ಸಂಪಾದಕೀಯ

ಕೂಲಿಕಾರರ ಸಮ್ಮುಖದಲ್ಲಿ ನರೇಗಾ ದಿನಾಚರಣೆ..ಕನಕಗಿರಿ.

ಕೂಲಿಕಾರರ ಸಮ್ಮುಖದಲ್ಲಿ ನರೇಗಾ ದಿನಾಚರಣೆ

ಕನಕಗಿರಿ: ಬಡವರಿಗೆ ಅನುಕೂಲವಾಗುವಂತ ಯೋಜನೆ ನಮ್ಮ ಉದ್ಯೋಗ ಖಾತ್ರಿ ಯೋಜನೆಯಾಗಿದ್ದು, ಈ ಯೋಜನೆ ಜಾರಿಯಾಗಿ ಇಂದಿಗೆ 18 ವರ್ಷಗಳು ಎಂದು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್ ಬಿ ಕಂದಕೂರ್ ಹೇಳಿದರು.

ತಾಲೂಕಿನ ಸುಳೇಕಲ್ ಗ್ರಾ.ಪಂ ವತಿಯಿಂದ ಬೆನಕನಹಾಳ್ ಗ್ರಾಮದಲ್ಲಿ ಕೂಲಿಕಾರರಿಗೆ ಕೆರೆ ಹೂಳೆತ್ತುವ ಕೆಲಸ ನೀಡಲಾಗಿದ್ದು, ಕಾಮಗಾರಿ ಸ್ಥಳದಲ್ಲಿ ನರೇಗಾ ದಿನವನ್ನು ಆಚರಣೆ ಮಾಡಿ ಅವರು ಮಾತನಾಡಿದರು. ಮಹಾತ್ನ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯು ಜಾರಿಯಾಗಿ ಇಂದಿಗೆ 18 ವರ್ಷಗಳು ತುಂಬಿವೆ. ಹಾಗಾಗಿ ಅದರ ಸವಿನೆನಪಿಗಾಗಿ ಇಂದು ನಾವು ನರೇಗಾ ದಿನವನ್ನು ಆಚರಣೆ ಮಾಡುತ್ತಿದ್ದೇವೆ ಎಂದರು.

ಜೊತೆಗೆ ನರೇಗಾ ದಿನದಂದು ಕಾಮಗಾರಿ ಸ್ಥಳದಲ್ಲಿ ಕೂಲಿಕಾರರಿಗೆ ಆರೋಗ್ಯ ಶಿಬಿರ ಹಾಗೂ ಮತದಾನ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.

ನಂತರ ನರೇಗಾ ಕೂಲಿಕಾರರ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ನರೇಗಾ ದಿನವನ್ನು ಸಂಭ್ರಮದಿಂದ ಆಚರಣೆ ಮಾಡಲಾಯಿತು. ಬಳಿಕ ಎಲ್ಲಾ ಕೂಲಿಕಾರರು ಮತದಾನ ಮಾಡುವ ಜೊತೆ ಆರೋಗ್ಯವನ್ನು ತಪಾಸಣೆ ಮಾಡಿಸಿಕೊಂಡರು. ಈ ವೇಳೆ ಆರೋಗ್ಯ ಇಲಾಖೆಯವರು ಬಿಪಿ, ಶುಗರ್ ಸೇರಿದಂತೆ ಇತರೆ ಸಣ್ಣಪುಟ್ಟ ಖಾಯಿಲೆಗಳಿಗೆ ಚಿಕಿತ್ಸೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷರಾದ ಕವಿತಾ ಶಿವಲಿಂಗಪ್ಪ, ಉಪಾಧ್ಯಕ್ಷ ಶಿವಾನಂದ ವಂಕಲಕುಂಟಿ, ಸದಸ್ಯರಾದ ಯಮನೂರಪ್ಪ, ಪಿಡಿಓ ಯು.ಮಲ್ಲಿಕಾರ್ಜುನ, ಕಾರ್ಯದರ್ಶಿ ನಾಗಪ್ಪ ಬಡಿಗೇರ, ನಿವೃತ್ತ ಕಾರ್ಯದರ್ಶಿ ಪಂಪಾಪತಿ, ಐಇಸಿ ಸಂಯೋಜಕ ಶಿವಕುಮಾರ್ ಕೆ, ತಾಂತ್ರಿಕ ಸಹಾಯಕ ಮಹಾಂತೇಶ ಕಿಲ್ಲಾರಟ್ಟಿ, ಬಿಎಫ್.ಟಿ ವೆಂಕನಾಯ್ಕ, ಗ್ರಾ.ಪಂ ಸಿಬ್ಬಂದಿಗಳಾದ ದುರುಗೇಶ, ಶರಣೇಗೌಡ, ಆನಂದ, ಮೈನುಸಾಬ, ಬಸವರಾಜ, ಸರೋಜಮ್ಮ ಸೇರಿದಂತೆ ಕೂಲಿಕಾರರು ಹಾಜರಿದ್ದರು.
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ

Related Articles

Leave a Reply

Your email address will not be published. Required fields are marked *

Back to top button