ಸಂಪಾದಕೀಯ

ಕುಟುಂಬ ಸಮೇತ ಕನಕಗಿರಿ ಕನಕಾಚಲಪತಿ ದರ್ಶನ ಪಡೆದ ,ಜಿಲ್ಲಾಧಿಕಾರಿ.

ಕುಟುಂಬ ಸಮೇತ ಕನಕಗಿರಿ ಕನಕಾಚಲಪತಿ ದರ್ಶನ ಪಡೆದ: ಡಿಸಿ ನಳೀನ್ ಅತುಲ್

ಕನಕಗಿರಿ ಪಟ್ಟಣಕ್ಕೆ ಶುಕ್ರವಾರ ಸಂಜೆ ಆಗಮಿಸಿರುವಂತಹ ಜಿಲ್ಲಾಧಿಕಾರಿಗಳಾದ ನಳಿನ್ ಅತುಲ್ ಅವರು ಪಟ್ಟಣದ ಐತಿಹಾಸಿಕ ಎರಡನೇ ತಿರುಪತಿ ಎಂದು ಪ್ರಸಿದ್ಧವಾದ ದೇವಸ್ಥಾನ ಶ್ರೀ ಕನಕಚಲ ಲಕ್ಷ್ಮೀನಾರಸಿಂಹ ದರ್ಶನ ಪಡೆದು ಶ್ರೀ ಕನಕಾಚಲಪತಿ ಕೃಪೆಗೆ ಪಾತ್ರರಾದ ಕೊಪ್ಪಳ ಜಿಲ್ಲಾಧಿಕಾರಿ ನಳಿನ್ ಅತುಲ್ ಹಾಗೂ ಅವರ ಪತ್ನಿ.

ಕನಕಗಿರಿಯು ಎರಡನೆಯ ತಿರುಪತಿ ಎಂದು ಪ್ರಸಿದ್ಧವಾಗಿದ್ದು ವಿಶೇಷವಾಗಿ 700 ಗೊಲ್ಲಿಕೆ 700 ದೇವಸ್ಥಾನಗಳು ಹಾಗೂ ಏಳನೂರು ಬಾವಿಗಳು ಇರುವಂತ ಸ್ಥಳವಾಗಿದ್ದು ವಿಜಯನಗರ ಸಾಮ್ರಾಜ್ಯದ ಒಂದು ಸಂಸ್ತನದ ಭಾಗವಾಗಿರುವ ಸುವರ್ಣ ಗಿರಿ( ಕನಕಗಿರಿ) ದೇವಸ್ಥಾನದ ಕುರಿತು ಮಾಹಿತಿಯನ್ನು ಸ್ಥಳೀಯ ಇತಿಹಾಸಕಾರರಾದ ಮತ್ತು ಹಿರಿಯ ಹೋರಾಟಗಾರರಾದ ದುರ್ಗಾ ದಾಸ್ ಯಾದವ್ ಅವರೊಂದಿಗೆ ಮಾಹಿತಿ ಮತ್ತು ಊರಿನ ಹಾಗೂ ದೇವಸ್ಥಾನದ ಹಿನ್ನೆಲೆ ಇತಿಹಾಸ ವನ್ನು ತಿಳಿದರು.

ನಂತರ ಪ್ರಥಮ ಬಾರಿಗೆ ಕೊಪ್ಪಳ ಜಿಲ್ಲಾಧಿಕಾರಿಗಳಾದ ನಳಿನ್ ಅತುಲ್ ಅವರು ದೇವಸ್ಥಾನಕ್ಕೆ ಭೇಟಿ ನೀಡಿರುವುದು ಅವರಿಗೆ ವಿಶೇಷ ಸ್ವಾಗತ ಕೋರಿ ತಾಲೂಕ್ ಆಡಳಿತ ಅಧಿಕಾರಿಗಳಾದ ವಿಶ್ವನಾಥ್ ಮುರುಡಿ ಕೊಪ್ಪಳ ಜಿಲ್ಲಾಧಿಕಾರಿಗಳಾದ ನಳಿನ್ ಅತುಲ್ ಹಾಗೂ ಅವರ ಧರ್ಮಪತ್ನಿ ಅವರನ್ನು ಸ್ವಾಗತಿಸಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸತ್ಕರಿಸಿದರು.

ಈ ಸಂದರ್ಭದಲ್ಲಿ ತಾಲೂಕು ಆಡಳಿತ ಅಧಿಕಾರಿಗಳಾದ ವಿಶ್ವನಾಥ್ ಮುರುಡಿ ಗ್ರೇಡ್ ಟು ತಹಶೀಲ್ದಾರ್ ವಿ ಎಚ್ ಹೊರಪೇಟೆ ಹಾಗೂ ಸಿಬ್ಬಂದಿ ಪಟ್ಟಣ ಪಂಚಾಯಿತಿಯ ಮುಖ್ಯ ಅಧಿಕಾರಿಗಳಾದ ದತ್ತಾತ್ರೇಯ ಹೆಗಡೆ ಹಾಗೂ ಸಿಬ್ಬಂದಿ ಮತ್ತು ದೇವಸ್ಥಾನದ ಅಧಿಕಾರಿಗಳಾದ ಸಿದ್ಲಿಂಗಯ್ಯ ಸ್ವಾಮಿ ಹಿರಿಯ ಹೋರಾಟಗಾರರಾದ ದುರ್ಗಾದಾಸ್ ಯಾದವ್ ಮಾದಿಗ ದಂಡೋರ ಸಮಿತಿಯ ಅಧ್ಯಕ್ಷರಾದ ಪಾಮಣ್ಣ ಅಳಿಗಿನೂರ್ ಹನುಮೇಶ್ ಕಲ್ಲಬಾವಿ ಹಾಗೂ ದೇವಸ್ಥಾನದ ಅರ್ಚಕರು ಉಪಸ್ಥಿತರಿದ್ದರು.
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ

Related Articles

Leave a Reply

Your email address will not be published. Required fields are marked *

Back to top button