ಸಂಪಾದಕೀಯ

ಕನಕಚಲಪತಿ ಜಾತ್ರಿ ನಿಮಿತ್ತ ಪಟ್ಟಣ ಪಂಚಾಯಿತಿ ವತಿಯಿಂದ ಪೂರ್ವಭಾವಿ ಸಭೆ

ಕನಕಚಲಪತಿ ಜಾತ್ರಿ ನಿಮಿತ್ತ ಪಟ್ಟಣ ಪಂಚಾಯಿತಿ ವತಿಯಿಂದ ಪೂರ್ವಭಾವಿ ಸಭೆ

ಕನಕಗಿರಿ ಪಟ್ಟಣದ ಆರಾಧ್ಯದಯುವಾಗ ಶ್ರೀ ಕನಕ ಚಲಪತಿ ಲಕ್ಷ್ಮೀನಾರಸಿಂಹ ಜಾತ್ರೆ ಮಹೋತ್ಸವದ ಅಂಗವಾಗಿ ಪೂರ್ವಭಾವಿ ಸಭೆಯನ್ನು ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಲಕ್ಷ್ಮಣ್ ಕಟ್ಟಿಮನಿ ಹಾಗೂ ಶ್ರೀಮತಿ ತನುಶ್ರೀ ಟಿ ಜಿ ರಾಮಚಂದ್ರ ಅವರ ನೇತೃತ್ವದಲ್ಲಿ ನಡೆಯಿತು.

ಈ ವೇಳೆ ಜಾತ್ರೆ ನಿಮಿತ್ತ ಪಟ್ಟಣದ ಸ್ವಚ್ಛತೆ ಹಾಗೂ ನೀರಿನ ಸೌಲಭ್ಯಗಳು ಕುರಿತಂತೆ ಸಿದ್ಧತೆಗಳನ್ನು ಮಾಡಬೇಕಾಗಿರುತ್ತದೆ ಮತ್ತು ವೆಂಕಟಪತಿ ಬಾವಿ ಪುಷ್ಕರಣಿ ಹಾಗೂ ಕನಕಾಚಲಪತಿ ದೇವಸ್ಥಾನದ ಬಳಿಯಲ್ಲಿರುವ ತ್ರಿವೇಣಿ ಸಂಗಮವನ್ನು ಸ್ವಚ್ಛಗೊಳಿಸುವುದರ ಬಗ್ಗೆ ಮತ್ತು ಗಂಗಾವತಿಯಿಂದ ಪೌರಕಾರ್ಮಿಕರ ಕರೆಸಿ ಜಾತ್ರೆಗೆ ಬಂದಂತ ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಿ ಕೊಡಬೇಕಾಗಿರುತ್ತದೆ .
ಹಾಗೂ ವಿದ್ಯುತ್ ಬಲ್ಪ್ ಗಳನ್ನು ಬೀದಿ ದೀಪಗಳನ್ನು ಕಲ್ಪಿಸಿ ಕೊಡುವುದರ ಬಗ್ಗೆ ಮತ್ತು ಪಬ್ಲಿಕ್ ಐ ಮ್ಯಾಕ್ಸ್ ಬಲ್ಪುಗಳನ್ನು ರಿಪೇರಿ ಮಾಡಲು ಮತ್ತು ಮರುಕಲ್ಪಿಸಿಕೊಡಲು ಒತ್ತಾಯ ಮಾಡಿದರು ರಾಜಭೀದಿಯ ರಸ್ತೆಯನ್ನು ಸ್ವಚ್ಛತೆ ಮಾಡಿಸಿ ಕೊಡಬೇಕೆಂದು ಪಟ್ಟಣ ಪಂಚಾಯಿತಿಯ ಮುಖ್ಯ ಅಧಿಕಾರಿಗಳಿಗೆ ಸಭೆಯಲ್ಲಿ ಜನಪ್ರತಿನಿಧಿಗಳಾದ ಶರಣೇಗೌಡ ಪಾಟೀಲ್ ನಂದಾಪುರ ರಾಜ ಮತ್ತು ನೂರ್ಸಾಬ್ ಗಡ್ಡಿ ಗಲ್ ಸೂಚನೆ ನೀಡಿ ಅವರ ಅಭಿಪ್ರಾಯವನ್ನು ವ್ಯಕ್ತಪಡಿಸಲಾಯಿತು.

ನಂತರ ಪಟ್ಟಣ ಪಂಚಾಯಿತಿ ಸದಸ್ಯರಿಂದ ಪೈಪ್ ಲೈನ್ ಕಳಪೆ ಕಾಮಗಾರಿಗೆ ಮಾಡಿದ್ದಾರೆ ಮತ್ತು ನಿಧಾನ ಸಾಗುತ್ತಿದೆ ಒಟ್ಟಾರೆ ಎರಡು ನೂರು ಕೋಟಿ ಅನುದಾನ ಇರುವಂತಹ ಕಾಮಗಾರಿಕೆಯನ್ನು ಕಳಪೆ ಮಟ್ಟದಲ್ಲಿ ನಡೆಯುತ್ತಿದೆ ಎಂದು ತಿಳಿಸಿದರು ಪಟ್ಟಣ ಪಂಚಾಯಿತಿಯ ಸದಸ್ಯರಾದ ರಾಜಾನಂದಾಪುರ್ ಅವರು ಮುಖ್ಯ ಅಧಿಕಾರಿಗಳಿಗೆ ಹಾಗೂ ಕಾಂಟ್ರಾಕ್ಟರ್ ಗಳಿಗೆ ತರಾಟೆಗೆ ತೆಗೆದುಕೊಂಡರು .

ನಂತರ ಬಂದ ಭಕ್ತಜನರಿಗೆ ತ್ರಿವೇಣಿ ಸಂಗಮವನ್ನು ಸ್ವಚ್ಛಗೊಳಿಸಿ ಬಂದಂತ ಭಕ್ತಾದಿಗಳಿಗೆ ಸ್ವಚ್ಛ ಕುಡಿಯುವ ನೀರನ್ನು ಕಲ್ಪಿಸಿ ಕೊಡ ಬೇಕಾಗಿರುತ್ತದೆ ಮತ್ತೆ ತ್ರಿವೇಣಿ ಸಂಗಮದಲ್ಲಿ ಈಗ ಇರುವ ನೀರನ್ನು ತೆರವುಗೊಳಸಿ ಪುನಃ ಕೆರೆಯಿಂದ ಸ್ವಚ್ಛವಾದ ನೀರನ್ನು ಬಿಡಿಸಿ ಬೇಕಾಗಿರುತ್ತದೆ ಎಂದು ಸಲಹೆ ನೀಡಿದರು .

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಲಕ್ಷ್ಮಣ್ ಕಟ್ಟಿಮನಿ ಇಂಜಿನಿಯರ್ ಮಂಜುನಾಥ್ ಮತ್ತು ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ತನುಶ್ರೀ ಟಿ ಜಿ ರಾಮಚಂದ್ರ ಮಾಜಿ ಅಧ್ಯಕ್ಷ ಹುಸೇನ್ ಬಿ ಚಳ್ಳು-ಮರದ್ ಸದಸ್ಯರಾದ ಶರಣೆಗೌಡ ನೂರ್ ಸಾಬ್ ಗಡ್ಡಿ ಗಲ್ ರಾಜ ನಂದಾಪುರ್ ಗಂಗಾಧರ್ ಚೌಡಕಿ ಹನುಮೇಶ್ ಹಡಪದ್ ಉಪಸ್ಥಿತರಿದ್ದರು.
ಗೌತಮ್ ಯಾದವ್ ಕನಕಗಿರಿ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ 8867257737

Related Articles

Leave a Reply

Your email address will not be published. Required fields are marked *

Back to top button