ಪತ್ರಿಕೋದ್ಯಮ

ಆರ್ ಕೆ ದೊಡ್ಮನಿ ( ರಾಧಾಕೃಷ್ಣ ಜೀ ) ಸಂಸದರು ಕಲಬುರ್ಗಿ ಲೋಕಸಭಾ ಕ್ಷೇತ್ರ ಇವರ ಬಗ್ಗೆ ಜವಾಬ್ದಾರಿಯುತವಾಗಿ ಮಾತನ್ನಾಡಬೇಕು. ಶಂಕರ್ ಕೊಡ್ಲಾ.

ಆರ್ ಕೆ ದೊಡ್ಮನಿ ( ರಾಧಾಕೃಷ್ಣ ಜೀ ) ಸಂಸದರು ಕಲಬುರ್ಗಿ ಲೋಕಸಭಾ ಕ್ಷೇತ್ರ ಇವರ ಬಗ್ಗೆ ಜವಾಬ್ದಾರಿಯುತವಾಗಿ ಮಾತನ್ನಾಡಬೇಕೆಂದು ಶ್ರೀ ಶಂಕರ್ ಕೊಡ್ಲಾ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. .

ಆರೋಗ್ಯ ಸರಿಯಿಲ್ಲದ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂಸದರಿಗೆ ಮಾನಸಿಕ ಹಿಂಸೆ ಕೊಡುವುದು ಮಾನವೀಯತೆಯ ಲಕ್ಷಣವಲ್ಲ.

ಕಳೆದ 50 ವರ್ಷದಿಂದಲೂ ರಾಜಕೀಯದಲ್ಲಿದ್ದು ಕಾಂಗ್ರೆಸ್ ಪಕ್ಷವನ್ನೇ ತಮ್ಮ ಉಸಿರಾಗಿಸಿಕೊಂಡಿರುವ ಸನ್ಮಾನ್ಯ ಶ್ರೀ ಆರ್ ಕೆ ದೊಡ್ಡಮನಿ ಅವರು ಸಾರ್ವಜನಿಕ ಕ್ಷೇತ್ರದಲ್ಲಿಯೇ ತಮ್ಮ ಜೀವನ ಸವಿಸಿದ್ದ ಸಂಭಾವಿತ ವ್ಯಕ್ತಿ. ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರ ರಾಜಕೀಯ ನೆರಳಿನಲ್ಲಿಯೇ ಬೆಳೆದು ಹಲವಾರು ರಾಜಕೀಯ ಪಟ್ಟುಗಳನ್ನು ಕರತಲಾಮಲಕ ಮಾಡಿಕೊಂಡಿರುವಂತಹ ವ್ಯಕ್ತಿ.

2023 ರ ವರೆಗೂ ಎಲೆಮರೆಕಾಯಿಯಂತೆ ರಾಜಕೀಯದಲ್ಲಿ ಕಾರ್ಯನಿರ್ವಹಿಸುತ್ತಾ ಹಿಂದುಳಿದ ಕಲಬುರ್ಗಿ ಪ್ರದೇಶದಲ್ಲಿ ಹಲವಾರು ಜನ ಉಪಯೋಗಿ, ಅಭಿವೃದ್ಧಿ ಕೆಲಸ – ಕಾರ್ಯಗಳನ್ನು ಮರೆಯಲ್ಲಿದ್ದುಕೊಂಡೆ ಮಾಡುತ್ತಾ ಬಂದವರು.

ರಾಜಕೀಯ ಅನಿವಾರ್ಯತೆಯ ಸಂದರ್ಭದಲ್ಲಿ 2023ರಲ್ಲಿ ಕಲಬುರ್ಗಿ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ನಿಂದ ಆಯ್ಕೆಯಾಗಿ ಜನಮಾನಸ, ಜನಸಾಗರದಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ 50 ವರ್ಷಗಳಿಂದಲೂ ಹಲವಾರು ಸಾರ್ವಜನಿಕ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದರೂ ಕೂಡ, ನಾನು ಮಾಡಿದ್ದೇನೆ ಎಂದು ಸಾರ್ವಜನಿಕವಾಗಿ ಎಲ್ಲಿಯೂ ಹೇಳಿಕೊಳ್ಳಲಿಲ್ಲ. ಯಾವುದೇ ಪತ್ರಿಕೆ, ಟಿ.ವಿ. ಚಾನೆಲ್ ಗಳಲ್ಲಿ ಸಂದರ್ಶನ ಕೊಡಲಿಲ್ಲ ಹಾಗೂ ಸಾರ್ವಜನಿಕರಲ್ಲಿ ಹೇಳಿಕೊಳ್ಳಲಿಲ್ಲ. ಅಜಾತಶತ್ರುವಾಗಿ, ಶಿಕ್ಷಣ ಪ್ರೇಮಿಯಾಗಿ, ಅಭಿವೃದ್ಧಿ ಹರಿಕಾರರಾಗಿ, ಹಿಂದುಳಿದ ಕಲಬುರ್ಗಿ ಪ್ರದೇಶವನ್ನು ಅಭಿವೃದ್ಧಿಪಡಿಸಿದವರು.

ಹೈದರಾಬಾದ್ ಕರ್ನಾಟಕ ಪ್ರದೇಶವೆಂದು ನಂತರ ಕಲ್ಯಾಣ ಕರ್ನಾಟಕ ಪ್ರದೇಶವೆಂದು ಘೋಷಣೆಯಾಗಲು ತೆರೆಮರೆಯಲ್ಲಿ ಇವರ ಅಗಾಧ ಪರಿಶ್ರಮವಿದೆ. ಮಾವನವರಾದ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯ ಮತ್ತು ಕೇಂದ್ರ ರಾಜಕಾರಣದಲ್ಲಿ ಯಾವ ಯಾವ ಹುದ್ದೆಯಲ್ಲಿ ವಿರಾಜಮಾನರಾಗುತ್ತಾರೋ, ಆಯಾ ಹುದ್ದೆಗೆ ಸಂಬಂಧಪಟ್ಟ ಇಲಾಖೆಯಲ್ಲಿ ಸಿಕ್ಕುವ ಜನೋಪಯೋಗಿ ಪ್ರಗತಿ ಕೆಲಸಗಳನ್ನು ಹುಡುಕಿ ತೆಗೆದು ಅವುಗಳನ್ನು ಪ್ರಥಮವಾಗಿ ಕಲಬುರ್ಗಿ ಪ್ರದೇಶದಲ್ಲಿಯೇ ಪ್ರಯೋಗಿಸಿ, ಸ್ಥಾಪನೆಯಾಗಲು ಶ್ರಮಿಸಿದ ಸಭ್ಯ ವ್ಯಕ್ತಿ. ಅದು ಇ.ಎಸ್.ಐ. ಆಸ್ಪತ್ರೆಯಾಗಿರಬಹುದು. ಹೈ ಕೋರ್ಟ್ ಕಲ್ಬುರ್ಗಿ ಬೆಂಚ್ ಆಗಿರಬಹುದು. ಬೌದ್ಧ ( ಬುದ್ಧ ವಿಹಾರ ) ಮಂದಿರವಾಗಿರಬಹುದು. ಕೇಂದ್ರೀಯ ವಿಶ್ವವಿದ್ಯಾಲಯ. ತೊಗರಿ ಬೇಳೆ ಮಂಡಳಿ. ಕೃಷ್ಣ ಮೇಲ್ದಂಡೆ ಯೋಜನೆ, ಭೀಮಾ ಏತ ನೀರಾವರಿ ಯೋಜನೆಗಳು, ವಿಶೇಷವಾಗಿ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯದ ಜಲ ಸಂಪನ್ಮೂಲ ಇಲಾಖೆಯ ಸಚಿವರಾಗಿದ್ದಾಗ ಜೇವರ್ಗಿಯ ಪಕ್ಕದಲ್ಲಿ ಹರಿದು ಹೋಗುತ್ತಿರುವ ಭೀಮ ನದಿಗೆ ಸುಮಾರು ಎಂಟು ಬ್ಯಾರೇಜ್ ಕಮ್ ಬ್ರಿಡ್ಜ್ ಗಳನ್ನು ನಿರ್ಮಿಸುವುದರಲ್ಲಿ ಖರ್ಗೆಯವರ ನೆರಳಿನಲ್ಲಿ ಇವರದ್ದು ಕೂಡ ಆಘಾದ ಶ್ರಮವಿದೆ.

2023ರಲ್ಲಿ ಇವರ ಪರಿಶ್ರಮಕ್ಕೆ ತಕ್ಕ ಕೊಡುಗೆಯಾಗಿ ಕಲಬುರ್ಗಿ ಲೋಕಸಭಾ ಸದಸ್ಯರಾಗಿ ತಮ್ಮ ಎರಡನೇ ಇನಿಂಗ್ಸ್ ಆರಂಭಿಸಿದರು.

ಕೆಲವು ತಿಂಗಳಿನಿಂದ ಆರ್.ಕೆ. ದೊಡ್ಮನಿಯವರು, ಮಾನ್ಯ ಲೋಕಸಭಾ ಸದಸ್ಯರು ಕಲಬುರ್ಗಿ ಲೋಕಸಭಾ ಕ್ಷೇತ್ರ ಇವರು ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜಕೀಯ ವಿರೋಧಿಗಳು, ರಾಜಕೀಯ ವೈಷ್ಯಮ್ಯಾದಿಂದ ಕಳೆದ ಕೆಲದಿನಗಳ ಹಿಂದೆ ವಿಜಯವಾಣಿ ಪತ್ರಿಕೆಯಲ್ಲಿ ಕಲಬುರ್ಗಿ ಸಂಸದರು ಕಳೆದು ಹೋಗಿದ್ದಾರೆ ಹುಡುಕಿಕೊಡಿ. ಎಂಬ ಶಿರೋನಾಮೆಯಲ್ಲಿ ಪುಕ್ಕಟೆ ಪ್ರಚಾರ ಪಡೆಯುವುದಕ್ಕಾಗಿ ಕೆಲ ಜನರು ಮಾಧ್ಯಮದ ಮೂಲಕ ಇಲ್ಲ-ಸಲ್ಲದ ಅಪಪ್ರಚಾರಗಳನ್ನು ನಡೆಸುತ್ತಿರುವುದು ತುಂಬಾ ಬೇಸರದ ವಿಷಯ ಎಂದು ಜೈ ಭೀಮ ಕನ್ನಡ ದಿನಪತ್ರಿಕೆಯ ಸಂಪಾದಕರು, ಶಿಕ್ಷಣ ಪ್ರೇಮಿ, ಮತ್ತು SSV ಟಿವಿ ಚಾನೆಲ್ ಎಂ.ಡಿ. ಆಗಿರುವ ಶ್ರೀ ಶಂಕರ್ ಕೊಡ್ಲಾ ಅವರು ತುಂಬಾ ನೊಂದುಕೊಂಡಿದ್ದಾರೆ.

ಆರೋಗ್ಯ ಸರಿ ಇಲ್ಲದೇ ಆಸ್ಪತ್ರೆಯಲ್ಲಿರುವ ಜನಪ್ರಿಯ ಜನನಾಯಕ ವ್ಯಕ್ತಿಯ ತೊಂದರೆಗಳನ್ನು ಗಮನಿಸದೇ ಹೀಯಾಳಿಸಬಾರದು. ಪ್ರಚಾರಕ್ಕಾಗಿ ತುಂಬಾ ತಳಮಟ್ಟಕ್ಕೆ ಇಳಿಯಬಾರದಾಗಿತ್ತು ಎಂದು ಶ್ರೀ ಶಂಕರ್ ಕೋಡ್ಲಾ ಅವರು ನೊಂದು ನುಡಿಯುತ್ತಿದ್ದಾರೆ.

ಶ್ರೀ ಆರ್ ಕೆ ದೊಡ್ಮನಿ ಸಂಸದರು ಕಲಬುರ್ಗಿ ಲೋಕಸಭಾ ಇವರು ಶೀಘ್ರದಲ್ಲಿ ಗುಣಮುಖರಾಗಲಿ. ಆರ್ ಕೆ ದೊಡ್ಡಮನಿ ಅವರಿಗೆ ಆ ಭಗವಂತನು ಆಯುರಾರೋಗ್ಯ ಭಾಗ್ಯ ಕೊಟ್ಟು ಸಾರ್ವಜನಿಕ ಕ್ಷೇತ್ರಕ್ಕೆ ತೀವ್ರದಲ್ಲಿ ಹಿಂದಿರುಗಲಿ, ಹೊಸ ಚೈತನ್ಯ ಮೈಗೂಡಿಸಿಕೊಂಡು ಬಂದು ಕಲಬುರ್ಗಿ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ದುಡಿಯುವಂತಾಗಲಿ ಎಂದು ನಾವೆಲ್ಲ ಆಶಿಸೋಣ. ಹರಸಿ, ಹಾರೈಸೋಣ ಭಗವಂತನಲ್ಲಿ ಪ್ರಾರ್ಥಿಸೋಣ.

Related Articles

Leave a Reply

Your email address will not be published. Required fields are marked *

Back to top button