆ ಬಿದ್ದಿದ್ದಾರೆ.

ಈ ಅಂಗನವಾಡಿ ಕಾರ್ಯಕರ್ತೆಯರ ದುರದೃಷ್ಟ ಅದೆಷ್ಟು ಕೆಟ್ಟದಾಗಿದೆ ಎಂದರೇ, ಇವರು ರೇಷನ್ ಕಾರ್ಡ್ ಪಡೆದುಕೊಳ್ಳುವ ಸೌಲಭ್ಯದಿಂದಲೂ ವಂಚಿತರಾಗಿದ್ದಾರೆ. ರೇಷನ್ ಕಾರ್ಡ್ ಇಲ್ಲದ ಕಾರಣ ಸರಕಾರದಿಂದ ಸಿಕ್ಕುವ ಹಲವಾರು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಗೃಹಲಕ್ಷ್ಮಿ ಕಾರ್ಡ್ ಪಡೆದುಕೊಳ್ಳಲಾರದೆ ಗೋಳಾಡುತ್ತಿದ್ದಾರೆ. ವೃಧ್ಯಪ್ಯಾ ವೇತನ, ಸಂಧ್ಯಾ ಸುರಕ್ಷತೆ, ಕೆಲವರಿಗೆ ವಿಧವಾ ವೇತನ, ಈ ಸೌಲಭ್ಯಗಳಿಂದಲೂ ಇವರು ವಂಚಿತರಾಗಿದ್ದಾರೆ.

ಈ ಎಲ್ಲಾ ವಿಷಯಗಳು ಕಾರ್ಯಕರ್ತೆಯರ ಮಾರಣಾಂತಿಕ ಸಮಸ್ಯೆಗಳನ್ನು ದಿನ ಬೆಳಗಾದರೆ ಕಣ್ಣಾರೆ ನೋಡುವ ಸಮೀಪದಿಂದ ಅರಿತುಕೊಂಡಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಸಿ.ಡಿ.ಪಿ.ಓ. ಗಳು ಮನುಷ್ಯತ್ವ ಮಾನವೀಯತೆಯನ್ನೇ ಮರೆತಿದ್ದಾರೆ. ತಮ್ಮ ಅಧಿಕಾರದ ಪರಿಧಿಯಲ್ಲಿ ಮಾಡಲೇಬೇಕಾಗಿರುವ ಈ ಕಾರ್ಯಕರ್ತೆಯರ ನ್ಯಾಯಬದ್ಧ ಕೆಲಸವನ್ನು ಮಾಡದೆ ಸಬೂಬ್ ಹೇಳುತ್ತಾ ಎಂಟರಿಂದ ಹತ್ತು ವರ್ಷ ಕಳೆದಿದ್ದಾರೆ .

21 ಜನ ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆಗಳನ್ನು ಒಂದು ತಿಂಗಳ ಒಳಗಾಗಿ ಪರಿಹರಿಸದಿದ್ದರೆ. ಸಂಬಂಧಿಸಿದ ಹಿರಿಯ ಕಿರಿಯ ಅಧಿಕಾರಿಗಳ ವಿರುದ್ಧ, ನಿರ್ಲಕ್ಷ, ಸೋಮಾರಿತನ, ಕರ್ತವಲೋಪ, ಅಜಾಗರೂಕತೆ, ಕಾರಣಕ್ಕಾಗಿ ಕರ್ನಾಟಕ ಲೋಕಾಯುಕ್ತ ಕಾರ್ಯಾಲಯದಲ್ಲಿ ದಾವೆ ಹೂಡಬೇಕಾಗುತ್ತದೆ.

ಈ ವಿಷಯ ಯಾರಿಗೂ ಹೆದರಿಸುವುದಾಗಲಿ ಆಟಾಟೋಪಕ್ಕಾಗಲಿ ಬರೆದುಕೊಂಡಿದ್ದಲ್ಲ. ಮುಂದಿನ ದಿನಗಳಲ್ಲಿ ಕಾನೂನು ಬದ್ಧವಾಗಿ ಕಾನೂನು ಹೋರಾಟ ಮಾಡಲೇಬೇಕಾಗುತ್ತದೆ

Related Articles

Leave a Reply

Your email address will not be published. Required fields are marked *

Back to top button