ಪತ್ರಿಕೋದ್ಯಮ

ಡಾ।। ಬಿ.ಆರ್. ಅಂಬೇಡ್ಕರ್ ರವರ 135ನೇ ಜಯಂತ್ಯೋತ್ಸವ ಹಾಗೂ ಡಾ. ಬಾಬು ಜಗಜೀವನ್ ರಾಮ್ ರವರ ಜಯಂತ್ಯೋತ್ಸವ

ಡಾ।। ಬಿ.ಆರ್. ಅಂಬೇಡ್ಕರ್ ರವರ 135ನೇ ಜಯಂತ್ಯೋತ್ಸವ ಹಾಗೂ ಡಾ. ಬಾಬು ಜಗಜೀವನ್ ರಾಮ್ ರವರ ಜಯಂತ್ಯೋತ್ಸವ

ಬೆಂಗಳೂರು. ಡಾ।। ಬಿ.ಆರ್. ಅಂಬೇಡ್ಕರ್ ರವರ 135ನೇ ಜಯಂತ್ಯೋತ್ಸವ ಹಾಗೂ ಡಾ. ಬಾಬು ಜಗಜೀವನ್ ರಾಮ್ ರವರ ಜಯಂತ್ಯೋತ್ಸವ ನಿರ್ವಹಿಸಲಾಗುತ್ತದೆ ಎಂದು ಇಂದು ಬೆಂಗಳೂರು ನಗರ ನಿಗಮ ಕಾರ್ಮಿಕರ ಒಕ್ಕೂಟ (ರಿ) ಅಧ್ಯಕ್ಷ ಬಾಬು ಅವರು ಇಂದು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ತಿಳಿಸಿದರು . ಏಪ್ರಿಲ್ 14, 2026 ರಂದು ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ವಿಶ್ವರತ್ನ ಸಂವಿಧಾನ ಶಿಲ್ಪಿ ಡಾ।। ಬಿ.ಆರ್. ಅಂಬೇಡ್ಕರ್ ರವರ 135ನೇ ಜಯಂತ್ಯೋತ್ಸವ ಹಾಗೂ ಹಸಿರುಕ್ರಾಂತಿಯ ಹರಿಕಾರ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ್ ರಾಮ್ ರವರ ಜಯಂತ್ಯೋತ್ಸವ ಆಚರಿಸುತ್ತಿರುವ ಕುರಿತು.
ಭವ್ಯ ಭಾರತದ ಸಂವಿಧಾನ ಶಿಲ್ಪಿ ವಿಶ್ವರತ್ನ ಡಾ।। ಬಿ.ಆರ್. ಅಂಬೇಡ್ಕರ್ ರವರ 135ನೇ ಜಯಂತೋತ್ಸವವನ್ನು ಈ ಬಾರಿ ದಿ ಬೆಂಗಳೂರು ಸಿಟಿ ಕಾರ್ಪೋರೇಷನ್ ವರ್ಕರ್ ಫೆಡರೇಷನ್ (ರಿ) ಹಾಗೂ ಜೈ ಭಾರತ ಮಾತಾ ಸೇವಾ ಸಮಿತಿ(ರಿ) ನವ ದೆಹಲಿ ವತಿಯಿಂದ ಏಪ್ರಿಲ್ 14, 2026 ರಂದು ಬೆಂಗಳೂರಿನ ಪ್ರೀಡಂಪಾರ್ಕ್‌ಲ್ಲಿ ದಿ ಬೆಂಗಳೂರು ಸಿಟಿ ಕಾರ್ಪೋರೇಷನ್ ವರ್ಕ್ರನ ಪೌರ ಕಾರ್ಮಿಕರು, ಸಮಸ್ತ ಅಧಿಕಾರಿಗಳು, ನೌಕರರು ಹಾಗೂ ಕನ್ನಡಪರ, ದಲಿತಪರ ಸಂಘಟನೆಗಳ ಸಹಕಾರದೊಂದಿಗೆ ಆಯೋಜಿಸಲಾಗಿದೆ ಎಂದರು.
ದಿನಾಂಕ 14.ರಂದು ಬೆಳಿಗ್ಗೆ 9.30 ಗಂಟೆಗೆ ದಿ ಬೆಂಗಳೂರು ಸಿಟಿ ಕಾರ್ಪೋರೇಷನ್ ಕೇಂದ್ರ ಕಛೇರಿಯಲ್ಲಿರುವ ಡಾ|| ಬಿ.ಆರ್. ಅಂಬೇಡ್ಕರ್ ರವರ ಪುತ್ಥಳಿಗೆ ಹಾಗೂ ಹಸಿರುಕ್ರಾಂತಿಯ ಹರಿಕಾರ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ್ ರಾಮ್ ರವರ ಭಾವಚಿತ್ರಕ್ಕೆ ಮಾನ್ಯ ಜಿಬಿಎ ಆಯುಕ್ತರು ಹಾಗೂ ಬೆಂಗಳೂರಿನ ಐದು ಮಹಾನಗರ ಪಾಲಿಕೆಯ ಆಯುಕ್ತರರಿಂದ ದೀಪ ಬೆಳಗಿಸಿ ಮಾಲಾರ್ಪಣೆ ಮಾಡಿ ನಂತರ ಡಾ।। ಬಿ.ಆರ್. ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನ್ ರಾಮ್ ಅವರ ಭವ್ಯಮೂರ್ತಿಯ ಮೆರೆವಣಿಗೆಯೊಂದಿಗೆ ಬೆಂಗಳೂರಿನ ಪ್ರೀಡಂಪಾರ್ಕ್‌ಗೆ ಸಂಚಾರಿಸಿ ನಂತರ ಅಲ್ಲಿ ಜೈ ಭಾರತ ಮಾತಾ ಸೇವಾ ಸಮಿತಿ ನವದೆಹಲಿಯ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷರಾದ ಪರಮ ಪೂಜ್ಯ ಶ್ರೀ ಹವಾಮಲ್ಲಿನಾಥ ಮಹಾರಾಜ ನಿರಗುಡಿ ಅವರ ದಿವ್ಯ ಸಾನಿಧ್ಯದಲ್ಲಿ ಹಾಗೂ ಜಿಬಿಎ ಯ ಅಧಿಕಾರಿಗಳು, ಪೆಂಡರೇಷನ್ ನ ಪದಾಧಿಕಾರಿಗಳು, ಕನ್ನಡಪರ ಹಾಗೂ ದಲಿತಪರ ಸಂಘಟನೆಗಳ ಮುಖಂಡರ ಉಪಸ್ಥಿತಿಯಲ್ಲಿ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗಿದ್ದು ಈ ಕಾರ್ಯಕ್ರಮದಲ್ಲಿ ದೇಶ ಹಾಗೂ ಸಮಾಜ ಸೇವೆಯಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿರುವವರಿಗೆ, ಪೌರ ಕಾರ್ಮಿಕರಿಗೆ, ಮಹಿಳೆಯರಿಗೆ ಹಾಗೂ ಯುವಕರಿಗೆ, ರೈತರಿಗೆ ಮಾಜಿ ಸೈನಿಕರಿಗೆ, ಶ್ರಮಿಕರಿಗೆ, ಹಾಗೂ ಹಿರಿಯ ನಾಗರೀಕರಿಗೆ ಪೂಜ್ಯರಿಂದ ಗೌರವ… ಸನ್ಮಾನವನ್ನು ಆಯೋಜಿಸಲಾಗಿದ್ದು ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಸರ್ವರಿಗೂ ಉತ್ತರ ಕರ್ನಾಟಕ ಶೈಲಿಯ ಊಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಪ್ರೀಡಂ ಪಾರ್ಕ್‌ನಲ್ಲಿ ವ್ಯವಸ್ಥೆ ಮಾಡಲಾಗಿದೆ.
ವೇದಿಕೆ ಕಾರ್ಯಕ್ರಮ ನಂತರ ಡಾ| ಬಿ.ಆರ್. ಅಂಬೇಡ್ಕ‌ರ್ರವರ ಹಾಗೂ ಡಾ. ಬಾಬು ಜಗಜೀವನ್ ರಾಮ್‌ ರವರ ಪುತ್ಥಳಿಯ ಭವ್ಯ ಮೆರವಣಿಗೆ ದೇಶಬಾಂಧವರ ಉಪಸ್ಥಿತಿಯಲ್ಲಿ ಫ್ರೀಡಂಪಾರ್ಕ್‌ನಿಂದ, ಕೆ.ಆರ್. ಸರ್ಕಲ್ ವೃತ್ತ, ವಿಧಾನಸೌಧ, ಚಿನ್ನಸ್ವಾಮಿ ಕ್ರೀಡಾಂಗಣ, ಮಹಾತ್ಮಗಾಂಧಿ ರಸ್ತೆ, ಬ್ರಿಗೆಡ್ ರಸ್ತೆ, ಜೈಬೀಮ್ ಸರ್ಕಲ್, ಶಾಂತಿನಗರದಲ್ಲಿರುವ ಡಾ| ಬಿ.ಆರ್. ಅಂಬೇಡ್ಕರ್ ಪ್ರತಿಮೆವರೆಗೆ ಸಾಗಿ ಅಲ್ಲಿ ಅವರ ಪ್ರತಿಮೆಗೆ ಗೌರವ ಮಾರ್ಲಾಪಣೆ ಮಾಡಿ ಜಿಬಿಎ ಕಛೇರಿಗೆ ತೆರಳಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಾಕಾಗುತ್ತದೆ ಎಂದು ತಿಳಿಸಿದರು. ಈ ಪತ್ರಿಕಾಗೋಷ್ಟಿ ಯಲ್ಲಿ ಉಪಸ್ಥಿತರಿದ್ದರು.
ಶ್ರೀ ವೈಜನಾಥ್ ಎಸ್ ಝಳಕಿ
ರಾಷ್ಟ್ರೀಯ ವಕ್ತಾರರು ಜೈ ಭಾರತ್ ಮಾತಾ
ಸೇವಾ ಸಮಿತಿ ನವದೆಹಲಿ,
ಶ್ರೀ ಮಲ್ಲಿಕಾರ್ಜುನ ಸಾರವಾದ ಜಯ ಕರ್ನಾಟಕ ಸಂಘಟನೆ ಕಲ್ಬುರ್ಗಿ ವಿಭಾಗೀಯ ಪ್ರಭಾರಿ
ಅಧ್ಯಕ್ಷರು
ಶ್ರೀ ಎಸ್.ವಿ ಅವಂಟಿ ನಿವೃತ್ತ ಡಿವೈಎಸ್‌ಪಿ
ಶ್ರೀ ಗುರುಸಿದ್ದಪ್ಪ ಬೆನಕನಹಳ್ಳಿ ರಿ. ಪಿ.ಎಸ್.ಐ.
ಶ್ರೀ ಗಣೇಶ್ ಬಿದರ್
.ಶ್ರೀ ಶಿವಶರಣ ಸುತ್ತಾರ್ ವರದಿ. ಮಂಜುಳಾ ರೆಡ್ಡಿ..

Related Articles

Leave a Reply

Your email address will not be published. Required fields are marked *

Back to top button