ಕಾರ್ಮಿಕ ದಿನಾಚರಣೆಯ ಪ್ರಯುಕ್ತ ಕಾರ್ಮಿಕ ಸೇವಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ – ಬಿ ಪ್ರಸಾದ್ ಆರಾಧ್ಯ

ಕಾರ್ಮಿಕ ದಿನಾಚರಣೆಯಪ್ರಯುಕ್ತ ಕಾರ್ಮಿಕ ಸೇವಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ – ಬಿ ಪ್ರಸಾದ್ ಆರಾಧ್ಯ
ಬೆಂಗಳೂರು. ಕಾರ್ಮಿಕ ದಿನಾಚರಣೆಯಪ್ರಯುಕ್ತ ಕಾರ್ಮಿಕ ಸೇವಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ – ಬಿ ಪ್ರಸಾದ್ ಆರಾಧ್ಯ ಅವರು ತಿಳಿಸಿದರು . 14 ರಂದು ಪ್ರೆಸ್ ಕ್ಲಬ್ ನಲ್ಲಿ ಇಂಡಿಯನ್ ನ್ಯಾಶನಲ್ ಟ್ರೇಡ್ ಯೂನಿಯನ್ ಕಾಂಗ್ರೇಸ್ (ಫೆಡರೇಷನ್)(INTUC(F)-ಕರ್ನಾಟಕದ ವತಿಯಿಂದ ರಾಜ್ಯಾಧ್ಯಕ್ಷರಾದ ಬಿ ಪ್ರಸಾದ್ ಆರಾಧ್ಯ ಅವರು ಇಂದು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ತಿಳಿಸಿದರು.
31 ರಂದು ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ಕೆ ಆರ್ ಪುರ ವಿಧಾನ ಸಭಾಕ್ಷೇತ್ರದ ಕಲ್ಕೆರೆ ವಾರ್ಡ್ ನ ರಾಜ್ ಕುಮಾರ್ ಸರ್ಕಲ್ ನಲ್ಲಿ ಕಾರ್ಮಿಕ ದಿನಾಚರಣೆಯ ಪ್ರಯುಕ್ತ ಕಾರ್ಮಿಕ ಸೇವಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಬೆಂಗಳೂರು ಪೂರ್ವ ಜೆಲ್ಲೆಯ ಐ ಎನ್ ಟಿ ಯು ಸಿ (ಎಫ್) ನ ಕಚೇರಿ ಉದ್ಘಾಟನೆ ಹಮ್ಮಿಕೊಂಡಿದ್ದು, ಈ ಸಮಾರಂಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ರಾಜ್ಯಸಭಾ ಸದಸ್ಯರಾದ ಜಿ ಸಿ ಚಂದ್ರಶೇಖರ್, ಕಾಂಗ್ರೆಸ್ ಪಕ್ಷದ ರಾಜಕಾರಣಿಗಳು, ಹಲವಾರು ಗಣ್ಯರು, ಚಲನಚಿತ್ರ ನಟ/ನಟಿಯರು, ಪ್ರಶಸ್ತಿ ಪುರಸ್ಕೃತರು ಸೇರಿದಂತೆ 1000 ದಿಂದ 1500 ಜನ ಸೇರುವ ಬಗ್ಗೆ ಮಾಹಿತಿ ನೀಡಿದರು . INTUC (ಫೆಡರೇಶನ್) ಡಾ. ಸಂಜೀವ ರೆಡ್ಡಿ ಅವರ INTUC ಸಂಘಟನೆಯಿಂದ ಸಂಪೂರ್ಣವಾಗಿ ಪ್ರತ್ಯೇಕವಾಗಿದೆ. ಅವರ ನೋಂದಣಿ ಬೇರೆ, ನಮ್ಮ ನೋಂದಣಿ ಬೇರೆ.
ಭಾರತೀಯ ರಾಷ್ಟ್ರೀಯ ಕಾರ್ಮಿಕ ಕಾಂಗ್ರೆಸ್ (ಫೆಡರೇಶನ್) ಕರ್ನಾಟಕ ರಾಜ್ಯಾಧ್ಯಕ್ಷನಾಗಿ, ಕರ್ನಾಟಕದ ಪ್ರತಿಯೊಬ್ಬ ಕಾರ್ಮಿಕರ ಹಕ್ಕುಗಳ ರಕ್ಷಣೆಗೆ — ನೌಕರರು, ಗುತ್ತಿಗೆ ಕಾರ್ಮಿಕರು, ಕೈಗಾರಿಕಾ ಕಾರ್ಮಿಕರು, ಸಾರಿಗೆ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಅಗ್ನಿಶಾಮಕ ಸಿಬ್ಬಂದಿ, ಅಸಂಘಟಿತ ಕ್ಷೇತ್ರದ ಕಾರ್ಮಿಕರು ಮತ್ತು ಯುವ ಕಾರ್ಮಿಕರ ಪರವಾಗಿ — ನಿರಂತರ ಹೋರಾಟ ನಡೆಸುವ ಸಂಕಲ್ಪ ಮಾಡುತ್ತೇನೆ.
ಇಂದು ಕಾರ್ಮಿಕ ವರ್ಗ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ — ಬೆಲೆ ಏರಿಕೆ, ತಾತ್ಕಾಲಿಕ ಉದ್ಯೋಗ, ಗುತ್ತಿಗೆ ಪದ್ಧತಿ, ವೇತನ ಅಸಮಾನತೆ, ಸಾಮಾಜಿಕ ಭದ್ರತೆ ಕೊರತೆ, ಸುರಕ್ಷಿತವಲ್ಲದ ಕೆಲಸದ ಪರಿಸ್ಥಿತಿ ಮತ್ತು ಕಾರ್ಮಿಕ ಕಾನೂನುಗಳ ಸರಿಯಾದ ಅನುಷ್ಠಾನ ಇಲ್ಲದಿರುವುದು. ಈ ಎಲ್ಲಾ ವಿಷಯಗಳಲ್ಲಿ ಭಾರತೀಯ ರಾಷ್ಟ್ರೀಯ ಕಾರ್ಮಿಕ ಕಾಂಗ್ರೆಸ್ (ಫೆಡರೇಶನ್) ಸಂಘಟಿತ ಮತ್ತು ಪ್ರಜಾಪ್ರಭುತ್ವದ ಹೋರಾಟ ನಡೆಸಲಿದೆ.
ಕರ್ನಾಟಕದಲ್ಲಿ ಕಾರ್ಮಿಕರ ಕಲ್ಯಾಣಕ್ಕಾಗಿ ಕೆಳಗಿನ ಆದ್ಯತೆಗಳನ್ನು ಕೈಗೊಳ್ಳಲಾಗುತ್ತದೆ:
- ಕನಿಷ್ಠ ವೇತನ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದು.
- ಗುತ್ತಿಗೆ ಮತ್ತು ಅಸಂಘಟಿತ ಕಾರ್ಮಿಕರನ್ನು ಸಾಮಾಜಿಕ ಭದ್ರತಾ ಯೋಜನೆಗಳಿಗೆ ಸಂಪರ್ಕಿಸುವುದು.
- ESI, PF, ಪಿಂಚಣಿ ಮತ್ತು ವೈದ್ಯಕೀಯ ಸೌಲಭ್ಯಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಅಭಿಯಾನ ನಡೆಸುವುದು.
- ಮಹಿಳಾ ಕಾರ್ಮಿಕರ ಸುರಕ್ಷತೆ, ಸಮಾನ ವೇತನ ಮತ್ತು ಮಾತೃತ್ವ ಹಕ್ಕುಗಳ ರಕ್ಷಣೆ.
- ಕೈಗಾರಿಕಾ ಪ್ರದೇಶಗಳಲ್ಲಿ ಕಾರ್ಮಿಕ ಸಹಾಯ ಮತ್ತು ಕಾನೂನು ಮಾರ್ಗದರ್ಶನ ಕೇಂದ್ರಗಳನ್ನು ಸ್ಥಾಪಿಸುವುದು.
- ಅಪಘಾತ ವಿಮೆ, ಆರೋಗ್ಯ ಶಿಬಿರ ಮತ್ತು ಕಾರ್ಮಿಕ ಕುಟುಂಬ ಕಲ್ಯಾಣ ಕಾರ್ಯಕ್ರಮಗಳನ್ನು ಆಯೋಜಿಸುವುದು.
- ನಿರುದ್ಯೋಗಿ ಯುವಕರಿಗೆ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಮಾರ್ಗದರ್ಶನ ಕಾರ್ಯಕ್ರಮಗಳು.
- ಅನ್ಯಾಯ, ಶೋಷಣೆ ಮತ್ತು ಅಕ್ರಮ ಕೆಲಸದಿಂದ ವಜಾಗೊಳಿಸುವಿಕೆಯ ವಿರುದ್ಧ ಕಾನೂನು ಹೋರಾಟ.
- ಅಗ್ನಿಶಾಮಕ, ಸಾರಿಗೆ, ನಗರಸಭೆ ಮತ್ತು ಸಾರ್ವಜನಿಕ ವಲಯದ ನೌಕರರ ಸಮಸ್ಯೆಗಳನ್ನು ಸರ್ಕಾರದ ಮುಂದೆ ಬಲವಾಗಿ ಮಂಡಿಸುವುದು.
- ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ INTUC (ಫೆಡರೇಶನ್) ಸಂಘಟನೆಯನ್ನು ಬಲಪಡಿಸಿ ಕಾರ್ಮಿಕರ ಏಕತೆಗೆ ಹೊಸ ದಿಕ್ಕು ನೀಡುವುದು.
ನಮ್ಮ ಉದ್ದೇಶ ಕೇವಲ ಪ್ರತಿಭಟನೆ ನಡೆಸುವುದು ಮಾತ್ರವಲ್ಲ; ಕಾರ್ಮಿಕರಿಗೆ ಗೌರವ, ಭದ್ರತೆ ಮತ್ತು ನ್ಯಾಯ ದೊರಕಿಸುವುದಾಗಿದೆ. ಕಾರ್ಮಿಕರು ದೇಶದ ಆರ್ಥಿಕತೆಯ ಬೆನ್ನೆಲುಬು ಆಗಿದ್ದು, ಅವರ ಹಿತಾಸಕ್ತಿಗಳನ್ನು ರಕ್ಷಿಸುವುದು ರಾಷ್ಟ್ರ ನಿರ್ಮಾಣದ ಪ್ರಮುಖ ಕರ್ತವ್ಯವಾಗಿದೆ.
ಕರ್ನಾಟಕದ ಎಲ್ಲಾ ಕಾರ್ಮಿಕ ಸಹೋದರರು ಮತ್ತು ಸಹೋದರಿಯರಿಗೆ ನನ್ನ ಮನವಿ ಏನೆಂದರೆ, ತಮ್ಮ ಹಕ್ಕುಗಳು, ಗೌರವ ಮತ್ತು ಸುರಕ್ಷಿತ ಭವಿಷ್ಯಕ್ಕಾಗಿ ಭಾರತೀಯ ರಾಷ್ಟ್ರೀಯ ಕಾರ್ಮಿಕ ಕಾಂಗ್ರೆಸ್ (ಫೆಡರೇಶನ್) ಜೊತೆ ಸೇರಿ ಬಲಿಷ್ಠ ಕಾರ್ಮಿಕ ಚಳವಳಿಯ ಭಾಗವಹಿಸಿರಿ ಎಂದು ಕರೆ ನೀಡಿದರು .INTUC(F)-ಕರ್ನಾಟಕದ ವತಿಯಿಂದ ರಾಜ್ಯಾಧ್ಯಕ್ಷರಾದ ಬಿ ಪ್ರಸಾದ್ ಆರಾಧ್ಯ, ಡಾ. ಸಾಯಿ ಸುದರ್ಧನ್, ರಾಜೇಂದ್ರ ಎಸ್ ವಿ, ಹರೀಶ್, ಪುಷ್ಪಲತಾ, ಮುನಿರಾಜು, ಮುಂತಾದವರು ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ವರದಿ. ಮಂಜುಳಾ ರೆಡ್ಡಿ.



