ಸಂಪಾದಕೀಯ

ವೃಕ್ಷಮಾತೆ ಸಾಲುಮರದ ತಿಮ್ಮಕ್ಕ – ಜನ್ಮದಿನ ಸಮಾರಂಭ – ಹೆಚ್. ಮಾರಪ್ಪ ಬೆಂಗಳೂರು.

.

ವೃಕ್ಷಮಾತೆ ಸಾಲುಮರದ ತಿಮ್ಮಕ್ಕ – ಜನ್ಮದಿನ ಸಮಾರಂಭ – ಹೆಚ್ . ಮಾರಪ್ಪ ಬೆಂಗಳೂರು.ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ವನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದು, ಬೆಳಿಗ್ಗೆ 10.00 ಘಂಟೆಗೆ ಗಿಡ ನೆಡುವ ಕಾರ್ಯಕ್ರಮದೊಂದಿಗೆ ಸಮಾರಂಭಕ್ಕೆ ಚಾಲನೆ ನೀಡಲಾಗುವುದು. ಸಾಲುಮರದ ಶ್ರೀಮತಿ ತಿಮ್ಮಕ್ಕನವರ ಭಾವಚಿತ್ರವನ್ನು ಮಧ್ಯಾಹ್ನ 3.00 ಘಂಟೆಗೆ ಬೆಳ್ಳಿ ರಥದಲ್ಲಿ ವಿವಿಧ ಕಲಾ ತಂಡಗಳೊಂದಿಗೆ ಯಲಹಂಕ ಉಪನಗರ ಮದ‌ರ್ ಡೈರಿ ಸರ್ಕಲ್ ನಿಂದ 16ನೇ ಬಿ. ಮುಖರಸ್ತೆಯಿಂದ ಬಸ್ ನಿಲ್ದಾಣದ ಮಾರ್ಗವಾಗಿ ಚಿಕ್ಕಬೊಮ್ಮಸಂದ್ರ ಸರ್ಕಲ್ ಮಾರ್ಗವಾಗಿ ಯಲಹಂಕ ನೂಟೌನ್ ಕ್ಲಬ್‌ವರೆವಿಗೂ (ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ವೃತ್ತದ) ಮೆರವಣಿಗೆ ಮಾಡುತ್ತಿದ್ದು, ಹಾಗೂ ಹಾಗೂ ಸಂಜೆ 6.00 ರಿಂದ ರಾತ್ರಿ 9.00 ರವರೆಗೆ ಯಲಹಂಕ ಉಪನಗರ, ದಿ ನ್ಯೂಟೌನ್ ಕ್ಲಬ್ ಮುಂಭಾಗದ ರಸ್ತೆಯಲ್ಲಿ ಸ್ಟೇಜ್ ನಿರ್ಮಿಸಿಕೊಂಡು, ಆರ್ಕೆಸ್ಟ್ರಾ ಹಾಗೂ ಧ್ವನಿವರ್ಧಕ ಅಳವಡಿಸಿಕೊಂಡು ಕಾರ್ಯಕ್ರಮ ನಡೆಸಲು ನಿರ್ಧರಿಸಿದ್ದು, ಕಾರ್ಯಕ್ರಮವನ್ನು ಮಾನ್ಯ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಶ್ರೀ ಕೃಷ್ಣಬೈರೇಗೌಡರವರು ಉದ್ಘಾಟಿಸಲಿದ್ದಾರೆ, ಅಧ್ಯಕ್ಷತೆ ವೇದಿಕೆ ರಾಜ್ಯಾಧ್ಯಕ್ಷರಾದ ಶ್ರೀ ಹೆಚ್. ಮಾರಪ್ಪನವರು ವಹಿಸಲಿದ್ದು, ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ವೇದಿಕೆ (ನೋಂ) ನಾಪಫಲಕವನ್ನು ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಸ್.ಆರ್.ವಿಶ್ವನಾಥ್ ಅನಾವರಣ ಗೊಳಿಸಲಿದ್ದಾರೆ ಎಂದು ತಿಳಿಸಿದರು . ಮುಖ್ಯ ಅತಿಥಿಗಳಾಗಿ ಮಾನ್ಯ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಕೆ.ಸುಧಾಕರ್‌ರವರು ಹಾಗೂ ಚಲಚಿತ್ರ ನಿರ್ಮಾಪಕರಾದ ಶ್ರೀಮತಿ. ಅಶ್ವಿನಿ ಪುನೀತ್ ರಾಜ್ ಕುಮಾರ್‌ರವರು, ಪ್ರೋ|| ಕೆ.ಎಸ್. ಭಗವಾನ್ ರವರು, ಖ್ಯಾತ ವಿಚಾರವಾದಿಗಳು, ಮೈಸೂರು, ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಪಿ. ಎಸ್. ಕಾಂತರಾಜ್ ರವರು ಹಾಗೂ ಬೆಂಗಳೂರು ಈಶಾನ್ಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ ಮಿತುನ್ ಕುಮಾರ್‌ರವರು ಆಗಮಿಸಲಿದ್ದಾರೆ.
ಆದುದರಿಂದ ದಿನಾಂಕ:30-6-2026 ರಂದು ಮಂಗಳವಾರ ಮದ್ಯಾಹ್ನ 3.00 ಗಂಟೆಗೆ ವಿವಿಧ ಕಲಾತಂಡ ಗಳೊಂದಿಗೆ ಮೆರವಣಿಗೆ ಹಾಗೂ ಸಂಜೆ 5.00 ಘಂಟೆಗೆ ವೇದಿಕೆ ಕಾರ್ಯಕ್ರಮ ಆಯೋಜನೆ ಮಾಡಿರುವುದರಿಂದ ತಾವುಗಳು ತಮ್ಮ ಪತ್ರಿಕೆ ವರದಿಗಾರರು ಹಾಗೂ ಛಾಯಾಗ್ರಾಹಕರನ್ನು ಕಳುಹಿಸಿಕೊಡುವುದರೊಂದಿಗೆ ಸಹಕರಿಸಬೇಕೆಂದು ಈ ಮೂಲಕ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ವೇದಿಕೆ(ನೋಂ) ವತಿಯಿಂದ ತಮ್ಮಲ್ಲಿ ಕಳಕಳಿಯಿಂದ ಮನವಿ ಮಾಡಿ ಕೊಳ್ಳುತ್ತಿದ್ದೇವೆ ಎಂದರು. ಈ ಪತ್ರಿಕಾ ಗೋಷ್ಠಿ ಯಲ್ಲಿ
ಎಂ.ಎಂ ಮುನಿರಾಜು. (ರಾಜ್ಯ ಗೌರವಾಧ್ಯಕ್ಷರು)
ಹೆಚ್ ಮಾರಪ್ಪ, (ರಾಜ್ಯಾಧ್ಯಕ್ಷರು)
ಜಗದೀಶ್‌ ಗೌಡ
(ರಾಜ್ಯ ಉಪಾಧ್ಯಕ್ಷರು)
ಪಿ.ಮಂಜುನಾಥ
(ರಾಜ್ಯ ಉಪಾಧ್ಯಕ್ಷರು)
ಸಂದೀಪ್. ಎಸ್
ಲಾಂಡ್ರಿ ಸಂದೀಪ್ ಬಿ.
ವಿ.ವಿಲ್ಕರ್ ಮಂಜುನಾಥ
(ರಾಜ್ಯ ಸದಸ್ಯರು)
ಮಹೇಶ್ ಪಿ. ಕೆ ಸಿ. ಬಾಬು
ರಾಜ್ಯ ಸಂಘಟನಾ ಕಾರ್ಯದರ್ಶಿ,
ರಾಜ್ಯ ಸಹ ಕಾರ್ಯದರ್ಶಿ
ಶಶಿಕುಮಾರ್.ಸಿ
ಪ್ರದೀಪ್. ಎ
ಹೆಚ್.ರಮೇಶ್ ವರದಿ. ಮಂಜುಳಾ ರೆಡ್ಡಿ .

Related Articles

Leave a Reply

Your email address will not be published. Required fields are marked *

Back to top button