ಕಳಂಕಿತ ಪಶುವೈದ್ಯಾಧಿಕಾರಿ ಮೇಲೆ ಕ್ರಮ, ಪ್ರಾಮಾಣಿಕವಾಗಿ ಆಯ್ಕೆಯಾದ ಪಶುವೈದ್ಯಾಧಿಕಾರಿಗಳಿಗೆ ನೇಮಕಾತಿ ಆದೇಶ ನೀಡಿ ಎಂದು ಮನವಿ.

ಕಳಂಕಿತ ಪಶುವೈದ್ಯಾಧಿಕಾರಿ ಮೇಲೆ ಕ್ರಮ, ಪ್ರಾಮಾಣಿಕವಾಗಿ ಆಯ್ಕೆಯಾದ ಪಶುವೈದ್ಯಾಧಿಕಾರಿಗಳಿಗೆ ನೇಮಕಾತಿ ಆದೇಶ ನೀಡಿ ಎಂದು ಮನವಿ
ಬೆಂಗಳೂರು: ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಪಶುವೈದ್ಯಾಧಿಕಾರಿ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳ ಸಮಿತಿ ವತಿಯಿಂದ ಮಾಧ್ಯಮಗೋಷ್ಠಿ ಏರ್ಪಡಿಸಿದ್ದರು.
ಡಾ||ಹನುಂತಪ್ಪ ಕಳಾಸಪುರ, ಡಾ.ಗುರುಬಸವರಾಜ್, ಡಾ.ಪೂಜ್.ಹೆಚ್., ಡಾ.ಅವಿನಾಶ್ ಬಿರಡಿ, ಡಾ.ಸುನೀಲ್,ಡಾ.ಚಾಂದಿನಿ.ಎನ್.ಡಾ.ಶ್ರೀಶೈಲ್, ಡಾ.ತನ್ವಿತ್, ಡಾ.ಪ್ರಿಯಾಂಕ, ಡಾ.ವಿಕಾಸ್ ರವರು ಮಾಧ್ಯಮಗೋಷ್ಠಿಯಲ್ಲಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಡಾ||ಹನುಮಂತಪ್ಪ ಕಳಸಾಪುರರವರು ಮಾತನಾಡಿ ರಾಜ್ಯ ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಇಲಾಖೆ ಸೇವೆಗಳು ಅತ್ಯಂತ ಅಗತ್ಯ ಸೇವೆಗಳು ಆಗಿದೆ.
ಇತ್ತಿಚೇಗೆ 329 ಪಶುವೈದ್ಯಾಧಿಕಾರಿ ಪೈಕಿ 29ಪಶುವೈದ್ಯಾಧಿಕಾರಿ ಮೇಲೆ ಪರೀಕ್ಷೆಯಲ್ಲಿ ವಂಚನೆ, ಕಾಪಿ ಮಾಡಿ ಆಯ್ಕೆಯಾಗಿದ್ದಾರೆ ಎಂದು ಸಿಐಡಿ ಎಫ್.ಐ.ಆರ್.ದಾಖಲಿಸಿದ್ದಾರೆ.
ಸುಪ್ರಿಂಕೋರ್ಟ್ ನಲ್ಲಿ ಹಲವಾರು ಪ್ರಕರಣದಲ್ಲಿ ಕಳಂಕಿತರ ಮೇಲೆ ಕ್ರಮ ಮತ್ತು ಪ್ರಾಮಾಣಿಕ ಪಾಸಾದ ಅಭ್ಯರ್ಥಿಗಳಿಗೆ ನೇಮಕಾತಿ ಮಾಡಿ ಎಂದು ತೀರ್ಪು ನೀಡಿದ್ದಾರೆ ಅದೇ ಮಾದರಿಯಲ್ಲಿ ಇಲ್ಲಿ ಕ್ರಮ ಕೈಗೊಳ್ಳಿ ಕಳಂಕಿತರ ಮೇಲೆ ಕ್ರಮ ನಮಗೆ ನೇಮಕಾತಿ ಆದೇಶ ಪತ್ರ ನೀಡಿ. ಸಿಐಡಿ ಕಛೇರಿ ನಮ್ಮನ್ನ ಕರೆದರೆ ಹೋಗುತ್ತೇವೆ ನಮಗೆ ಯಾವುದೇ ಆಳುಕಿಲ್ಲ, ಭಯವಿಲ್ಲ.
ನಾವು ತನಿಖೆಯನ್ನ ವಿರೋಧಿಸುವುದಿಲ್ಲ. ವಿನಾಕಾರಣ ಪ್ರಾಮಾಣಿಕವಾಗಿ ನೇಮಕರಾದ ಪಶುವೈದ್ಯಾಧಿಕಾರಿಗಳ ಮೇಲೆ ಕಿರುಕುಳ ನೀಡಬೇಡಿ, ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಿ ನಮ್ಮದು ನ್ಯಾಯಯುತ ಮನವಿ ಹಾಗೂ ಒಂದು ತಿಂಗಳ ಒಳಗೆ ತನಿಖೆ ಮಾಡಿ ಪ್ರಾಮಾಣಿಕರಿಗೆ ಮನ್ನಣೆ ನೀಡಿ ಎಂದು ಹೇಳಿದರು. ವರದಿ. ಮಂಜುಳಾ ರೆಡ್ಡಿ.



