
ಕೊಡೆಕಲ್ಲ ಪಟ್ಟಣದ ಉಪ- ತಹಸೀಲ್ದಾರ್ ಕಾರ್ಯಲಕ್ಕೆ ಸಾರ್ವಜನಿಕರು ಚಪ್ಪಲಿ ಕೈಯಲ್ಲಿ ಹಿಡಿದು ನಿಂತಿರುವ ಮಳೆ ನೀರು ದಾಟಿ ಕಚೇರಿ ಹೋಗುವ ದೂರ ಸ್ಥಿತಿ ಬಂದಿದೆ
ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ಕೊಡೆಕಲ್ ಪಟ್ಟಣದಲ್ಲಿರುವ ಉಪ ತಸಿಲ್ದಾರ ಕಛೇರಿ 2022 23ನೇ ಸಾಲಿನ ನೀತಿ ಆಯೋಗದ ಮಹತ್ತಾಕಾಂಕ್ಷೆಯ ಜಿಲ್ಲೆಯ ಅನುದಾನ ಅಡಿಯಲ್ಲಿ ನಿರ್ಮಾಣಗೊಂಡಿರುವ ಕಂದಾಯ ಇಲಾಖೆ ತಗ್ಗು ಪ್ರದೇಶದಲ್ಲಿ ನಿರ್ಮಾಣಗೊಂಡಿರುವುದರಿಂದ ಕಂದಾಯ ಇಲಾಖೆ ಉದ್ಘಾಟನೆಯಾಗಿ ಒಂದು ತಿಂಗಳು ಕಳೆದಿಲ್ಲ ಆದರೆ ಉಪಾ ತಹಶೀಲ್ದಾರ ಕಚೇರಿಗೆ ಹೋಗುವ ಸಾರ್ವಜನಿಕರಿಗೆ ಬಹಳಷ್ಟು ತೊಂದರೆ ಆಗಿದೆ
ಮುಂಗಾರು ರೋಹಿಣಿ ಮಳಿ ಪ್ರಾರಂಭವಾಗಿದ್ದು ಜುಲೈ 2ರಂದು ರಾತ್ರಿ ಸುರಿದ ಬಾರಿ ಮಳೆಗೆ ತಗ್ಗುಪ್ರದೇಶಗಳಲ್ಲಿ ನೀರು ತುಂಬಿ ನಿಂತಿರುವುದರಿಂದ ಮಹಿಳೆಯರಿಗೆ ಸಣ್ಣ ಸಣ್ಣ ಮಕ್ಕಳಿಗೆ ಹಿರಿಯ ನಾಗರಿಕರಿಗೆ ನಿಂತಿರುವ ನೀರಲ್ಲಿ ಉಳು ತುಂಬಿರುವುದರಿಂದ ಯಾವುದೇ ಬೈಕುಗಳಾಗಲಿ ವಾಹನಗಳಾಗಲಿ ಹೋಗುವ ಸ್ಥಿತಿಯಲ್ಲಿ ಇರುವುದರಿಂದ ಸಾರ್ವಜನಿಕರಿಗೆ ಬಹಳಷ್ಟು ತೊಂದರೆ ಆಗಿದ್ದು ಕೂಡಲೇ ಸಂಬಂಧಪಟ್ಟ ತಾಲೂಕು ಅಧಿಕಾರಿಗಳಾಗಲಿ ಜಿಲ್ಲಾಧಿಕಾರಿಗಳಾಗಲಿ ಹಾಗೂ ರಾಜಕಾರಣಿಗಳಾಗಲಿ ಕೂಡಲೇ ಕಂದಾಯ ಇಲಾಖೆಗೆ ಹೋಗುವ ದಾರಿ ಸರಿಪಡಿಸಬೇಕೆಂದು ಸಾರ್ವಜನಿಕರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು
ಗುಂಡಪ್ಪ ಜೈ ಬೋಗಿ. ಹುಣಸಗಿ.






