ಪತ್ರಿಕೋದ್ಯಮ

ಹೃದಯದಲ್ಲಿ ಶ್ರೀಕೃಷ್ಣನ ಪ್ರೀತಿ,ಬದುಕಿನಲ್ಲಿ ಶ್ರೀಕೃಷ್ಣನ ಮಾರ್ಗದರ್ಶನ ಇದ್ದಾಗಲೇ ಜೀವನ ಸುಗಮ…..

ಶ್ರೀ ಕೃಷ್ಣ ಪರಮಾತ್ಮನ ಬಗ್ಗೆ ಭಕ್ತಿ ಗಿಂತಲೂ ಪ್ರೀತಿ ಇರಲಿ ಯಾಕೆಂದರೆ, ಮನುಷ್ಯನು ತನ್ನ ಜೀವನದಲ್ಲಿ ಯಾವ ತರಹ ನದುಕೊಳ್ಳುತ್ತಾ ಮುಕ್ತಿ ಕಾಣಬೇಕು ಎಂಬುವುದರ ಬಗ್ಗೆ ಶ್ಲೋಕಗಳಲ್ಲಿ, ಕಥೆಗಳ ಮುಖಾಂತರ ತುಂಬಾ ಚೆನ್ನಾಗಿ ಹೇಳಿದ್ದಾರೆ.

ಶ್ರೀ ಕೃಷ್ಣ ಪರಮಾತ್ಮನು ಕಾಡಿನಲ್ಲಿ ನಡೆದುಕೊಂಡು ಹೋಗುತ್ತಿದ್ದನಂತೆ ಆಗ ಒಬ್ಬ ಕಟ್ಟಿಗೆ ಮಾರುವ ವ್ಯಕ್ತಿ ಕಾಡಿನಲ್ಲಿ ಪೆಟ್ಟಿಗೆ ಕಡೆದು ಆ ಕಟ್ಟಿಗೆಯ ಹೊರೆಯನ್ನು ಹೊತ್ತುಕೊಳ್ಳಲು ತುಂಬಾ ಪ್ರಯಾಸ ಪಡುತ್ತಿದ್ದನಂತೆ , ಎಷ್ಟು ಬಾರಿ ಪ್ರಯತ್ನಿಸಿದರು ಭಾರವಾಗಿರುವ ಕಟ್ಟಿಗೆಯ ಹೊರೆ ತಲೆಯ ಮೇಲೆ ಹೊತ್ತುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲವಂತೆ.

ಆಗ ಎದುರಿಗೆ ಬರುತ್ತಿದ್ದ ಶ್ರೀಕೃಷ್ಣನ ಸಹಾಯ ಪಡೆಯಬೇಕೆಂಬ ಅಪೇಕ್ಷೆಯಿಂದ ದೀನದಯಾಳು ಶ್ರೀ ಕೃಷ್ಣ ಪರಮಾತ್ಮನೇ ದಯವಿಟ್ಟು ನನಗೆ ಕಟ್ಟಿಗೆ ಹೊರೆ ಹೊತ್ತುಕೊಳ್ಳಲು ಸಹಾಯ ಮಾಡು ಎಂದು ಆ ವ್ಯಕ್ತಿ ಪ್ರಾರ್ಥಿಸಿ ಕೊಂಡಾಗ, ಇಲ್ಲ…. ಇಲ್ಲ….ನಾನು ಸಹಾಯ ಮಾಡಲಾರೆ ಎಂದು ಶ್ರೀಕೃಷ್ಣ ಪರಮಾತ್ಮ ಮುಖ ಹೊಡೆದಂತೆ ಹೇಳಿದಾಗ. ಶ್ರೀ ಕೃಷ್ಣ ಪರಮಾತ್ಮ ನಿನ್ನ ಕಾಲು ಬೀಳುತ್ತೇನೆ ದಯವಿಟ್ಟು ಹೊರೆ ಹೊತ್ತುಕೊಳ್ಳಲು ಸಹಾಯ ಮಾಡು ಎಂದು ಎರಡನೇ ಬಾರಿ ಗೋಗರೆದಾಗ, ಹೇ…. ಭಕ್ತ. ದುರಾಸೆಯಿಂದ ಅಷ್ಟೊಂದು ಕಟ್ಟಿಗೆ ಹೊರೆ ಯಾಕೆ ಕಟ್ಟಿಕೊಂಡಿದ್ದೀಯಾ? ನಿನಗೆ ಹೊತ್ತುಕೊಳ್ಳಲು ಎಷ್ಟು ಸಾಧ್ಯವಾಗುತ್ತೋ ಅಷ್ಟನ್ನೇ ಎತ್ತಿಕೋ. ಆಗ ಎತ್ತಿಕೊಳ್ಳಲು ನಿನಗೆ ಸುಲಭವಾಗುತ್ತದೆ ಎಂದು ಶ್ರೀಕೃಷ್ಣ ಪರಮಾತ್ಮ ಹೇಳಿ ಸರಸರನೆ ಮುಂದೆ ಹೋಗಿಬಿಟ್ಟರಂತೆ.

ಅಸಹಾಯಕ ವ್ಯಕ್ತಿ ನಿರಾಸೆಯಿಂದ ಕಟ್ಟಿಗೆ ಹೊರೆ ಬಿಚ್ಚಿ ತನಗೆ ಎತ್ತಿಕೊಳ್ಳಲು ಆಗುವಷ್ಟನ್ನೇ ಕಟ್ಟಿಗೆ ಹೊರೆ ಕಟ್ಟಿಕೊಂಡು ಮನೆಗೆ ನಡೆದನಂತೆ. ಆ ವ್ಯಕ್ತಿ ತನ್ನ ಮನೆಯ ಹತ್ತಿರ ಬಂದು ಕಟ್ಟಿಗೆ ಹೊರೆ ಇಳಿಸುವಾಗ, ಅಲ್ಲಿಯೇ ಕಾದು ಕುಳಿತ್ತಿದ್ದ ಶ್ರೀ ಕೃಷ್ಣ ಪರಮಾತ್ಮ, ಹೇ ಭಕ್ತ ನಿಲ್ಲು….ನಿಲ್ಲು…. ನಾನು ನಿನ್ನ ಕಟ್ಟಿಗೆ ಹೊರೆ ಇಳಿಸಲು ಸಹಾಯ ಮಾಡುತ್ತೇನೆ ಎಂದು ಸರಸರನೆ ಬಂದು ಆ ವ್ಯಕ್ತಿಯ ತಲೆ ಮೇಲಿದ್ದ ಹೊರೆಯನ್ನು ಕೆಳಗೆ ಇಳಿಸಲು ಸಹಾಯ ಮಾಡಿದನಂತೆ.

ಆಶ್ಚರ್ಯ ಚಿಕಿತನಾದ ಆ ಬಡ ವ್ಯಕ್ತಿ ಹೇ…ಪರಮಾತ್ಮ, ಕಾಡಿನಲ್ಲಿ ನನಗೆ ಕಟ್ಟಿಗೆ ಹೊರೆ ಎತ್ತಿಕೊಳ್ಳಲು ಸಹಾಯ ಮಾಡಲು ನಿರಾಕರಿಸಿದೆ. ಈಗ ನನ್ನ ಮನೆ ಮುಂದೆ ಬಂದು ನನ್ನ ಕಟ್ಟಿಗೆ ಹೊರೆ ಇಳಿಸಲು ಯಾಕೆ ಸಹಾಯ ಮಾಡುತ್ತಿದ್ದೀಯಾ? ಏನು ನಿನ್ನ ಲೀಲೆ? ಎಂದು ಕೈ ಮುಗಿದು ಕೇಳಿದನಂತೆ. ” ಆಗ ಶ್ರೀ ಕೃಷ್ಣ ಪರಮಾತ್ಮ, ಹೇ ಭಕ್ತ. ಜೀವನದಲ್ಲಿ ನಮ್ಮ ಶಾಕ್ತ್ಯಾನುಸಾರ ಶ್ರಮ ಪಡಬೇಕು. ಶಕ್ತಿಮೀರಿ ಕೆಲಸ ಮಾಡಿದರೆ ನಾವು ಮಾಡುತ್ತಿರುವ ಕೆಲಸ ಫಲಪ್ರದವಾಗುವುದಿಲ್ಲ ಸಹಾಯಕ್ಕಾಗಿ ಅನ್ಯರೆದುರು ಕೈ ಚಾಚಿ, ಗೋಗರೆಯಬೇಕಾಗುತ್ತೆ. ಸಮಯ ಶ್ರಮ ಎರಡು ವ್ಯರ್ಥ ” ಆದಕಾರಣ ದುರಾಸೆಯಿಂದ ಹೆಚ್ಚಿಗೆ ಶ್ರಮಪಟ್ಟು ಹೆಚ್ಚಿಗೆ ಕಟ್ಟಿಗೆ ಹೊರೆ ಕಟ್ಟಿಕೊಂಡು ಅದನ್ನು ತಲೆ ಮೇಲೆ ಹೊರಲು ಮತ್ತೊಬ್ಬರ ಸಹಾಯಕ್ಕಾಗಿ ಬೇಡುತ್ತಿರುವುದು ಒಳ್ಳೆಯದಲ್ಲ ಎಂಬ ಕಾರಣಕ್ಕೆ ನಿನಗೆ ಸಹಾಯ ಮಾಡಲು ನಿರಾಕರಿಸಿದೆ ಆದರೆ ನಿನ್ನ ಶಕ್ತಿಗನುಸಾರ ಕಟ್ಟಿಗೆ ಹೊರೆ ಕಟ್ಟಿ ಹೊತ್ತುಕೊಂಡು ಬಂದಾಗ ಹೊರೆ ಇಳಿಸಲು ನಾನು ಸಹಾಯ ಮಾಡಿದೆ.

ಜೀವನದಲ್ಲಿ ಹಾಸಿಗೆ ಇದ್ದಷ್ಟು ಕಾಲು ಚಾಚಿದರೆ ಮನಸ್ಸಿಗೆ ನೆಮ್ಮದಿ ಶಾಂತಿ ಸುಖ ಚೈತನ್ಯ ಸಿಕ್ಕುತ್ತದೆ ಎಂಬುದೇ ಇದರ ಅರ್ಥ.

🪷🪷🪷🪷🪷🪷🪷
ಹೃದಯದಲ್ಲಿ ಕೃಷ್ಣನ ಪ್ರೀತಿ,
ಬದುಕಿನಲ್ಲಿ ಕೃಷ್ಣನ ಮಾರ್ಗದರ್ಶನ..!!
ಶ್ರೀಕೃಷ್ಣನ ಜನ್ಮವನ್ನು ಸ್ಮರಿಸುವ ಪವಿತ್ರ
ದಿನ,ಬದುಕಿನಲ್ಲಿ ಧರ್ಮ, ಪ್ರೀತಿ ಮತ್ತು
ನಂಬಿಕೆ ಸದಾ ಇರಲಿ..!!
ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ
ಶುಭಾಶಯಗಳು!*💐

Related Articles

Leave a Reply

Your email address will not be published. Required fields are marked *

Back to top button