ಸಂಪಾದಕೀಯ

ಮಾಲೂರಿನ ಜೂನಿಯರ್ ನ್ಯಾಯಧೀಶರಾದ ಗಾಯಿತ್ರಿ ರವರನ್ನು ಸೇವೆಯಿಂದ ಅಮಾನತ್ತುಗೊಳಿಸಬೇಕೆಂದು – ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ.

ಮಾಲೂರಿನ ಜೂನಿಯರ್ ನ್ಯಾಯಧೀಶರಾದ ಗಾಯಿತ್ರಿ ರವರನ್ನು ಸೇವೆಯಿಂದ ಅಮಾನತ್ತುಗೊಳಿಸಬೇಕೆಂದು – ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ.

ಬೆಂಗಳೂರು. ಮಾಲೂರಿನ ಜೂನಿಯರ್ ನ್ಯಾಯಧೀಶರಾದ ಗಾಯಿತ್ರಿ ರವರನ್ನು ಸೇವೆಯಿಂದ ಅಮಾನತ್ತುಗೊಳಿಸಬೇಕೆಂದು – ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಅವರು ಇಂದು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಬೆಂಗಳೂರು ವಕೀಲರ ಸಂಘದ ವತಿಯಿಂದ ಸರ್ಕಾರ ವನ್ನು ಡಿಮ್ಯಾಂಡ್ ಮಾಡಿದರು .
ದಿನಾಂಕ: 15.07.2026 ರಂದು ಮಾಲೂರಿನಲ್ಲಿ ಮಾಲೂರು ತಾಲ್ಲೂಕಿನ ಜೂನಿಯರ್ ನ್ಯಾಯಧಿಶರಾದ ಗಾಯಿತ್ರಿ ರವರು ಸಾರ್ವಜನಿಕವಾಗಿ ವಿನಯ್ ಎಂಬ ಯುವಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಈ ವಿಚಾರವಾಗಿ ಯುವಕನ ಮೇಲೆ ಪ್ರಕರಣ ದಾಖಲಿಸಿದ್ದು, ಈತನಿಗೆ ಅನ್ಯಾಯಒದಗಿಸುವ ಬಗ್ಗೆ ಪತ್ರಿಕಾಗೋಷ್ಠಿ ಏರ್ಪಡಿಸಿರುತ್ತಾರೆ.
ಮೇಲ್ಕಂಡ ವಿಷಯಕ್ಕೆ ಸಂಬಧಿಸಿದಂತೆ ದಿನಾಂಕ: 15.07.2026 ರಂದು ವಿನಯ್ ಎಂಬ ಯುವಕನು ಬೈಕ್ ಮೇಲೆ ತೆರಳುತ್ತಿರುವಾಗ ಎದುರಗಡೆಯಿಂದ ಕಾರೊಂದು ಅತಿವೇಗವಾಗಿ ಚಲಾಯಿಸು ಕೊಂಡು ಬರುತ್ತಿದ್ದು, ನಿಧಾನವಾಗಿ ಚಲಿಸುವಂತೆ ಕೈ ಸನ್ನೆ ಮಾಡಿರುತ್ತಾನೆ. ಆ ಕಾರು ಮುಂದೆ ಹೋಗಿ ಮತ್ತೆ ಹಿಂತಿರುಗಿ ಬಂದು ಯುವಕ ವಿನಯ್ ಗೆ ಕೈ ಸನ್ನೆ ಮಾಡಿರುವ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಇಬ್ಬರ ನಡುವೆ ವಾಗ್ವಾದ ನಡೆದಿರುತ್ತದೆ. ನಂತರ ಕಾರಿನಲ್ಲಿರುವವರು ನ್ಯಾಯಧಿಶರು ಎಂದು ಯಾರಿಗೂ ತಿಳಿದಿರುವುದಿಲ್ಲ. ತಿಳಿದ ನಂತರ ನ್ಯಾಯಧಿಶರನ್ನು ಘಟನೆಯ ಬಗ್ಗೆ ಕ್ಷೇಮೆ ಕೇಳಲು ಮುಂದಾದಾಗ ಯಾವುದೇ ಅವಕಾಶ ನೀಡಿರುವುದಿಲ್ಲ. ನ್ಯಾಯಾಧೀಶರ ಆದೇಶದ ಮೇರೆಗೆ ವಿನಯ್ ರವರನ್ನು ಠಾಣೆಗೆ ಕರೆದುಕೊಂಡು ಹೋಗಿ ಯಾವುದೇ ಪ್ರಕರಣ ದಾಖಲು ಮಾಡದೇ ಅವರಿಂದ 5000 (25000 ಬೇಡಿಕೆ) ಹಣವನ್ನು ತೆಗೆದುಕೊಂಡು ಬಿಟ್ಟು ಕಳುಹಿಸಿರುತ್ತಾರೆ.
ಮತ್ತೆ 5 ದಿನಗಳ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಸದರಿ ಘಟನೆಗೆ ಸಂಬಂಧಿಸಿದಂತೆ ವಿಡಿಯೋ ಹರಿದಾಡುತ್ತಿರುವುದ ರಿಂದ ಯುವಕನನ್ನು ಮತ್ತು ಅವರ ತಾತ ವೆಂಕಟೇಶ್ ನನ್ನು ಠಾಣೆಗೆ ಕರೆದುಕೊಂಡು ಹೋಗಿ, ಘಟನೆಯ ವಿಡಿಯೋ ವನ್ನು ನೀವೇ ಮಾಡಿದ್ದೀರಿ ಎಂದು ಯುವಕನ ತಾತ ವೆಂಕಟೇಶ್ ರವರ ಮೇಲೆ ಮತ್ತು ಪ್ರಕರಣದ ರೂವಾರಿ ವಿನಯ ರವರ ಮೇಲೆ ಪ್ರಕರಣ ದಾಖಲು ಮಾಡಿರುತ್ತಾರೆ.
ಈ ವಿಚಾರವಾಗಿ ನಮ್ಮ ಯುವನಕದು ಯಾವುದೇ ತಪ್ಪಿಲ್ಲದಿದ್ದರೂ ನ್ಯಾಯಧೀಶರು ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿ ಪ್ರಕರಣ ದಾಖಲಿಸಿರುತ್ತಾರೆ ಎಂದು ದೂರಿದರು.
ಈ ಪ್ರಕಾರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ವಕೀರ ಸಂಘದದಿಂದ ಮಾನ್ಯ ಹೈಕೋರ್ಟ್ ಗೆ ಮಾಲೂರಿನ ಜೂನಿಯರ್ ನ್ಯಾಯಧೀಶರಾದ ಗಾಯಿತ್ರಿ ರವರನ್ನು ಸೇವೆಯಿಂದ ಅಮಾನತ್ತುಗೊಳಿಸಬೇಕೆಂದು ಆಗ್ರಹಿಸಿರುತ್ತಾರೆ. ಹಾಗೂ ಅವರ ಮೇಲೆ ದಾಖಲಾಗಿರುವ ಪ್ರಕರಣವನ್ನು ವಜಾಗಿಳಿಸುವಂತೆ ಮುಂದಿನ ದಿನಗಳಲ್ಲಿ ಹೈಕೋರ್ಟ್ ಗೆ ಮನವಿ ಸಲ್ಲಿಸುವದಾಗಿ ಮಾಹಿತಿ ತಿಳಿಸಿದರು .ಅಧ್ಯಕ್ಷರಾದ ವಿವೇಕ್ ಸುಬ್ಬಾರೆಡ್ಡಿ, ವಿನಯ್, ವೆಂಕಟೇಶ್, ಕವಿತ ಮುಂತಾದವರು ಪತ್ರಿಕಾ ಗೋಷ್ಠಿ ಯಲ್ಲಿ ಉಪಸ್ಥಿತರಿದ್ದರು . ವರದಿ. ಮಂಜುಳಾ ರೆಡ್ಡಿ.

Related Articles

Leave a Reply

Your email address will not be published. Required fields are marked *

Back to top button