ಅವಸರದ ನಿರ್ಣಯ ತೆಗೆದುಕೊಂಡ ಶೆಟ್ಟರ್ . ಪ್ರೊ. ಶಿವರಾಜ್ ಪಾಟೀಲ್ ಚಿಂತಕರು ಕಲ್ಬುರ್ಗಿ

.. ಅವಸರದ ನಿರ್ಣಯ ತೆಗೆದುಕೊಂಡ ಶೆಟ್ಟರ್. ಬಿಜೆಪಿಯ ಹಿರಿಯ ನಾಯಕ ಮತ್ತು ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್ ಅವರು ತುಂಬಾ ಅವಸರದ ನಿರ್ಣಯ ತೆಗೆದುಕೊಂಡಿದ್ದಾರೆಂದು ಕರ್ನಾಟಕದ ಜನತೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ ರಾಜಕೀಯದಲ್ಲಿ ತೀವ್ರ ಸ್ವರೂಪದ ಬದಲಾವಣೆ ಇರಬೇಕು ನಿಜ ಇಷ್ಟೊಂದು ತೀವ್ರ ಸ್ವರೂಪ ಪಡೆದುಕೊಳ್ಳಬಾರದೆಂದು ಮಾತನಾಡಿಕೊಳ್ಳುತ್ತಿದ್ದಾರೆ ಅನುಭವಿ ಹಾಗೂ ನುರಿತ ರಾಜಕಾರಣಿ ಮಾಜಿ ಮುಖ್ಯಮಂತ್ರಿಗಳು ಸಹ ಹೌದು, ಹಿಂತವರು ಬಿಜೆಪಿಯಲ್ಲಿ ಗೌರವ ಸಿಗಲಿಲ್ಲವೆಂದು ಭಾವಿಸಿ ಕಾಂಗ್ರೆಸ್ಸಿಗೆ ಬಂದರು ಕಾಂಗ್ರೆಸ್ ಪಕ್ಷ ಇವರಿಗೆ ಟಿಕೆಟ್ ನೀಡಿ ಸೋತ ಮೇಲೆ ವಿಧಾನಪರಿಷತ್ತಿನ ಸದಸ್ಯರನ್ನಾಗಿ ಮಾಡಿದಾಗಲೂ ಎಲ್ಲ ರೀತಿಯಲ್ಲಿ ಗೌರವದಿಂದ ನಡೆಸಿಕೊಂಡಾಗಲೂ ಇಂದು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋಗಿದ್ದಾರೆ 40 ವರ್ಷಗಳಿಂದ ಬಿಜೆಪಿಯಲ್ಲಿ ಇದ್ದು ಎಲ್ಲಾ ಸವಲತ್ತುಗಳನ್ನು ಪಡೆದು ಮುಖ್ಯಮಂತ್ರಿಯ ಹುದ್ದೆಯನ್ನು ಅನುಭವಿಸಿ ಯಾವುದೋ ಒಂದು ಕ್ಷಣದ ನಿರ್ಣಯದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ಸಿಗೆ ಬಂದರು ಇವರು ರಾಜಕೀಯ ಸೌಲತ್ತು ಲಾಭದ ಹಿತ ದೃಷ್ಟಿಯಿಂದ ವರ್ತಿಸುತ್ತಿದ್ದಾರೆ ವಿನಹ ಜನತೆಯ ಒಳಿತಿಗಾಗಿ ಕಲ್ಯಾಣಕ್ಕಾಗಿ ರಾಜಕೀಯ ಮಾಡುತ್ತಿಲ್ಲ ಸ್ವಹಿತಾಸಕ್ತಿ ಇವರ ಗುರಿಯಾಗಿದೆ ಎಂಬುದು ಇಂದು ಕರ್ನಾಟಕದ ಜನತೆ ಅರ್ಥಮಾಡಿಕೊಂಡಿದ್ದಾರೆ ಹೇಳಿಕೇಳಿ ಶೆಟ್ಟರ್ ಅವರು ವ್ಯಾಪಾರಸ್ಥ ಕುಟುಂಬದಿಂದ ಬಂದವರು ರಾಜಕೀಯವು ಲಾಭದ ದೃಷ್ಟಿಯಿಂದ ಮಾಡಿದ್ದಾರೆ ವಿನಹ ಅದೊಂದು ಸೇವೆ ಎಂದು ಮಾಡಿಲ್ಲವೆಂಬುದು ಅವರ ನಡವಳಿಕೆಯಿಂದ ತಿಳಿದು ಬರುತ್ತದೆ ಶೆಟ್ಟರ್ ಒಬ್ಬ ಗಂಭೀರ ರಾಜಕಾರಣಿಯಾಗುವ ಬದಲು ಅವಕಾಶವಾದಿ ಹಾಗೂ ಸಮಯ ಸಾಧಕ ರಾಜಕಾರಣಿಯಾಗಿ ಹೊರಹೊಮ್ಮಿದ್ದು ಬಹುದೊಡ್ಡ ದುರಂತವಾಗಿದೆ ಈ ರೀತಿ ಇವರು ವರ್ತಿಸಿದರೆ ಮುಂದೆ ಯಾವ ಪಕ್ಷ ಮತ್ತು ಯಾವ ನೇತಾರರೂ ಇವರನ್ನು ನಂಬುವುದಿಲ್ಲ ಈಗ ಅವರು ತೆಗೆದುಕೊಂಡನಿರ್ಣಯ ಇಡೀ ಕನ್ನಡ ನಾಡಿನ ಜನತೆ ತಲೆತಗ್ಗಿಸುವಂತೆ ಮಾಡಿದೆ ಈಗ ಧಾರವಾಡ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಆಗಬಹುದು ಪ್ರಹ್ಲಾದ ಜೋಶಿ ಅವರು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾದ ಮೇಲೆ ಇವರಿಗೆ ಈ ಸ್ಥಾನವನ್ನು ಬಿಟ್ಟು ಕೊಡಬಹುದು ಮುಂದೆ ಒಂದು ವೇಳೆ ಮೋದಿ ಮತ್ತೊಮ್ಮೆ ಆಯ್ಕೆಗೊಂಡು ಬಹುಮತ ಪಡೆದಲ್ಲಿ ಲೋಕಸಭೆ ನಾಯಕರಾಗಿ ಆಯ್ಕೆಗೊಂಡ ಮೇಲೆ ಇವರು ಕೇಂದ್ರದ ಮಂತ್ರಿಗಳೂ ಆಗಬಹುದು ಒಂದು ವೇಳೆ ಮೋದಿ ಗೆಲ್ಲದಿದ್ದರೆ ಮೋದಿ ಸರ್ಕಾರ ರಚನೆಯಾಗದಿದ್ದರೆ ಜಗದೀಶ್ ಶೆಟ್ಟರ್ ಸೋತು ಸುಣ್ಣವಾದರೆ ಇವರ ರಾಜಕೀಯ ಸ್ಥಿತಿಗತಿ ಏನು ಎಂಬುದು ಊಹಿಸಲು ಅಸಾಧ್ಯ ಇಂತ ಕಠಿಣತರವಾದ ಪ್ರಸಂಗ ಬರಬಹುದು ಬರದೇ ಇರಬಹುದು ರಾಜಕೀಯದಲ್ಲಿ ಏನಾದರೂ ನಡೆದು ಹೋಗುತ್ತವೆ ಇದಕ್ಕೆ ಶೆಟ್ಟರ್ ಅವರ ವ್ಯಕ್ತಿತ್ವ ಬಲಿಪಶುವಾಗುತ್ತಿರುವುದು ದುರಂತದ ಸಂಗತಿ ಆಗಿದ ಶೆಟ್ಟರ್ ಅವರು ರಾಜಕೀಯ ನಾಯಕರು ಉತ್ತರ ಕರ್ನಾಟಕದ ಲಿಂಗಾಯತ ಸಮುದಾಯವನ್ನು ಪ್ರತಿನಿಧಿಸುವ ಮಹತ್ವದ ವ್ಯಕ್ತಿಗಳು ಬಸವ ತತ್ವ ಪರಿಪಾಲಕರು ಇಷ್ಟೆಲ್ಲ ಇದ್ದಾಗಲೂ ಈ ರೀತಿ ಸಮಯ ಸಾಧಕತನ ಮೆರೆದಿದ್ದು ಇಡೀ ಲಿಂಗಾಯತ ಸಮುದಾಯ ತಲೆತಗ್ಗಿಸುವಂತೆ ಮಾಡಿದೆ ಶೆಟ್ಟರ್ ಅವರ ನಡೆ ಅಧಿಕಾರದ ಕಡೆ ವಿನಹ ಸಮಾಜ ಸೇವೆ ಜನ ಹಿತ ಅದರಲಿಲ್ಲವೆಂಬುದು ಅವರು ತೋರಿಸಿಕೊಟ್ಟಿದ್ದಾರೆ ಇತ್ತೀಚಿನ ದಿನಗಳಲ್ಲಿ ರಾಜಕೀಯ ವ್ಯಭಿಚಾರ ಸಾಕಷ್ಟು ನಡೆದಿದೆ ವ್ಯಭಿಚಾರಿ ರಾಜಕಾರಣಿಗಳು ದಿನಕ್ಕೊಂದು ಪಕ್ಷ ಬದಲಿಸುತ್ತಾ ಹಚಗೆ ಇದ್ದಲ್ಲಿ ಉಂಡು ಬೆಚ್ಚಗೆ ಇದ್ದಲ್ಲಿ ಮಲಗಿಕೊಂಡು ಅಧಿಕಾರವನ್ನು ಅನುಭವಿಸುತ್ತಿದ್ದಾರೆ ಇದು ಆರೋಗ್ಯಕರವಾದ ಬೆಳವಣಿಗೆಯಲ್ಲ ಇಂದು ರಾಜಕೀಯ ದೃವೀಕರಣ ಆಗಬೇಕಾದದ್ದು ಅತ್ಯವಶ್ಯಕವಾಗಿದೆ ಯಾರು ಹೇಗೆ ಬೇಕಾದರೂ ವರ್ತಿಸಿದರೆ ಅದನ್ನು ನೋಡಿಕೊಂಡು ಸುಮ್ಮನೆ ಇರಲಿಕ್ಕೆ ಸಾಧ್ಯವಿಲ್ಲ ಎಂಬುದನ್ನು ಜನತೆ ತೋರಿಸಬೇಕಾಗಿದೆ ಮನಸ್ಸಿಗೆ ಬಂದಂತೆ ನಡೆದುಕೊಳ್ಳುವುದು ಯಾರೋ ಒಪ್ಪುವುದಿಲ್ಲ ಮನಸ್ಸಿಗೆ ಬಂದಂತೆ ನಡೆಯದಿರು ಇಹದೊಳು ಎಂದು ನಿಜಗುಣರು ಹೇಳಿದ್ದು ಹುಬ್ಬಳ್ಳಿಯ ಸಿದ್ಧಾರೂಢರು ನೂರು ಸಾರಿ ಹುಬ್ಬಳ್ಳಿ ಜನತೆಗೆ ಹೇಳಿದ್ದಾರೆ ಆದರೆ ಶಟರ್ ಅವರು ತಮ್ಮ ಮನಸ್ಸಿಗೆ ಬಂದಂತೆ ನಡೆದುಕೊಳ್ಳುತ್ತಿದ್ದಾನೆ ಮುಂದೆ ಏನಾಗುತ್ತೆ ಎಂಬುದು ಎಲ್ಲರಿಗೂ ಕುತೂಹಲ ಉಂಟು ಮಾಡಿದೆ ಅವರು ಹೇಳುವ ದೃಷ್ಟಿ ಮೋದಿ ಪ್ರಧಾನಿಯಾಗಬೇಕು ಅವರು ಪ್ರಧಾನಿಯಾಗುವುದಕ್ಕೆ ನಾನು ಸಹಕರಿಸಬೇಕು ಧಾರವಾಡ ಲೋಕಸಭಾ ಸ್ಥಾನವನ್ನು ಉಳಿಸಿಕೊಡಬೇಕು ಎಂಬುದು ಅವರ ಇರಾದೆಯಾಗಿದೆ ಅವರು ಅಂದುಕೊಂಡಂತೆ ಎಲ್ಲವೂ ನಡೆಯಲು ಸಾಧ್ಯವೇ ಎಂಬುದು ಜನರ ಪ್ರಶ್ನೆಯಾಗಿದೆ ಈ ರಾಜಕೀಯ ಚದುರಂಗದಾಟದಲ್ಲಿ ತಮ್ಮ ಬಿಳಿ ಬಟ್ಟೆಗೆ ಕೇಸರಿ ಬಣ್ಣವ ಹಚ್ಚಿಕೊಂಡು ಗೆಲ್ಲುತ್ತಾರೆಯೋ ಅಥವಾ ಕಪ್ಪು ಚುಕ್ಕೆಯನ್ನು ಹಚ್ಚಿಕೊಂಡು ಹುಬ್ಬಳ್ಳಿ ಮನೆಯಲ್ಲಿಯೇ ಉಳಿದುಕೊಳ್ಳುತ್ತಾರೆ ಎಂಬುದು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ ಬಿಜೆಪಿ ಒಂದು ರಾಜಕೀಯ ಶಿಸ್ತಿನ ಪಕ್ಷ ಇಲ್ಲಿ ಕೇಡರ್ ವೈಸ್ ಮತ್ತು ಲ್ಯಾಡರ್ ವೈಸ್ ಶಿಸ್ತುಗಳಿವೆ ಈ ಶಿಸ್ತನ್ನು ಮೀರಿ ಮನಸ್ಸಿಗೆ ಬಂದಂತೆ ವರ್ತಿಸುತ್ತಿರುವುದು ಏಕೆ ಎಂಬುದು ಶೆಟ್ಟರ್ ಅವರು ಜನರಿಗೆ ತಿಳಿ ಹೇಳಬೇಕು ಇಲ್ಲವೇ ಒಂದು ಬಾರಿ ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಚಿಕ್ಕವಯಸ್ಸಿನಲ್ಲಿಯೇ ಚಡ್ಡಿಯನ್ನು ಹಾಕಿಕೊಂಡು ಲಾಠಿಯನ್ನು ಹಿಡಿದುಕೊಂಡು ಆರ್ ಎಸ್ ಎಸ್ ಶಿಸ್ತಿನ ಸಿಪಾಯಿಯಾದ ಶೆಟ್ಟರ್ ಅವರು ಇಂದು ಅಧಿಕಾರದ ದಾಹಕ್ಕಾಗಿ ಅಶಿಸ್ತು ಪ್ರದರ್ಶಿಸುತ್ತಿರುವುದು ನೋಡುವವರಿಗೆ ಸರಿ ಕಾಣಿಸುತ್ತಿಲ್ಲ ಈ ನಡೆ ಬದಲಿಸಿಕೊಳ್ಳಬೇಕು ಶಿಸ್ತಿನ ಸಿಪಾಯಿಗಳಾಗಬೇಕು ಅಧಿಕಾರದ ದಾಹಕ್ಕೆ ಒಳಗಾಗಬಾರದು ನಿಷ್ಠಾವಂತ ಬಿಜೆಪಿಗರಾಗಿಯೇ ಉಳಿಯಬೇಕು ಅವಕಾಶವಾದಿತನ ಸಮಯ ಸಾಧಕತನ ತೋರಿಸುವುದರ ಮೂಲಕ ತಮ್ಮ ಆಳ ಅಗಲ ಅಂತ ಸತ್ವ ಪ್ರದರ್ಶಿಸಬಾರದು ಇದು ಬಸವಣ್ಣನವರಿಗೆ ಪ್ರಿಯವಾಗುವುದಿಲ್ಲ ಒಳಗೊಂದು ನಡೆ ಹೂರಗೊಂದು ನುಡಿ ಇವೆರಡೂ ಬೇಡ ಅಂತರಂಗ ಬಹಿರಂಗ ಶುದ್ದಿ ಇಲ್ಲದವರ ಎಂತು ನಂಬುವೆ ಕೂಡಲಸಂಗಮದೇವ ಎಂದು ಬಸವಣ್ಣನವರು ಕೇಳಿದ್ದು ಅವರು ನೆನಪಿಸಿಕೊಳ್ಳಲಿ ಪ್ರೊಫೆಸರ್ ಶಿವರಾಜ್ ಪಾಟೀಲ್ ಚಿಂತಕರು ಕಲ್ಬುರ್ಗಿ



