ಸಂಪಾದಕೀಯ

ನ್ಯಾಯಮೂರ್ತಿ ಡಾ. ಎಂ. ರಾಮಾಜೋಯಿಸ್ ರವರ 94ನೇ ಜನ್ಮದಿನ ಇಂದು. (ಜುಲೈ 27, 1931)

ಕರ್ನಾಟಕದ ಖ್ಯಾತ ನ್ಯಾಯವಾದಿಗಳಾಗಿದ್ದ, ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿದ್ದ, ಪಂಜಾಬ್ ಮತ್ತು ಹರಿಯಾಣ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾಗಿದ್ದ, ಬಿಹಾರ್ ಮತ್ತು ಜಾರ್ಖಂಡ್ ರಾಜ್ಯಗಳ ರಾಜ್ಯಪಾಲರಾಗಿದ್ದ, ರಾಜ್ಯಸಭಾ ಸದಸ್ಯರಾಗಿದ್ದ, ನಮ್ಮೆಲ್ಲರಿಗೂ ಮಾರ್ಗದರ್ಶಕರಾಗಿದ್ದ ನ್ಯಾಯಮೂರ್ತಿ ಡಾ. ಎಂ. #ರಾಮಾಜೋಯಿಸ್ ರವರ 94ನೇ ಜನ್ಮದಿನ ಇಂದು. (ಜುಲೈ 27, 1931)

ಈ ಹಿನ್ನೆಲೆಯಲ್ಲಿ ಕಲ್ಬುರ್ಗಿ ಜಿಲ್ಲೆಯ ಮರತೂರಿನಲ್ಲಿರುವ ಶ್ರೀ ವಿಜ್ಞಾನೇಶ್ವರ ಪ್ರತಿಷ್ಠಾನ – ಕಲ್ಬುರ್ಗಿಯ ಕೇಂದ್ರ ವಿಶ್ವವಿದ್ಯಾನಿಲಯದ ಕಾನೂನು ವಿಭಾಗ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ನಡೆದ ಆನ್ಲೈನ್ ಉಪನ್ಯಾಸ ಮಾಲಿಕೆಯಲ್ಲಿ ಇಂದು ನಾನು “ನ್ಯಾ. ಡಾ. ಮ. ರಾಮಜೋಯಿಸ ರವರ ಜೀವನದ ಪ್ರೇರಣಾದಾಯಿ ಪ್ರಸಂಗ” ಗಳ ಬಗ್ಗೆ ನನ್ನ ಅನುಭವಗಳನ್ನು ಹಾಗೂ ನೆನಪುಗಳನ್ನು ಹಂಚಿಕೊಂಡೆ.

ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನಾನು ಬೆಂಗಳೂರಿನ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ನನ್ನ ಗೆಳೆಯರೊಂದಿಗೆ ನವಂಬರ್ 7, 8, 9 ಮತ್ತು 10, 1975 ದಿನಗಳಂದು ಬಂಧಿ ಯಾಗಿ ಲಾಕಪ್ ನಲ್ಲಿ ಕೊಳೆಯುತ್ತಾ ಬಿದ್ದಿದ್ದಾಗ, ಶ್ರೀ ರಾಮಾ ಜೋಯಿಸರು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಎಬಿಎಸ್ ಕಾರ್ಪಸ್ ರಿಟ್ ಅರ್ಜಿಯನ್ನು ದಾಖಲಿಸಿದ್ದನ್ನು, ಕಾನೂನು ಪದವಿಯ ನಂತರ ನನ್ನನ್ನು ಅತ್ಯುತ್ತಮ ಸೀನಿಯರ್ ಅಡ್ವೊಕೇಟ್ ಕಚೇರಿಯಲ್ಲಿ(Each ಎಸ್. ವಿ. ರಾಘವಾಚಾರ್ ) ಸೇರಿಸಿದ್ದನ್ನು, ನಾನು ನಗರಪಾಲಿಕಾ ಸದಸ್ಯನಾಗಿ ಶಾಸಕನಾಗಿ ನಂತರ ಸಚಿವನಾಗಿ ಕಾರ್ಯ ಮಾಡುತ್ತಿದ್ದಾಗ ನೀಡಿದ ಮಾರ್ಗದರ್ಶನವನ್ನು ಸ್ಮರಿಸಿಕೊಂಡೆ.

ದಿ. ಮ. ರಾಮಜೋಯಿಸ್ ಅವರ ಜನ್ಮದಿನಾಚರಣೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಿದ ಕಾರ್ಯಕ್ರಮದ ಆಯೋಜಕರಿಗೆ ಧನ್ಯವಾದಗಳು.

Related Articles

Leave a Reply

Your email address will not be published. Required fields are marked *

Back to top button