ಸುದ್ಧಿ

ಶಾಲೆ ಸಿಬ್ಬಂದಿಯ ಯಡವಟ್ಟು: ಪರೀಕ್ಷೆಯಿಂದ ವಿದ್ಯಾರ್ಥಿ ವಂಚಿತ.ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮಾದಿಗ ದಂಡೋರ MRPS ಒತ್ತಾಯ; ಬಿಇಒಗೆ ಮನವಿ ಸಲ್ಲಿಕೆ

ಶಾಲೆ ಸಿಬ್ಬಂದಿಯ ಯಡವಟ್ಟು: ಪರೀಕ್ಷೆಯಿಂದ ವಿದ್ಯಾರ್ಥಿ ವಂಚಿತ

ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮಾದಿಗ ದಂಡೋರ MRPS ಒತ್ತಾಯ; ಬಿಇಒಗೆ ಮನವಿ ಸಲ್ಲಿಕೆ

ಕನಕಗಿರಿ ತಾಲ್ಲೂಕಿನ ಕೆಪಿಎಸ್‌ಸಿ ಶಾಲೆಯ ವಿದ್ಯಾರ್ಥಿ ಶರಣಬಸಪ್ಪ ಹುಲುಗಪ್ಪ ಅವರನ್ನು 2026ರ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2ಕ್ಕೆ ಹೆಸರು ನೋಂದಣಿ ಮಾಡದ ಶಾಲೆ ಮುಖ್ಯಶಿಕ್ಷಕ ಮತ್ತು ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ, ಮಾದಿಗ ದಂಡೋರ ಸದಸ್ಯರು ಮಂಗಳವಾರ ಬಿಇಒ ಕಚೇರಿ ಸಿಬ್ಬಂದಿಗೆ ಮನವಿ ಸಲ್ಲಿಸಿದರು ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಗಂಗಣ್ಣ ಸಿದ್ದಾಪುರ ಮಾತನಾಡಿ, ‘2024-25ನೇ ಸಾಲಿನಲ್ಲಿ ಶರಣಬಸವ ಹುಲಗಪ್ಪ ಎಂಬ ವಿದ್ಯಾರ್ಥಿ ಕನಕಗಿರಿಯ ಕೆಪಿಎಸ್‌ಸಿ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾಭ್ಯಾಸ ಮಾಡಿ, ಅಂತಿಮ ಪರೀಕ್ಷೆಯಲ್ಲಿ 4 ವಿಷಯಗಳಲ್ಲಿ ಅನುತ್ತೀರ್ಣನಾಗಿದ್ದಾ ನೆ. ಅದೇ ಸಾಲಿನಲ್ಲಿ ಅವಕಾಶವಿದ್ದ 3 ಅವಕಾಶಗಳಲ್ಲಿ 1 ಅವಕಾಶ ಬಳಸಿ, ಉಳಿದ 2 ಅವಕಾಶಗಳ ಪರೀಕ್ಷೆ ಎದುರಿಸದೆ ಅನುತ್ತೀರ್ಣನಾಗಿದ್ದಾನೆ.

‘2025-26ನೇ ಸಾಲಿನಲ್ಲಿ ಪರೀಕ್ಷೆ-2ಗೆ ಹೆಸರು ನೋಂದಣಿಗಾಗಿ ಏಪ್ರಿಲ್ 26, 2026ರಂದು ಶರಣಬಸವ ಶಾಲೆಗೆ ತೆರಳಿ, ನೋಂದಣಿ ಸಂಖ್ಯೆ, ಫೋಟೊ, ಸಹಿ, ಅನುತ್ತೀರ್ಣ ವಿಷಯಗಳ ಪರೀಕ್ಷಾ ಶುಲ್ಕ ನೀಡಿದ್ದಾನೆ. ಆದರೆ ಶಾಲೆ ಮುಖ್ಯಶಿಕ್ಷಕ, ಸಿಬ್ಬಂದಿ ಪರೀಕ್ಷೆಗೆ ದಾಖಲೆಗಳನ್ನು ನೀಡದೆ, ಹೆಸರು ನೋಂದಣಿ ಮಾಡಿಸದೆ, ಅನ್ಯಾಯವೆಸಗಿದ್ದು, ವಿದ್ಯಾರ್ಥಿ ಜೀವನದೊಂದಿಗೆ ಚೆಲ್ಲಾಟವಾಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾದಿಗರ ದಂಡೋರ ಗಂಗಾವತಿ ತಾಲೂಕಿನ ಅಧ್ಯಕ್ಷರು ಮಹಾದೇವ ಬಡಿಗೇರ ಮಾತನಾಡಿ, ‘ಮುಖ್ಯಶಿಕ್ಷಕ ಮತ್ತು ಸಿಬ್ಬಂದಿ ನಿರ್ಲಕ್ಷ್ಯನದಿಂದ ವಿದ್ಯಾರ್ಥಿ ಭವಿಷ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ, ತನ್ನದಲ್ಲದ ತಪ್ಪಿಗೆ ವಿದ್ಯಾರ್ಥಿ ಪರೀಕ್ಷೆಯಿಂದ ವಂಚಿ-ತನಾಗಿದ್ದಾನೆ. ಪರೀಕ್ಷೆ ಬರೆಯಲು ಅವಕಾಶವಿದ್ದು, ಅದರಲ್ಲಿ ಮತ್ತೆ ಅನುತ್ತೀರ್ಣರಾದರೆ
ವಿದ್ಯಾರ್ಥಿ 6 ವಿಷಯಗಳನ್ನು ಬಾಹ್ಯವಾಗಿ ಪರೀಕ್ಷೆಗೆ ನೋಂದಣಿ ಮಾಡಿಸಿಕೊಂಡು ಪರೀಕ್ಷೆ ಬರೆಯಬೇಕಾಗುತ್ತದೆ. ನಿತ್ಯ ಶಾಲೆಗೆ ಹೋಗಿಯೇ ಪರೀಕ್ಷೆಯಲ್ಲಿ ಉತ್ತೀರ್ಣನಾಗದ ವಿದ್ಯಾರ್ಥಿ, ಬಾಹ್ಯವಾಗಿ ಪರೀಕ್ಷೆ ಬರೆದು ಪಾಸಾಗುವುದು ಹೇಗಾಗುತ್ತದೆ. ಹೀಗಾಗಿ ವಿದ್ಯಾರ್ಥಿ ಪರೀಕ್ಷೆ ತಪ್ಪಲು ಕಾರಣರಾದ ಮುಖ್ಯಶಿಕ್ಷಕ ಮತ್ತು ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಗಂಗಣ್ಣ ಸಿದ್ದಾಪುರ ಮಾದಿಗ ದಂಡೋರ ಜಿಲ್ಲಾಧ್ಯಕ್ಷರು ಮೂರ್ತಿ ಸಂಗಾಪುರ ಜಿಲ್ಲಾ ಉಪಾಧ್ಯಕ್ಷರು ಪಂಪಾಪತಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕನಕಪ್ಪ ಮ್ಯಾಗಡೆ ಸಿದ್ದಾಪುರ ಸಮಾಜದ ಮುಖಂಡರು ಮಹದೇವ್ ಬಡಿಗೇರ ಗಂಗಾವತಿ ತಾಲೂಕಿನ ಅಧ್ಯಕ್ಷರು , ನರಸಿಂಹ ಹಿರಿಯ ಮುಖಂಡರು ,ಯಮನೂರು ದೊಡ್ಡಮನಿ ಗಂಗಾವತಿ ತಾಲೂಕಿನ ಕಾರ್ಯದ್ಯಕ್ಷರು ವಿದ್ಯಾರ್ಥಿ ಶರಣಬಸವ ,ರಮೇಶ್ ಇನ್ನು ಗಣ್ಯ ವ್ಯಕ್ತಿಗಳು ಇದ್ದರು
ವರದಿಗಾರ ಗೌತಮ್ ಯಾದವ್ ಕನಕಗಿರಿ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ.

Related Articles

Leave a Reply

Your email address will not be published. Required fields are marked *

Back to top button