ದಿನಾಂಕ 24 ಜೂನ್ 2025 ರಂದುಹಾವೇರಿ ನಗರದಲ್ಲಿವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸನ್ಮಾನ ಕಾರ್ಯಕ್ರಮ. ಸಿ.ಎಂ. ಫೈಝ ಮಹಮದ್ ಅಧ್ಯಕ್ಷತೆಯಲ್ಲಿ

ಕರ್ನಾಟಕ ರಾಜ್ಯ ಕಂಡ ಜನಪ್ರಿಯ ಜನ ಪ್ರತಿನಿಧಿ ಶಿಕ್ಷಣ ಪ್ರೇಮಿ ಮಾಜಿ ಕೇಂದ್ರ ಸಚಿವರು ಮತ್ತು ಕರ್ನಾಟಕ ರಾಜ್ಯದ ಮಾಜಿ ಸಚಿವರು ಶ್ರೀ ಸಿ.ಎಂ. ಇಬ್ರಾಹಿಂ ಇವರು ಕರ್ನಾಟಕ ರಾಜ್ಯದಲ್ಲಿ ಬಡ ಹಿಂದುಳಿದ ಅಲ್ಪ ಸಂಖ್ಯೆತ ಮಕ್ಕಳಿಗೆ ಅನುಕೂಲವಾಗಲಿ ಎಂಬ ಸದುದ್ದೇಶದಿಂದ ತಮ್ಮ ಹುಟ್ಟೂರು ಉತ್ತರ ಕರ್ನಾಟಕದ ಏಲಕ್ಕಿ ಮಾರುಕಟ್ಟೆಯ ಪ್ರಸಿದ್ಧ ಹಾವೇರಿ ನಗರದಲ್ಲಿ ಮತ್ತು ಬೆಂಗಳೂರು ನಗರದಲ್ಲಿ ಹಲವಾರು ತರಹದ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿ ಪ್ರಭುದ್ಧವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಶ್ರೀ ಸಿ.ಎಂ. ಫೈಝ ಮಹಮ್ಮದ್, ಅಧ್ಯಕ್ಷರು, ಒನ್ ಸ್ಕೂಲ್ ಆಫ್ ಬಿಜಿನೆಸ್ ಹಾಗೂ ನಿರ್ದೇಶಕರು ಎಚ್. ಕೆ. ಬಿ. ಕೆ. ಸಮೂಹ ಶಿಕ್ಷಣ ಸಂಸ್ಥೆಗಳು ಬೆಂಗಳೂರು ಇವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಶಿಕ್ಷಣಕ್ಕೆ ಸಂಬಂಧಪಟ್ಟ ಹಲವಾರು ಕಾರ್ಯಕ್ರಮಗಳು ಜನಪ್ರಿಯವಾಗಿವೆ.

ದಿನಾಂಕ 24 ಜೂನ್ 2025 ಮಂಗಳವಾರ ಸಮಯ ಬೆಳಗ್ಗೆ 10 ಗಂಟೆಗೆ ಶ್ರೀ ಗುರು ಸಿದ್ದರಾಮೇಶ್ವರ ಸಮೂಹ ಭವನ ಸಮುದಾಯ ಭವನ ಹಾವೇರಿ ನಗರದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿರುವ ಬಡ, ಮಧ್ಯಮ, ಹಿಂದುಳಿದ, ಅಲ್ಪಸಂಖ್ಯೆತ ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು ಕಳೆದ 2025 26ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಕರ್ನಾಟಕ ಸರ್ಕಾರದಿಂದ ನಡೆಸಲ್ಪಟ್ಟ ಎಸ್. ಎಸ್. ಎಲ್. ಸಿ. ಹಾಗೂ ಪಿ.ಯು. ಸಿ. ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚಿನ ಅಂಕ ಪಡೆದು ತೇರ್ಗಡೆ ಹೊಂದಿದ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸಿ, ಸತ್ಕರಿಸಿ, ಸನ್ಮಾನಿಸುವ, ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ದಿನಾಂಕ 24 ಜೂನ್ 2025 ರಂದು ನಡೆಯುತ್ತಿರುವ ಕಾರ್ಯಕ್ರಮವು ಸಿ.ಎಂ. ಫೈಝ ಮಹಮದ್ ಅಧ್ಯಕ್ಷರು. ಇವರ ಅಧ್ಯಕ್ಷತೆಯಲ್ಲಿ ಮೇಲಿನ ಕಾರ್ಯಕ್ರಮ ಏರ್ಪಾಟಾ ಗಿದ್ದು, ಈ ಕಾರ್ಯಕ್ರಮದಲ್ಲಿ ಬಡ ಮಾಧ್ಯಮ, ಅಲ್ಪ ಸಂಖ್ಯೆತ ವರ್ಗದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸತ್ಕಾರ ಮತ್ತು ಸನ್ಮಾನ ಮಾಡಲಾಗುವುದು ಜೊತೆಗೆ ಇವರನ್ನು ಪ್ರೋತ್ಸಾಹಿಸಿ ಮುಂದಿನ ವ್ಯಾಸಂಗಕ್ಕಾಗಿ ಮಾರ್ಗದರ್ಶನ ಕೊಡಲ್ಪಡುವ ಉಪನ್ಯಾಸ ನಡೆಯುತ್ತದೆ. ಜನಮೆಚ್ಚಿಗೆಯ ಈ ಕಾರ್ಯಕ್ರಮವು ಹಾವೇರಿ ಜಿಲ್ಲಾ ಕೇಂದ್ರ ಸ್ಥಾನ ಹಾವೇರಿ ನಗರದಲ್ಲಿ ನಡೆಯುತ್ತಿದ್ದು ಹಲವಾರು ಶಿಕ್ಷಣ ಪ್ರೇಮಿಗಳು ಸಾರ್ವಜನಿಕರು ತುಂಬು ಹೃದಯದಿಂದ ಹರಿಸಿ ಹಾರೈಸುತ್ತಿದ್ದಾರೆ.



