ಕೆ.ಹೆಚ್. ಮುನಿಯಪ್ಪ ರವರಿಗೆ ಉಪ – ಮುಖ್ಯಮಂತ್ರಿ ಹುದ್ದೆ ನೀಡಬೇಕೆಂದು ಮಾದಿಗ ಸಮುದಾಯ ಮತ್ತು ಮಾದರ ಸಮುದಾಯ ಪಟ್ಟು.

ಕೆ.ಹೆಚ್. ಮುನಿಯಪ್ಪ ರವರಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡ ಬೇಕೆಂದು ಮಾದಿಗ ಸಮುದಾಯ ಮತ್ತು ಮಾದರ ಸಮುದಾಯ ಪಟ್ಟು
ಬೆಂಗಳೂರು. ಕೆ.ಹೆಚ್. ಮುನಿಯಪ್ಪ ರವರಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡ ಬೇಕೆಂದು ಮಾದಿಗ ಸಮುದಾಯ ಮತ್ತು ಮಾದರ ಸಮುದಾಯ ಪಟ್ಟುನ್ನೂ ಇಂದು ಬೆಂಗಳೂರು ಪ್ರೆಸ್ ಕ್ಲಬ್ನಲ್ಲಿ ಹಿಡಿದಿದ್ದಾರೆ . ಹಿಡಿದಿದ್ದಾರೆ ನಾವು ಕರ್ನಾಟಕ ಮಾದರ ಮಹಾಸಭಾ, ಕರ್ನಾಟಕ ಮಾದಿಗ ಒಳ ಮೀಸಲಾತಿ ಹೋರಾಟ ಸಮಿತಿ ಹಾಗೂ ಕರ್ನಾಟಕ ಆದಿ ಜಾಂಬವ ಸಂಘದ ಪರವಾಗಿ ಈ ಮನವಿಯನ್ನು ಗೌರವಪೂರ್ವಕವಾಗಿ ಸಲ್ಲಿಸುತ್ತಿದ್ದೇವೆ.ಕರ್ನಾಟಕ ರಾಜ್ಯದಲ್ಲಿ ಕೆ.ಹೆಚ್. ಮುನಿಯಪ್ಪ ರವರಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡುವ ಕುರಿತು ಮಾದಿಗ ಸಮುದಾಯ ಸಂಘಟನೆಗಳ ಬಲವಾದ ಮನವಿ.
ಮಾದಿಗ ಸಮುದಾಯವು ಕರ್ನಾಟಕದ ಅತಿದೊಡ್ಡ ಪರಿಶಿಷ್ಟ ಜಾತಿ ಸಮುದಾಯಗಳಲ್ಲಿ ಒಂದಾಗಿದ್ದು, ಸುಮಾರು 50 ಲಕ್ಷ ಜನಸಂಖ್ಯೆಯನ್ನು ಹೊಂದಿದೆ. ಆದರೆ ಈ ಸಮುದಾಯವು ಪರಿಶಿಷ್ಟ ಜಾತಿಗಳಲ್ಲಿಯೇ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಅತ್ಯಂತ ಹಿಂದುಳಿದ ಸಮುದಾಯವಾಗಿದೆ.
2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮಾದಿಗ ಸಮುದಾಯವು ಕಾಂಗ್ರೆಸ್ ಪಕ್ಷವನ್ನು ಬಲವಾಗಿ ಬೆಂಬಲಿಸಿತು. ನಮ್ಮ ಪ್ರೀತಿಯ ಹಿರಿಯ ನಾಯಕ ಶ್ರೀ ಕೆ.ಹೆಚ್. ಮುನಿಯಪ್ಪ ಅವರು ರಾಜ್ಯ ರಾಜಕೀಯಕ್ಕೆ ಬಂದದ್ದರಿಂದ ಸಮುದಾಯದಲ್ಲಿ ಹೊಸ ವಿಶ್ವಾಸ ಮತ್ತು ಉತ್ಸಾಹ ಮೂಡಿತು. ಇದರಿಂದ ಲಕ್ಷಾಂತರ ಮಾದಿಗ ಹಾಗೂ ಹಿಂದುಳಿದ ವರ್ಗದ ಮತದಾರರು ಕಾಂಗ್ರೆಸ್ ಪಕ್ಷದ ಪರ ನಿಂತರು. 13. ಶ್ರೀ ಕೆ.ಹೆಚ್. ಮುನಿಯಪ್ಪ ಅವರನ್ನು ಉಪ ಮುಖ್ಯಮಂತ್ರಿಯಾಗ ನೇಮಕ ಮಾಡಿದಲ್ಲಿ ಹಿಂದುಳಿದ ಸಮುದಾಯಗಳಲ್ಲಿ ವಿಶ್ವಾಸ ಹೆಚ್ಚಾಗಿ ಸಾಮಾಜಿಕ ನ್ಯಾಯ ಹಾಗೂ ಸಮತೋಲನ ಸಾಧನೆಯಾಗುವುದರು ಜೊತೆಗೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಬಲ ದೊರೆಯಲಿದೆ ಎಂಬುದು ನಮ್ಮ ದೃಢ ನಂಬಿಕೆ.
ಆದುದರಿಂದ ನಮ್ಮ ಸಮುದಾಯದ ನ್ಯಾಯಸಮ್ಮತ ಮತ್ತು ಬಲವಾದ ಬೇಡಿಕೆಯನ್ನು ಪರಿಗಣಿಸಿ ಶ್ರೀ ಕೆ.ಹೆಚ್. ಮುನಿಯಪ್ಪ ಅವರಿಗೆ ಕರ್ನಾಟಕ ರಾಜ್ಯದ ಉಪ ಮುಖ್ಯಮಂತ್ರಿ ಹುದ್ದೆಯನ್ನು ನೀಡುವಂತೆ ಹಾಗೂ ಮಾದಿಗ ಸಮುದಾಯದ ಇನ್ನಷ್ಟು ನಾಯಕರಿಗೆ ಸಚಿವ ಸ್ಥಾನ ನೀಡುವಂತೆ ವಿನಮ್ರವಾಗಿ ಮನವಿ ಮಾಡಿಕೊಳ್ಳುತ್ತೇವೆ.
ಮಾದಿಗ ಸಮುದಾಯದ ಆಶಯಗಳಿಗೆ ಕಾಂಗ್ರೆಸ್ ಪಕ್ಷ ಸ್ಪಂದಿಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ ಎಂಬ ವಿಶ್ವಾಸ ನಮ್ಮದು. ಬಿ.ಕೆ. ಶಿವಪ್ಪ , ಶಿಧರ್ , ಮುತ್ತುರಾಜ್, ಅರುಂಧತಿ ವಿ ನಾಗರಾಜ್, ಕರ್ನಾಟಕ ಮಾದರ ಮಹಾಸಭಾ ಮುಂತಾದವರು ಉಪಸ್ಥಿತರಿದ್ದರು . ವರದಿ. ಮಂಜುಳಾ ರೆಡ್ಡಿ.



