ಸಂಪಾದಕೀಯ

ಸುಟ್ಟ ಹಣೆಯ ಪಟ್ಟಿ ಮೇಲಿರುವ ರೇಖೆಯೇ ಹಣೆ ಬರಹ.ಶ್ರೀಮತಿ ಅಮರಾವತಿ ಹಿರೇಮಠ 🙏

🙏 ಸುಟ್ಟ ಹಣೆಯ ಪಟ್ಟಿ ಮೇಲಿರುವ ರೇಖೆಯೇ ಹಣೆ ಬರಹ 🙏

ಮನುಷ್ಯನ ಜೀವನದ ಪಯಣ ತಾನು ಅನ್ಕೊಂಡು ಹಾಗೆ ಇರುವುದಿಲ್ಲ. ಏಕೆಂದರೆ
ತಾನು ಹುಟ್ಟುವಾಗಲೇ ಏನೇನು ಪಡಕೊಂಡು ಬರಬೇಕು ಹಾಗೆ ಹೊತ್ತು ಕೊಂಡು ಬರುತ್ತಾನೆ. ಹೊತ್ತು ಕೊಂಡು ಬಂದ ಧರ್ಮ ಕರ್ಮದ ಫಲವನ್ನು ಹಣೆ ಬರಹ ಎನ್ನುವುದು . ಈ ಹಣೆ ಬರಹ ಬರೆಯುವುದು ಬ್ರಹ್ಮ . ಬ್ರಹ್ಮ ಲಿಖಿತವನ್ನು ಶೆಟವಿ ಓದಿ ಹೋಗುತ್ತಾಳೆ ಎಂದು ನಮ್ಮ ಪೂರ್ವಜರಿಂದ ತಿಳಿದಿದ್ದು.
ಆದರೆ ಒಂದು ಸಲ ಬರೆದ ಬ್ರಹ್ಮ ಲಿಖಿತ ಆ ಬ್ರಹ್ಮನಿಂದಲೂ ಅಳಿಸಲು ಸಾಧ್ಯವಿಲ್ಲ. ಜೀವನದಲ್ಲಿ ನಡೆಯುವುದೆಲ್ಲವೂ ವಿಧಿಯಾಟ . ಈ ವಿಧಿ ಆಟವೇ ಹಣೆ ಬರಹ.ಈ ಹಣೆ ಬರಹ ನೋಡಿದವರು ಯಾರೂ ಇಲ್ಲ.
ಆದರೆ ಸತ್ತ ಹೆಣವನ್ನು ಸುಟ್ಟ ಹಣೆಯ ಮೇಲಿನ ಪಟ್ಟಿಯಲ್ಲಿ ಬ್ರಹ್ಮ ಲಿಖಿತ ಇದೆ ಎಂದು ಕಂಡು ಹಿಡಿದ ತಾಯಿ ಲಕ್ಷ್ಮಮ್ಮಮ .

ದಿನ ನಿತ್ಯವೂ ಎರಡು ಮೂರು ಶವವನ್ನು ಸುಡುತ್ತಾರೆ. ಆ ಶವ ಸಂಸ್ಕಾರದಲ್ಲಿ ಭಾಗಿಯಾಗಿದ್ದ ಜನರೆಲ್ಲರೂ ಹೊರಟು ಹೋಗುತ್ತಾರೆ . ತದ ನಂತರ ಅಲ್ಲಿ ಇರುವುದು ಲಕ್ಷಮ್ಮಮ ತಾಯಿ ಒಬ್ಬರೇ . ಮತ್ತೆ ಮರು ದಿವಸ ಬಂದು ಶವದ ಅಸ್ಥಿಪಂಜರವನ್ನು ತೆಗೆದು ಕೊಂಡು ಹೋಗುತ್ತಾರೆ. ಆಗ ಅವುಗಳನ್ನು ಆಯ್ದು ಮಡಿಕೆ ಒಳಗೆ ತುಂಬಿ ಕೊಡುವುದು ತಾಯಿ ಲಕ್ಷ್ಮಮ್ಮಮ ಅವರು . ಹೀಗಾಗಿ ದಿನ ನಿತ್ಯವೂ ಶವವನ್ನು ಸುಟ್ಟ ಆಸ್ಥಿಯ ಹಣೆಪಟ್ಟಿ ನೋಡಿ ನೋಡಿ ಅವುಗಳನ್ನು ಒಂದೆಡೆ ಸೇರಿಸಿ ಇಟ್ಟಿದ್ದಾರೆ. ಒಂದೆಡೆ ಆಶ್ಚರ್ಯಕರ ಸಂಗತಿ. ಆದರೆ ಇದು ನಿಜವಾದದ್ದು .ಅವರ ಕಾಯಕ ತುಂಬಾ ಶಾಘ್ನೀಯವಾದದ್ದು .
ಅರವತ್ತು ವಸಂತಗಳು ದಾಟಿರುವ ತಾಯಿ ಲಕ್ಷ್ಮಮ್ಮಮ ತುಂಬಾ ಧೈರ್ಯವಂತರು. ಯಾವ ಭಯವಿಲ್ಲದೆ ನಿರಂತರವಾಗಿ ಶವಗಳ ಜೊತೆಗೆ ಜೀವನ ಕಳೆಯುತ್ತಿದ್ದಾರೆ.

ಸುಮಾರು ಅರವತ್ತು ವಯಸ್ಸಿನ ಲಕ್ಷಮ್ಮಮ ದೊಡ್ಡ ಬಳ್ಳಾಪುರದವರು ಇರಬಹುದು. ದೊಡ್ಡ ಬಳ್ಳಾಪುರದಿಂದ ಮೂರು ಕಿಲೋಮೀಟರ್ ದೂರದಲ್ಲಿ ಇರುವ ಮುಕ್ತಿಧಾಮ .
2001 ರಲ್ಲಿ ಪ್ರಾರಂಭ ಆಗಿದ್ದ
ಮುಕ್ತಿದಾಮದಲ್ಲಿ ಇದುವರೆಗೆ ಹತ್ತು ಸಾವಿರ ಶವಗಳಿಗೆ ಮುಕ್ತಿ ನೀಡಿದ ಲಕ್ಷಮ್ಮಮ.ಪತಿ ಉಮಾಶಂಕರ್ ಮಾಡುತ್ತಿದ್ದ ಈ ಕಾಯಕ ಅವರು ಲಿಂಗೈಕ್ಯರಾದ ಮೇಲೆ ಲಕ್ಷಮ್ಮಮ ನಡೆಸಿ ಕೊಂಡು ಬಂದಿದ್ದಾರೆ.ದಿನಕ್ಕೆ ಎರಡು ಮೂರು ಶವವನ್ನು ಸುಡುತ್ತಾರೆ . ಕೊರೊನಾ ಸಮಯದಲ್ಲಿ ದಿನಕ್ಕೆ ಏಳರಿಂದ ಹತ್ತು ಶವಗಳಿಗೆ ತಾವೇ ಮುಂದೆ ನಿಂತು ವಿಧಿ ವಿಧಾನದೊಂದಿಗೆ ಶವ ಸಂಸ್ಕಾರ ಮಾಡಿದ್ದಾರೆ.
ಪ್ರತಿ ನಿತ್ಯವೂ ಶವಗಳ ಜೊತೆಗೆ ಜೀವನ ಕಳೆಯುತ್ತಿದ್ದಾರೆ .

ಮಾಗಿದ ಕಾಯವಾದರೂ ಕಾಯಕಕ್ಕೆ ಮುಪ್ಪು ಇಲ್ಲವೆಂಬಂತೆ ನಿರಂತರವಾಗಿ ಶವಗಳಿಗೆ ಬೆಂಕಿ ಇಟ್ಟು ಶವ ಬೆಂದು ಹೋಗುವ ತನಕ ಅಲ್ಲಿಯೇ ಕುಡುತ್ತಾರೆ.ಇದುವರೆಗೆ ಏನಿಲ್ಲವೆಂದರೂ ಹತ್ತು ಸಾವಿರಕ್ಕೂ ಅಧಿಕ ಶವಗಳನ್ನು ಸುಟ್ಟಿದ್ದಾರೆ.
ಸ್ಮಶಾನ ಅಂದ್ರೆ ಭಯ ಪಡುವ ಜೀವ . ಆದರೆ ಯಾವ ಭಯವಿಲ್ಲದೆ ಜೀವನಪೂರ್ತಿ ರುದ್ರಭೂಮಿಯಲ್ಲಿಯೇ ಕಾಲ ಕಳೆಯುವ ತಾಯಿಯ ಎದೆಗಾರಿಕೆಯನ್ನು ಮೆಚ್ಚಲೇ ಬೇಕು .ದ್ವೆವ ಭೂತಗಳನ್ನು ಮೆಟ್ಟಿ ನಿಂತಿರುವ ಲಕ್ಷಮ್ಮಮ ತಾಯಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.

ವೇಧ ಉಪನಿಷತ್ತ ಕಾಲದಿಂದಲೂ ಲಿಂಗ ತಾರತಮ್ಯವನ್ನು ಬೆಳೆದು ಬಂದಿದೆ. ಆದರೆ ಆ ಲಿಂಗ ತಾರತಮ್ಯವನ್ನು ತೊಡೆದು ಹಾಕಿ ವೀರ ಪುರುಷನ ಸರಿಸಮವಾಗಿ ಕಾಯಕಕ್ಕೆ ತಲೆ ಬಾಗಿ, ಹೆಣ್ಣು ಯಾವ ಕಾರ್ಯಕ್ಕೂ ಸಯಿ ಎನ್ನುವಂತೆ ಬಾಳುತ್ತಿದ್ದಾಳೆ. ಇಡೀ ಮನುಕುಲಕ್ಕೆ ಮಾದರಿ ಹಿರಿಯ ಜೀವ ಲಕ್ಷ್ಮಮ್ಮಮ.

ಲೇಖಕರು
ಶ್ರೀಮತಿ ಅಮರಾವತಿ ಹಿರೇಮಠ
ಜ್ಞಾನ ದೀವಿಗೆ ಅಭಿವೃದ್ಧಿ ಸಂಸ್ಥೆ ಕಲಬುರ್ಗಿ
9108259250.

Related Articles

Leave a Reply

Your email address will not be published. Required fields are marked *

Back to top button