ಸಂಪಾದಕೀಯ

ಪರಿಶಿಷ್ಟರ ಮೀಸಲಾತಿ 101 ಪರಿಶಿಷ್ಟ ಜಾತಿಗಳ ನಡುವೆ ಸಮಾನವಾಗಿ ಹಂಚಿಕೆಯಾಗಿಲ್ಲ – ಡಾ. ಎನ್. ಮೂರ್ತಿ ಬೆಂಗಳೂರು.

ಪರಿಶಿಷ್ಟರ ಮೀಸಲಾತಿ 101 ಪರಿಶಿಷ್ಟ ಜಾತಿಗಳ ನಡುವೆ ಸಮಾನವಾಗಿ ಹಂಚಿಕೆಯಾಗಿಲ್ಲ – ಡಾ. ಎನ್. ಮೂರ್ತಿ ಬೆಂಗಳೂರು. ಪರಿಶಿಷ್ಟರ ಮೀಸಲಾತಿ 101 ಪರಿಶಿಷ್ಟ ಜಾತಿಗಳ ನಡುವೆ ಸಮಾನವಾಗಿ ಹಂಚಿಕೆಯಾಗಿಲ್ಲ ಎಂದು ಇಂದು ಡಾ. ಎನ್. ಮೂರ್ತಿ ರಾಷ್ಟ್ರೀಯ ಅಧ್ಯಕ್ಷರು RPI(B) ಹಾಗೂ ರಾಜ್ಯಾಧ್ಯಕ್ಷರು DSS ಅವರು ಬೆಂಗಳೂರು . ಪ್ರೆಸ್ ಕ್ಲಬ್ ನಲ್ಲಿ ಆರೋಪಿಸಿದರು. ಆದ್ದರಿಂದ ಮೀಸಲಾತಿಯನ್ನು ವರ್ಗೀಕರಣ ಮಾಡಬೇಕು ಎಂದು ಮಾದಿಗ ಮತ್ತು ಸಂಭಂದಿತ ಜಾತಿಗಳು ಕಳೆದ 35 ವರ್ಷಗಳಿಂದ ನಿರಂತರ ಹೋರಾಟ ನಡೆಸಿವೆ. ಈ ಹೋರಾಟಕ್ಕೆ ಮಣಿದು ಸುಪ್ರೀಂಕೋರ್ಟ್‌ನ 7 ಜನ ನ್ಯಾಯಾದೀಶರ ಪೀಠ ವರ್ಗೀಕರಣಕ್ಕೆ ತೀರ್ಪು ನೀಡಿತು. ಈ ತೀರ್ಪನ್ನು ಪರಿಗಣಿಸಿ ರಾಜ್ಯ ಸರ್ಕಾರ ರಚಿಸಿದ ಆಯೋಗ ವರದಿಯ ಗೌರವಾನ್ವಿತ ನ್ಯಾಯ ಶಿಫಾರಸ್ಸುಗಳನ್ನು ಗಣನೆಗೆ ತೆಗೆದುಕೊಳ್ಳದೆ ಸರ್ಕಾರ ‘ಎ’-ಮಾದಿಗ ಮತ್ತು ಸಂಬಂಧಿತ ಶೇ.6%, ‘ಬಿ’ ಹೊಲೆಯ ಮತ್ತು ಸಂಬಂಧಿತ ಶೇ.6%, ‘ಸಿ’- ಸ್ಪೃಶ್ಯ ಮತ್ತು ಜಾತಿಗಳು ಶೇ.5%, ಒಟ್ಟು ಮೀಸಲಾತಿ ಶೇ.17% ಎಂದು ವಗೀಕರಿಸಿ ವಿಧೇಯಕ ಸಹ ತಂದಿತು. ಮೂರ್ತಿ ನಾಗಮೋಹನ್‌ದಾಸ್
ರಾಜಕೀಯ ಒತ್ತಡಕ್ಕೆ ಮಣಿದು ಮುಖ್ಯಮಂತ್ರಿ ಮಾನ್ಯ ಶ್ರೀ ಸಿದ್ದರಾಮಯ್ಯ ಮತ್ತು ಅವರ ಸರ್ಕಾರ ಗೌರವಾನ್ವಿತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿಗೆ ವೈತಿರಿಕ್ತ ನಡೆಯು ಹೈಕೋರ್ಟ್ ಮೆಟ್ಟಿಲೇರಿತು. ಇದನ್ನೆ ಅಸ್ತ್ರವಾಗಿಸಿಕೊಂಡ ವರ್ಗೀಕರಣದ ವಿರೋದಿಗಳು ಧಾರವಾಡ ಇತರೆ ಕಡೆ ಉದ್ಯೋಗಕಾಂಕ್ಷಿಗಳನ್ನು ಎತ್ತಿ ಕಟ್ಟಿ ಹೋರಾಟ ನಡೆಸಲು ಪರೋಕ್ಷ ಬೆಂಬಲ ನೀಡಿ ವರ್ಗೀಕರಣದ ಎಲ್ಲಾ ಆದೇಶವನ್ನು ಮಣ್ಣುಗೂಡಿಸಿದ್ದಾರೆ.
ರಾಜ್ಯದಲ್ಲಿ ಕಳೆದ ವರ್ಷಗಳಲ್ಲಿ 40 ಸಾವಿರಕ್ಕೂ ಹೆಚ್ಚು ಉದ್ಯೋಗ ನೇಮಕಾತಿಗಳು ವಗೀಕರಣವಿಲ್ಲದೆ ಸ್ವಚ್ಚಚಾರವಾಗಿ ನಡೆದಿವೆ. ರಾಜ್ಯದಲ್ಲಿ ಹಾಲಿ 2.85 ಲಕ್ಷ ಹುದ್ದೆಗಳು ಖಾಲಿ ಇವೆ. ಇದರಲ್ಲಿ 56,432 ಉದ್ಯೋಗಗಳನ್ನು ಜರೂರಾಗಿ ಹಳೇ ಮೀಸಲಾತಿ ಅನುಸರಿಸಿ ….ಉದ್ಯೋಗ ನೇಮಕಾತಿ ಮಾಡಲು “ಸಚಿವ ಸಂಪುಟ” ತರಾತುರಿಯಲ್ಲಿ ಬೀಸೊ ದೊಡ್ಡ ಏಟಿಗೆ ತಪ್ಪಿಸಿಕೊಳ್ಳಲು ಹಾಗೂ ಮುಂದಿನ ನಗರ ಪಾಲಿಕೆ ಇತರೆ ಚುನಾವಣೆ ದೃಷ್ಟಿಯಿಂದ ತಾರೀಖು 26/02/2026 ರಂದು ತೀರ್ಮಾನಿಸಿದೆ. ಈ ಸರ್ಕಾರದ ನಡೆಯು ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ಕಾಳಜಿ ಇಲ್ಲದ ರಾಜಕೀಯ ತಂತ್ರಗಾರಿಕೆಯಾಗಿದೆ.
ಸರ್ಕಾರ ಮುಂದಾಗಿರುವ ನೇಮಕಾತಿ ಆದೇಶದಂತೆ ಪರಿಶಿಷ್ಟರ ಮೀಸಲಾತಿ ವರ್ಗೀಕರಣವನ್ನು ಸಂಪೂರ್ಣವಾಗಿ ಕೈಬಿಟ್ಟು ಹಳೇ ಜಾತಿ ಪತ್ರ ಮತ್ತು ಹಳೇ ಪದ್ಧತಿಯಂತೆ ಶೇ.15 ರಷ್ಟು ಮೀಸಲಾತಿ ಪ್ರಮಾಣದಲ್ಲಿ ಉದ್ಯೋಗ ನೇಮಕಾತಿ ತೀರ್ಮಾನಿಸಿರುವುದು ಪರಿಶಿಷ್ಟ ಜಾತಿಗಳಲ್ಲಿ ಆತಂಕ ಹಾಗೂ ಅಘಾತವಾಗಿದೆ. ಮಾಡಲು
ರಾಜ್ಯ ಸರ್ಕಾರದ ತರಾತುರಿ ಉದ್ಯೋಗ ನೇಮಕಾತಿ ಹಿಂದೆ ಮೀಸಲಾತಿ ವರ್ಗೀಕರಣದ ವಿರೋಧಿಗಳ ಕೈವಾಡವಿದೆ. ಮೀಸಲಾತಿ ವರ್ಗೀಕರಣದಂತೆ ಉದ್ಯೋಗ, ಬಡ್ತಿ ಮೀಸಲಾತಿ, ಬ್ಯಾಕ್‌ಲಾಗ್, ನೇರ ನೇಮಕಾತಿ, ಬಜೆಟ್ ಹಣ ನಿಗದಿಯಾಗದಿದ್ದರೆ ಪರಿಶಿಷ್ಟ ಜಾತಿಗಳಲ್ಲಿ ತೀರ ಹಿಂದುಳಿದ ಮಾದಿಗ ಮತ್ತು ಸಂಬಂದಿತ ಹಾಗೂ 59 ಅಲೆಮಾರಿ ಜಾತಿ ಒಟ್ಟಾರೆ ಪರಿಶಿಷ್ಟ ಅಸ್ಪೃಶ್ಯ ಜಾತಿಗಳಿಗೆ ವಿಷ ಹುಣಿಸಿದಂತಹ ಘೋರ ಅನ್ಯಾಯವಾಗಲಿದೆ.
ಮೀಸಲಾತಿ ವರ್ಗೀಕರಣಕ್ಕೆ ಅಡ್ಡಗಾಲು ಹಾಕಲು ಹೈಕೋರ್ಟ್ ಮೆಟ್ಟಿಲೇರಿಸಿದವರೇ ಉದ್ಯೋಗ ನೇಮಕಾತಿ ಗಲಾಟೆ, ಘರ್ಷಣೆ ಸೃಷ್ಣಸಿದ್ದಾರೆ. ವಿಶ್ವ ವಿದ್ಯಾನಿಲಯಗಳ ನೇಮಕಾತಿಗಳಲ್ಲಿ “ನೇಮಕಾತಿ ಬಿಂದು” ವಿವಾದ ಎಬ್ಬಿಸಿದ್ದಾರೆ. ಅವರ ಬೆನ್ನಿಗೆ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಹಾಗೂ ಅವರ ಸರ್ಕಾರ ಶ್ರೀರಕ್ಷೆಯಾಗಿದೆ.
ಸುಪ್ರೀಂಕೋರ್ಟ್ ತೀರ್ಪುನ್ನು ಗೌರವಿಸಿ ತೆಲಗಾಣ, ಆಂಧ್ರಪ್ರದೇಶ, ಹರಿಯಾಣ ಸರ್ಕಾರಗಳು 6 ತಿಂಗಳಲ್ಲೇ ಮೀಸಲಾತಿ ಜಾರಿ ಮಾಡಿದವು. ಆದರೆ ಸಿದ್ದರಾಮಯ್ಯ ನವರು ಸಾಮಾಜಿಕ ನ್ಯಾಯಾ ಜಾರಿಗೆ ತರುವ ನಾಟಕವಾಡಿ ಹಿಂದುಳಿದ ಜಾತಿಗಳಿಗೆ ನ್ಯಾಯ ಕಲ್ಪಿಸಲು ಕಾಂತರಾಜ್ ಆಯೋಗದ ವರದಿ ಹಾಗೂ ಪರಿಶಿಷ್ಟರ ವಗೀಕರಣದ ಸದಾಶಿವ ಆಯೋಗದ ವರದಿ, ನಾಗಮೋಹನ್‌ದಾಸ್ ಆಯೋಗದ ವರದಿ ಜಾರಿ ಮಾಡದೆ ಅಧಿಕಾರಕ್ಕಾಗಿ ಡೊಂಗಿ ಸಮಾಜವಾದಿಯಾಗಿದ್ದಾರೆ.
ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗಗಳ ಅಭಿವೃದ್ಧಿಯ ಹಣ SCP/TSPಯ ಹಣವನ್ನು ಕಳೆದ 3 ವರ್ಷಗಳಲ್ಲಿ 38,870 ಕೋಟಿ ಹಣವನ್ನು “ಗ್ಯಾರಂಟಿಗೆ” ಇತರೆ ವರ್ಗಾಹಿಸಿ ದುರ್ಬಳಕೆ ಮಾಡಿ ಅನ್ಯಾಯ ಮಾಡಿದ್ದಾರೆ.
ಇದೀಗ ಒಳ ಮೀಸಲಾತಿ ವರ್ಗೀಕರಣವನ್ನು ಬದಿಗೆ ಸರಿಸಿ ಅವೈಜ್ಞಾನಿಕವಾಗಿ ಮತ್ತು ಸಂವಿಧಾನ ಭಾಹಿರವಾಗಿ ಹಾಗೂ ಕಾನೂನು ಬಾಹಿರವಾಗಿ ಉದ್ಯೋಗ ನೇಮಕಾತಿಗೆ ಮುಂದಾಗಿರುವುದನ್ನು ದ.ಸಂ.ಸ ಹಾಗೂ RPI(B) ತೀರ್ವವಾಗಿ ಖಂಡಿಸಿದೆ. ಉದ್ಯೋಗ ನೇಮಕಾತಿಗೆ ನಮ್ಮ ವಿರೋದವಿಲ್ಲ ಹಾಗೂ ಶೀಘ್ರದಲ್ಲಿ ಉದ್ಯೋಗಕಾಕ್ಷಿಗಳಿಗೆ ಉದ್ಯೋಗ…ನೀಡಲಿ. ಆದರೆ ಕೂಡಲೇ ಕೋರ್ಟ್‌ ಗೆ ಮನವರಿಕೆ ಮಾಡಿ ನೇಮಕಾತಿ ಮಾಡಲಿ. ಆಯ್ಕೆ ಪ್ರಕ್ರಿಯೆ ಮುಕ್ತಾಯಗೊಳ್ಳುವ ಮೊದಲು ಒಳಮೀಸಲಾತಿ ಜಾರಿಗೆ ಸರ್ಕಾರ ಬದ್ಧವಾಗಿದೆ ಎಂಬುದು ಮೋಸ ಹಾಗೂ ವಂಚಿಸುವ ರಾಜಕೀಯ ದಾಳವಾಗಿದೆ ಎಂದರು.
ಶೇ.17% ರಷ್ಟು ಮೀಸಲಾತಿ ಪ್ರಮಾಣದಲ್ಲಿ ವರ್ಗೀಕರಣ ವಿಧೇಯಕದಂತೆ ಉದ್ಯೋಗ ನೇಮಕಾತಿ ಮಾಡಲು ಅಗ್ರಹಿಸಿದೆ. ಸರ್ಕಾರದ ವರ್ಗೀಕರಣ ವಿರೋಧಿ ನಡೆಯನ್ನು ಖಂಡಿಸಿ ಏಪ್ರಿಲ್ ಮೊದಲನೇ ವಾರದಲ್ಲಿ ರಾಜ್ಯ ಮಟ್ಟದ ಮಹತ್ವದ ಸಭೆ ನಡೆಸಲು RPI(B) ಮತ್ತು ದ.ಸಂಸ ತೀರ್ಮಾನಿಸಿದೆ. ರಾಜ್ಯಾದ್ಯಂತ ತೀವ್ರ ಹೋರಾಟ ನಡೆಸಲು ಹಾಗೂ ಮುಂದಿನ ಎಲ್ಲಾ ಚುನಾವಣೆಗಳಲ್ಲೂ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ತೀರ್ಮಾನಿಸಲಾಗುವುದು ಎಂದು ರಾಜ್ಯದಲ್ಲಿ ಶಾಸಕರು ಸಚಿವರ ನಡೆಸಲಿರುವ ಸಭೆ ಸಮಾರಂಭಗಳನ್ನು ಬಹಿಸ್ಕರಿಸಿ “ಗೋಬ್ಯಾಕ್” ಚಳುವಳಿ ನಡೆಸಲು ಸಭೆಯಲ್ಲಿ ತೀರ್ಮಾನಿಸ ಸಲಾಗುವುದು ಎಂದು ತಿಳಿಸಿದರು . ಎಲ್ಲಾ ಸಮಾನ ಚಿಂತಕರು ಬೆಂಬಲಿಸಲು ಕೋರಿದೆ.
(ಡಾ|| ಎನ್.ಮೂರ್ತಿ) ರಾಷ್ಟ್ರೀಯ ಅಧ್ಯಕ್ಷರು RPI(B) ಹಾಗೂ ರಾಜ್ಯಾಧ್ಯಕ್ಷರು DSS ವರದಿ. ಮಂಜುಳಾ ರೆಡ್ಡಿ.

Related Articles

Leave a Reply

Your email address will not be published. Required fields are marked *

Back to top button