ಸಂಪಾದಕೀಯ

ಅವೈಜ್ಞಾನಿಕ ವೇತನದಿಂದ ಸರ್ಕಾರಿ ಪರವಾನಗಿ ಭೂ ಮಾಪಕರ ಜೀವನ ಅತಂತ್ರ ವಾಗಿದೆ – ಕೆ ಪಿ.ಬಾರ್ಗವುಲು.

ಅವೈಜ್ಞಾನಿಕ ವೇತನದಿಂದ ಸರ್ಕಾರಿ ಪರವಾನಗಿ ಭೂ ಮಾಪಕರ ಜೀವನ ಅತಂತ್ರ ವಾಗಿದೆ – ಕೆ ಪಿ.ಬಾರ್ಗವುಲು
ಬೆಂಗಳೂರು. ಅವೈಜ್ಞಾನಿಕ ವೇತನದಿಂದ ಸರ್ಕಾರಿ ಪರವಾನಗಿ ಭೂ ಮಾಪಕರ ಜೀವನ ಅತಂತ್ರ ವಾಗಿದೆ ಎಂದು ಅಖಿಲ ಕರ್ನಾಟಕ ಸರ್ಕಾರಿ ಪರವಾನಗಿ ಭೂ ಮಾಪಕರ ಸಂಘದ ಗೌರವಾಧ್ಯಕ್ಷ ಕೆ ಪಿ.ಬಾರ್ಗವುಲು ಇಂದು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಅವರ ಬೇಡಿಕೆಗಳನ್ನು ಸರ್ಕಾರಕ್ಕೆ ಡಿಮಾಂಡ್ ಮಾಡಿದರು . 2002 ರಲ್ಲಿ ಸುಮಾರು 800 ರಿಂದ 1000 ಪರವಾನಗಿ ಭೂಮಾಪಕರಿಗೆ ನಿಯಮಾನುಸಾರ ಇಲಾಖೆಯಲ್ಲಿ ತರಭೇತಿ ನೀಡಿ ಜಿಲ್ಲಾವಾರು ಕೆಲಸ ನಿರ್ವಹಿಸಲು ಅನುವು ಮಾಡಿಕೊಡಲಾಗಿತ್ತು.
ಇಲಾಖೆಯಲ್ಲಿ ಎರಡನೇ ದರ್ಜೆ ಭೂಮಾಪಕರ ಸಂಭಾವನೆಯನ್ನು ಆಧಾರವಾಗಿ ಇಟ್ಟುಕೊಂಡು ಮತ್ತು ಬಾಂದುಜವಾನನ ವೇತನವನ್ನು ಆಧಾರವಾಗಿ ಇಟ್ಟುಕೊಂಡು ಪ್ರತಿ ಮಾಹೆ 18 ಅಡತಗಳು ಪ್ರತಿ ಕಡತಕ್ಕೆ 300 ರೂಗಳಂತೆ ಖಚಿತ ಪಡಿಸಿ ರೈತರಿಂದ ನೇರವಾಗಿ ಹಣಪಡೆದು ಅದರಲ್ಲಿ 20% ಹಣವನ್ನು ಇಲಾಖೆಗೆ ಕಟ್ಟಿ ಸಂಬಂಧಪಟ್ಟ ದಾಖಲೆಗಳನ್ನು ಪಡೆದು ರೈತರ ಕೆಲಸ ಮಾಡಿಕೊಡಲು ಅಂದಿನ ಆಯುಕ್ತರು ನಡವಳಿಯನ್ನು ಮಾಡಿ ಇದನ್ನು ವ್ಯವಸ್ಥೆಗೆ ತರಲಾಗಿತು.
ಪರವಾನಗಿ ಭೂಮಾಪಕರಿಗೆ ನಿಯೋಜಿಸಲಾದ ಕೆಲಸಗಳು ಈ ರೀತಿ ಇವೆ ಎಂದು ತಿಳಿಸಿದರು.
ವಿಭಾಗ, ದಾನ, ಕ್ರಯ, ಇದಕ್ಕೆ ಸಂಬಂಧಪಟ್ಟಂತೆ 11-ಇ ನಕ್ಷೆ ತಯಾರಿಸುವುದು.
ತತ್ಕಾಲ್ ಪೋಡಿ ಮಾಡಲು
ಅಲಿನೇಷನ್ ಪೂರ್ವ ನಕ್ಷೆ ತಯಾರಿಸುವುದು. ಇವುಗಳನ್ನು ಮಾತ್ರ ಮೀಸಲಾಗಿಟ್ಟು ಕೆಲಸ ನಿರ್ವಹಿಸಲು ಅನುವು ಮಾಡಿಕೊಟ್ಟಿರುತ್ತದೆ.
ಇದಾದನಂತರ ಕೆಎಲ್‌ಆರ್ ಆಕ್ಟ್ ತಿದ್ದುಪಡಿ ಮಾಡಿ ಹೊಸ ಹುದ್ದೆಗಳನ್ನು ಸೃಜೀಸಲು ಆವಕಾಶ ಮಾಡಿಕೊಡಲಾಗಿತು.
2005, 2008, 2011, 2013, 2017, 2020, 2021, 2022, 2023, 2024 ರೀತಿಯಾಗಿ ಸುಮಾರು 7500 ಪರವಾನಗಿ ಭೂಮಾಪಕರನ್ನು ಇಲಾಖೆಗೆ ಸಿಇಟಿ ಪರೀಕ್ಷೆ ಮೂಲಕ ತೆಗೆದುಕೊಳ್ಳಲಾಗಿತ್ತು. ಇದರಲ್ಲಿ ಹಾಲಿ ಸಕ್ರಿಯವಾಗಿ ಕೆಲಸ
ನಿರ್ವಹಿಸುತ್ತೀರುವ ಪರವಾನಗಿ ಭೂಮಾಪಕರ ಸಂಖ್ಯೆ 5000 ಗಳಷ್ಟು ಇರುತ್ತದೆ
ಇದಾದನಂತರ ಇಲಾಖೆ ತತ್ಕಾಲ್ ಪೋಡಿ ಆಂದೋಲನ ಮಾಡಿ ಪರವಾನಗಿ ಭೂಮಾಪಕರನ್ನು ಭೂಮಾಪಕರಿಗೆ ಪ್ರತಿ ಕಡತಕ್ಕೆ 800 ರೂಗಳಂತೆ ಸಂಭಾವಣೆಯನ್ನು ನೀಡಲಾಗಿತ್ತು.
2021 ರಲ್ಲಿ ಕೆಎಲ್‌ಆರ್ ಆಕ್ಟ್ ತಿದ್ದುಪಡಿ ಮಾಡಿ ಸರ್ಕಾರಿಗೆ ಭೂಮಾಪಕರು ನಿರ್ವಹಿಸಬಹುದಾದ ಎಲ್ಲಾ ಕೆಲಸವನ್ನು ಪರವಾನಗಿ ಭೂಮಾಪಕರು ನಿರ್ವಹಿಸಲು ಆವಕಾಶ ಮಾಡಿಕೊಡಲಾಗಿತ್ತು. ಅದರಂತೆ ವಿಭಾಗ, ದಾನ, ಕ್ರಯ, ಇದಕ್ಕೆ ಸಂಬಂಧಪಟ್ಟಂತೆ 11-ಇ ನಕ್ಷೆ ತಯಾರಿಸುವುದು.
ಸರ್ಕಾರಿ ಹುದ್ದೆಯಲ್ಲಿ ಸಕ್ರಮಗೊಳಿಸಲು ಪೂರಕವಾದ ಅಂಶಗಳು.
2002 ರಿಂದ 23 ವರ್ಷಗಳ ಸುಧೀರ್ಘ ಸೇವೆ
ಸರ್ಕಾರಿ ಭೂಮಾಪಕರು ನಿರ್ವಹಿಸುತ್ತಿರುವ ಕೆಲಸಕ್ಕೆ ಸರಿ ಸಮಾನಾದ ಕೆಲಸಗಳನ್ನು ನಿರ್ವಹಿಸುತ್ತಿರುವುದು.
ಸರ್ಕಾರಿ ಭೂಮಾಪಕರಿಗೆ ನೀಡುವಂತ ತರಭೇತಿಗೆ ಸರಿ ಸಮನಾದ ತರಭೇತಿ ಪಡೆದಿರುವುದು
ವಿದ್ಯಾರ್ಹತೆ ತರಭೇತಿ ಇಬ್ಬರಿಗೂ ಒಂದು ಸಮಾನತೆಯಾಗಿರುತ್ತದೆ.
ಭೂ.ದಾ.ಸ 88 ರಲ್ಲಿ ಪೂರಕವಾದ ವಿಷಯಗಳ ಕುರಿತು ಕಾನೂನಾತ್ಮಕ ಆಧಾರಗಳು
ಮುಖ್ಯಮಂತ್ರಿಗಳು ಭೂಮಾಪನ ದಿನಚಾರಣೆಯಂದು ನೀಡಿದ ಆಶ್ವಾಸನೆ ಮೇರೆಗೆ ಈ ಮೇಲಿನ ಅಂಶಗಳನ್ನು ಒಳಗೊಂಡಂತೆ ಪರವಾನಗಿ ಭೂಮಾಪಕರಿಗೆ ಒಂದು ಬಾರಿ ವಿಶೇಷ ನೇಮಕಾತಿ ಅಡಿಯಲ್ಲಿ ಸರ್ಕಾರಿ ಭೂಮಾಪಕರಾಗಿ ಸಕ್ರಮಗೊಳಿಸಿಕೊಂಡು ಇಲಾಖೆಯಲ್ಲಿ ಕೆಲಸ ನಿರ್ವಹಿಸಲು ಅವಕಾಶ ಮಾಡಿಕೊಡಬೇಕೆಂದು ಅಥವಾ “ಸಮಾನಕ್ಕೆ ಸಮಾನ ವೇತನ” ಎಂಬ ಶೀರ್ಷಿಕೆ ಅಡಿಯಲ್ಲಿ ಸಂಭಾವನೆಯನ್ನು ಸರಿದೊಗಿಸಿ ಅವಕಾಶ ಕಲ್ಪಿಸುವಂತೆ ಡಿಮ್ಯಾಂಡ್ ಮಾಡಿದರು. ಪರವಾನಗಿ ಭೂ ಮಾಪಕರಿಗೆ ಮತ್ತು ಸರ್ಕಾರಿ ಭೂ ಮಾಪರೆಗೆ ಮಲತಾಯಿ ಧೋರಣಿ ಸರ್ಕಾರ ಮಾಡಬಾರದೆಂದು , ನಮ್ಮ ಜೀವನ ಅತಂತ್ರವಾಗಿದೆ ಎಂದು ತಿಳಿಸಿದರು. ಆರೋಗ್ಯ ವಿಮೆ ಇಲ್ಲ ಟಿ ಏ, ಡಿ ಏ ಇಲ್ಲ ಜೀವನದ ಭದ್ರತೆ ಇಲ್ಲ ಮುಖ್ಯ ವಾಗಿರುವ ಪಿಂಚಣಿ ಇಲ್ಲ ಎಂದು ಅಧ್ಯಕ್ಷ ತಿರುಮಲೆ ಗೌಡ ತಿಳಿಸಿದರು. ಈ ಪತ್ರಿಕಾಗೋಷ್ಟಿ ಯಲ್ಲಿ , ಪ್ರಸನ್ನಕುಮಾರ್ , ಸಿದ್ಧರಾಜು ಮುಂತಾದವರು ಉಪಸ್ಥಿತರಿದ್ದರು.
ವರದಿ. ಮಂಜುಳಾ ರೆಡ್ಡಿ.

Related Articles

Leave a Reply

Your email address will not be published. Required fields are marked *

Back to top button