ಧರ್ಮಸ್ಥಳ ಗ್ರಾಮಾಭಿವೃದ್ದಿ ವತಿಯಿಂದ ಕನಕಗಿರಿ ಪ್ರೌ, ಶಾ, ವಿ, ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ.

ಧರ್ಮಸ್ಥಳ ಗ್ರಾಮಾಭಿವೃದ್ದಿ ವತಿಯಿಂದ ಕನಕಗಿರಿ ಪ್ರೌ, ಶಾ, ವಿ, ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ
ಕನಕಗಿರಿ ತಾಲ್ಲೂಕಿನಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ (ಪ್ರೌ, ಶಾ, ವಿ,) ಕನಕಗಿರಿ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಪರಿಸರ ಸಂರಕ್ಷಣೆ ಜಾಗೃತಿ ಮಾಹಿತಿಯನ್ನು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಪರಿಸರ ಮಾಹಿತಿ ಹಾಗು ಗಿಡನಾಟಿ ಕಾರ್ಯಕ್ರಮ ಆಯೋಜನೆ ಮಾಡಿದ್ದು ಕಾರ್ಯಕ್ರಮವನ್ನು ಈ ಶಾಲಾ ಮುಖ್ಯ ಶಿಕ್ಷಕರಾದ ಜಗದೀಶ್ ಹಾದಿಮನಿ ಸರ್ ಹಾಗೂ ಅನಿಲ್ ಕುಮಾರ್,ಕನಕಚಲ , ಮಂಜುಳಾ ಮೇಟಿ ವಿಜಯೇಂದ್ರ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ

ಯೋಜನೆಯ ಪದಾಧಿಕಾರಿಗಳು ಸೇರಿ ಅರಣ್ಯ ಗಿಡಕ್ಕೆ ನೀರು ಎರೇಯುವುದರ ಮೂಲಕ ಉದ್ಘಾಟನೆ ಮಾಡಿ ಈ ವೇಳೆ ಮಾತಾನಡಿದ ಜಗದೀಶ್ ಹಾದಿಮನಿ ಅವರು ಮೊದಲನೇಯದಅಗಿ ಪರಿಸರ ದಿನಾಚಾರಣೆಯ ಶುಭಾಷಯ ಕೋರುತ್ತಾ ಗಿಡ ನೇಡುವ ಮುಖಾಂತರ ಕಾರ್ಯಕ್ರಮವನ್ನು ಚಾಲನೆ ನೀಡಿದರು. ಇವತ್ತು ನಾವೆಲ್ಲರೂ ಸೇರಿ ಪರಿಸರ ದಿನಾಚಾರಣೆಯನ್ನು ಜೂನ್ 5 ನೇ ತಾರೀಕು ವಿಶೇಷ ದಿನಾಚಾರಣೆ ಹಾಗೂ ಪೂಜ್ಯರ ಮಾರ್ಗದರ್ಶನದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಹಲವಾರು ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದ್ದು. ಮಕ್ಕಳಿಗೆ ಪರಿಸರ ಜಾಗೃತಿ ಈ ಮಾಡಿಸುವ ಮೂಲಕ ಜೊತಗೆ ಪ್ರಕೃತಿ ರಕ್ಷಣೆಗೆ ಅಗತ್ಯತರಯನ್ನು ಎತ್ತಿ ಹಿಡಿಯುವ ದಿನ ಎಂದು ಹೇಳಿದರು ತಪ್ಪಾಗಲಾರದು ನಾವು ಪ್ರಾಣಿ ಪಕ್ಷಿಗಳು ಬದುಕುತ್ತಿರುವುದೇ ಪರಿಸರದಿಂದಾಗಿದ್ದು. ಈ ಯಾವುದು ಇಲ್ಲ ಎಂದರೆ ನಾವು ಬದುಕುವುದೇ ಅಸಾಧ್ಯ . ಆದರೆ ಇತ್ತಿಚಿನ ದಿನಗಳಲ್ಲಿ ಮಾನವನ ವೃತ್ತಿಯಿಂದ ಅರಣ್ಯ ನಾಶವಾಗುತ್ತಿದ್ದು ಆದುದರಿಂದ ನಾವೇಲ್ಲರು ಸೇರಿ ಗಿಡಗಳನ್ನು ನೆಟ್ಟಿ ಅದನ್ನು ಬೆಳೆಸುವ ಸಂಸ್ಕೃತಿ ಮಾಡಲೇ ಬೇಕಾಗಿದ್ದು ಆದುದರಿಂದ ನಾವೇಲ್ಲರು ಪ್ರಕೃತಿಯನ್ನು ಉಳಿಸಿಕೊಂಡು ಹೋಗೋಣ. ನಂತರ ಜೆ , ಸಿ , ಬೋಸ್,ಇಕೋ ಕ್ಲಬ್ ಉದ್ಘಾಟಗರಾದ ಅನಿಲ್ ಕುಮಾರ್ ಸರ್ ಅವರು ನಿರ್ದೇಶಕರು ಪರಿಸರದ ಬಗ್ಗೆ ಮಾತನಾಡಿದ ಅವರು ವಿಶ್ವ ಪರಿಸರ ದಿನದ ಶುಭಾಷಯ ಕೋರುತ್ತಾ ಪ್ರತಿ ವರ್ಷ ನಾವೇಲ್ಲರು ಸೇರಿ ಜೂನ್ 5 ಕಾರ್ಯಕ್ರಮವನ್ನು ಮಾಡುತ್ತಿದ್ದೇವು. ಅಂದ್ರೆ 13/6/2025 ಈ ದಿನ ನಮ್ಮ ಶಾಲೆಯಲ್ಲಿ ಈ ದಿನ ಮಾತ್ರವಲ್ಲವೇ ನಾವೇಲ್ಲರು ಪ್ರತಿ ದಿನ ನಿತ್ರ ಸಂರಂಕ್ಷಣೆ ಮಾಡುವಲ್ಲಿ ಹೆಚ್ಚಿನ ಗಮನವಹಿಸಬೇಕು ಹಾಗೂ ಪರಿಸರ ಸಮತೋಲನವಿಲ್ಲ ದಿನೇ ದಿನೇ ಪ್ಲಾಸ್ಟಿಕ್ ಬಳಕೆ ಹೆಚ್ಚಗುತ್ತಿದ್ದು ಅದನ್ನು ತಡೆಗಟ್ಟಿ ಇದನನು ಮುಂದಿನ ಪೀಳಿಗೆಯಲ್ಲಿ ನಾವು ಪರಿಸರವನ್ನು ಸಂರಂಕ್ಷಣೆ ಮಾಡೋಣ ಎಂದು ಮಾಹಿತಿ ನೀಡಿದರು. ಉದಾಹರಣೆಗೆ ಅಮೇರಿಕಾ ಜಪಾನ್ , ದೇಶಗಳ ಮಾದರಿ ಮಾಹಿತಿ ನೀಡಲಾಯಿತು ಕಾರ್ಯಕ್ರಮದಲ್ಲಿ ಕೃಷಿ ಮೇಲ್ವಿಚಾರಕರಾದ ಎನ್ ಗಂಗಾಧರಪ್ಪ ರವರು ಯೋಜನೆಯ ಕಾರ್ಯ ಕ್ರಮ ಗಳ ಬಗ್ಗೆ ಪ್ರಸ್ತಾವಿಕ ಮಾಹಿತಿ ನೀಡಲಾಯಿತು ಮತು ವಲಯದ ಮೇಲ್ವಿಚಾರಕ ಸಂತೋಷ ಶಾಲಾ ಶಿಕ್ಷಕರಾದ. ಮಂಜುಳಾ ಮೇಟಿ, ಉಮ್ಮಿ ಸಲ್ಮಾ ಮೇಡಂ ಹಾಗೂ ತಿಪ್ಪೇ ರುದ್ರ ಚಾರ್ಯ ಶ್ಯಾಮಿದ್ ಸರ್ ಮತು ಒಕ್ಕೂಟ ಅಧ್ಯಕ್ಷರು ಮಂಜುಳಾ ಅನಿತಾ , ಸರ್ಕಾರಿ ಪೌಢಶಾಲಾ 30 , ಶಾಲೆಯ ಶಿಕ್ಷಕರು, ಶಾಲೆಯ ಮಕ್ಕಳು, 350 ಮಕ್ಕಳು ಕೃಷಿ ಮೇಲ್ವಿಚಾರಕರು, ವಲಯದ ಮೇಲ್ವಿಚಾರಕರು, ಸೇವಾಪ್ರತಿನಿಧಿಗಳಾದ ಅನಿತಾ ಕನಕಗಿರಿ ಬಿ ಕಾರ್ಯ ಕ್ಷೇತ್ರದ ಸದ್ಯಸರು ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ.




