ಸಂಪಾದಕೀಯ

ಮುಗ್ಧ ಮಗುವಿನ ಮನವಿಗೆ ಸ್ಪಂದಿಸಿದ ದೇವದುರ್ಗ ಶಾಸಕಿ ಕರಿಯಮ್ಮ ಜಿ ನಾಯಕ್.

ಮುಗ್ಧ ಮಗುವಿನ ಮನವಿಗೆ ಸ್ಪಂದಿಸಿದ ದೇವದುರ್ಗ ಶಾಸಕಿ ಕರಿಯಮ್ಮ ಜಿ ನಾಯಕ್.

ಅಂಜಳ ಗ್ರಾಮದಲ್ಲಿ ಹೈಟೆಕ್ ಸರ್ಕಾರಿ ಶಾಲೆ ನಿರ್ಮಾಣ ಮತ್ತು ಉದ್ಘಾಟನೆ.

2023 ನೇ ವರ್ಷದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದ ಶ್ರೀಮತಿ ಕರೆಮ್ಮ ಜಿ ನಾಯಕ ಅವರು ಚುನಾವಣಾ ಪ್ರಚಾರಕ್ಕಾಗಿ ದೇವದುರ್ಗ ತಾಲೂಕಿನ ಅಂಜಳ್ ಗ್ರಾಮಕ್ಕೆ ಹೋಗಿದ್ದರು. , ಅಂಜಳ ಗ್ರಾಮದಲ್ಲಿ ಸಾರ್ವಜನಿಕ ಚುನಾವಣಾ ರ್ಯಾಲಿ ನಡೆಯುತ್ತಿದ್ದ ವೇಳೆಯಲ್ಲಿ ಒಂದು ಮಗು ಶಾಸಕಿ ಕರೆಮ್ಮ ಜಿ ನಾಯಕ ಅವರ ಹತ್ತಿರ ಬಂದು ತಾನು ಉಳಿತಾಯ ಮಾಡಿದ ಹಣವನ್ನು ಚಿಕ್ಕ ಡಬ್ಬಿಯಲ್ಲಿ ತುಂಬಿಕೊಂಡು ಬಂದಿತ್ತು . ಕರೆಮ್ಮ ಅವರನ್ನು ನೇರವಾಗಿ ಭೇಟಿಯಾದ ಮಗು ಆ ಡಬ್ಬಿಯಲ್ಲಿದ್ದ ಚಿಲ್ಲರೆ ಕಾಸನ್ನು ಶಾಸಕಿ ಕರೆಮ್ಮ ಅವರಿಗೆ ಕೊಡುತ್ತಾ ” ನನ್ನ ಗ್ರಾಮ. ಅಂಜಳ ಗ್ರಾಮದಲ್ಲಿ ಒಂದು ಶಾಲೆ ನಿರ್ಮಾಣ ಮಾಡಿಕೊಡಿ ಎಂದು ಮಗು ಡಬ್ಬಿಯಲ್ಲಿದ್ದ ಚಿಲ್ಲರೆ ಕಾಶೆಲ್ಲವನ್ನು ಕೊಟ್ಟು ಕರೆಮ್ಮ ಅವರಲ್ಲಿ ಮನವಿ ಮಾಡಿಕೊಂಡಿತ್ತು “

ಮಗುವಿನ ಮನವಿ ಮತ್ತು ಚಿಲ್ಲರೆ ಕಾಸಿನ ಡಬ್ಬಿ ಪಡೆದುಕೊಂಡ ಶಾಸಕಿ ಕರೆಮ್ಮ ಅವರು ಅಂದು ಗಳಗಳನೆ ಅಳುತ್ತಾ ನಾನು ಶಾಸಕಿಯಾಗಿ ಆಯ್ಕೆಯಾಗಿ ಬಂದರೆ ಅಂಜಳ ಗ್ರಾಮಕ್ಕೆ ಹೈಟೆಕ್ ಸ್ಕೂಲ್ ನಿರ್ಮಾಣ ಮಾಡಿಕೊಡುತ್ತೇನೆಂದು ಅಂದೇ ಮಗುವಿನ ಎದುರು ರ್ಯಾಲಿಯಲ್ಲಿ ಪಾಲ್ಗೊಂಡಿತ್ತ ಸಾರ್ವಜನಿಕರೆದುರು ವಾಗ್ದಾನ ಮಾಡಿದ್ದರು.

ಅದರಂತೆ ಕಳೆದ ವಾರ ಶಾಸಕಿ ಕರೆಮ್ಮಾಜಿ ನಾಯಕ ಅವರು ಅಂಜಳ್ ಗ್ರಾಮದಲ್ಲಿ ಹೈಟೆಕ್ ಸರ್ಕಾರಿ ಶಾಲೆ ನಿರ್ಮಾಣ ಮಾಡಿ ಆ ಶಾಲೆಯ ಉದ್ಘಾಟನೆಯನ್ನು ಕೂಡ ಮಾಡಿದರು ಜೊತೆಗೆ ಆ ಮಗುವನ್ನು ಕರೆದು ಸನ್ಮಾನ ಕೂಡ ಮಾಡಿ ತಾವು ಮಗುವಿಗೆ ಕೊಟ್ಟ ವಾಗ್ದಾನದಂತೆ ತಮ್ಮ ಕರ್ತವ್ಯ ನಿರ್ವಹಿಸಿದ್ದೇನೆ ಎಂದು ಸಾರ್ವಜನಿಕ ಸಭೆಯಲ್ಲಿ ಆತ್ಮ ತೃಪ್ತಿಯಿಂದ ಹೇಳಿಕೊಂಡಾಗ ಶಾಸಕೀಯ ಕಣ್ಣಾಲೆಯಲ್ಲಿ ನೀರು ತುಂಬಿಕೊಂಡಿತ್ತು.

Related Articles

Leave a Reply

Your email address will not be published. Required fields are marked *

Back to top button