ಪಾಲಿಕೆಯಲ್ಲಿ ಎರವಲು ಸೇವೆ ಅಧಿಕಾರಿಗಳನ್ನು ಮಾತೃ ಇಲಾಖೆಗೆ ಕಳುಹಿಸಿ,

ಜಿಬಿಎ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ತುರ್ತು ಸಭೆ ಯಶ್ವಸಿ
ಪಾಲಿಕೆಯಲ್ಲಿ ಎರವಲು ಸೇವೆ ಅಧಿಕಾರಿಗಳನ್ನು ಮಾತೃ ಇಲಾಖೆಗೆ ಕಳುಹಿಸಿ, ಅಧಿಕಾರಿ, ನೌಕರರಿಗೆ ಸಕಾಲಕ್ಕೆ ಮುಂಬಡ್ತಿ ಕೊಡಿ ಸಚಿವರಿಗೆ ಮನವಿ
ಬೆಂಗಳೂರು : ಜಿಬಿಎ ಕೇಂದ್ರ ಕಛೇರಿ ನೌಕರರ ಭವನದಲ್ಲಿ ಜಿಬಿಎ-ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ವೃಂದ ಮತ್ತು ನೇಮಕಾತಿ ನಿಯಮಾವಳಿ ಸಿದ್ಧತೆ ಮತ್ತು ಜಿಬಿಎ -ಆಕ್ಟ್ ನಲ್ಲಿ ಪಾಲಿಕೆ ಅಧಿಕಾರಿ, ನೌಕರರಿಗೆ ಆಗುತ್ತಿರುವ ಅನ್ಯಾಯ ಕುರಿತು ತುರ್ತು ಸಭೆ.
ಜಿಬಿಎ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಎ.ಅಮೃತ್ ರಾಜ್ ರವರು, ಪದಾಧಿಕಾರಿಗಳು ಹಾಗೂ ಕಂದಾಯ ಇಲಾಖೆಯ ಅಧಿಕಾರಿ, ನೌಕರರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಅಧ್ಯಕ್ಷರಾದ ಎ.ಅಮೃತ್ ರಾಜ್ ರವರು ಮಾತನಾಡಿ ಜಿಬಿಎ ನಿಯಮಾವಳಿ ರೂಪಿಸಿ ಒಂದು ವರ್ಷವಾದರು ಇನ್ನು ಜಾರಿಗೆ ಬಂದಿಲ್ಲ. ಎ.ಶ್ರೇಣಿ ಅಧಿಕಾರಿಗಳು ಸರ್ಕಾರ, ಬಿ.ಶ್ರೇಣಿ ಅಧಿಕಾರಿಗಳನ್ನು ಮುಖ್ಯ ಆಯುಕ್ತರು, ಬಿ.ಮತ್ತು ಸಿ.ಅಧಿಕಾರಿ, ನೌಕರರನ್ನ ವಲಯ ಆಯುಕ್ತರು ವರ್ಗಾವಣೆ ಮಾಡಲು ಅಧಿಕಾರ ನೀಡಲಾಗಿದೆ ಅದರೆ ಜಂಟಿ ಆಯುಕ್ತರು ವರ್ಗಾವಣೆ ಮಾಡಿ ಆದೇಶ ನೀಡಿದರು ಇದರ ವಿರುದ್ಧ ನಾವು ಕೋರ್ಟ್ ಹೋಗಿ ತಡೆಯಾಜ್ಞೆ ತರಲಾಯಿತು.
ವೃಂದ ಮತ್ತು ನೇಮಕಾತಿ ನಿಯಮಾವಳಿ ಸಮರ್ಪಕವಾಗಿ ಜಾರಿಗೆಯಾಗಿಲ್ಲ ಮತ್ತು ಅಧಿಕಾರಿ ಮತ್ತು ಸಿಬ್ಬಂದಿಗಳ ಕೊರತೆ ಇದೆ.
ಕಂದಾಯ ವಿಭಾಗಕ್ಕೆ ಹೊರ ಇಲಾಖೆಯಿಂದ ಮ್ಯಾನೇಜರ್ ಆಗಿ ಪಾಲಿಕೆಗೆ ಬಂದು ಎ.ಆರ್.ಓ ಹುದ್ದೆ ಬೇಕು ಎಂಬ ಒತ್ತಡ ಹಾಕುತ್ತಿದ್ದಾರೆ. ನಮ್ಮಲ್ಲಿ ಅಧಿಕಾರಿ, ಸಿಬ್ಬಂದಿಗಳು ಇದ್ದರು ಅದನ್ನ ಪರಿಗಣನೆ ಮಾಡದೇ ಬೇರೆ ಇಲಾಖೆಯಿಂದ ಬಂದವರಿಗೆ ಮಣೆ ಹಾಕುತ್ತಿದ್ದಾರೆ.
ಪಂಚ ಪಾಲಿಕೆ ಅಧಿಕಾರಿ, ನೌಕರರಿಗೆ ಕೌನ್ಸಿಲಿಂಗ್ ಮುಂದಿನ ದಿನಗಳಲ್ಲಿ ಮಾಡುತ್ತಿದ್ದಾರೆ ಇದರಲ್ಲಿ ಎಲ್ಲರು ಕೇಂದ್ರ ಕಛೇರಿ ಪಾಲಿಕೆ ಬೇಕು ಎಂದು ಅಧಿಕಾರಿ, ನೌಕರರು ಮನವಿ ಸಲ್ಲಿಸಿ ಇದರಿಂದ ಪಿಂಚಣಿ, ಆರೋಗ್ಯ ಸೌಲಭ್ಯ, ಸೌವಲತ್ತು ಪಡೆಯಲು ಸುಲಭವಾಗುತ್ತದೆ ಬೇರೆ ಪಾಲಿಕೆಯಲ್ಲಿ ಈ ಸೌವಲತ್ತುಗಳು ಪಡೆಯಲು ಏಣಿಗಾಡಬೇಕು ಈ ಸಮಸ್ಯೆ ನಿವಾರಣೆಗಾಗಿ ನಮ್ಮ ಹೋರಾಟ.
ಹೆಲ್ತ್ ಕಾರ್ಡ್ ಅಧಿಕಾರಿ ಮತ್ತು ನೌಕರರಿಗೆ ಬಹಳ ಮುಖ್ಯ. ಈ ಹಿಂದಿನ ವಿಶೇಷ ಆಯುಕ್ತರು ಅಧಿಕಾರಿ, ನೌಕರರಿಗೆ ಕಿರುಕುಳ ನೀಡಿದರು. ಇದರಿಂದ ಹಲವಾರು ಸೌವಲತ್ತು, ಸೌಲಭ್ಯ ಪಡೆಯಲು ನೌಕರರು ವಂಚಿತರಾದರು.
ಕೇಂದ್ರದಲ್ಲಿ ನೌಕರರಿಗೆ ಕ್ವಾರ್ಟಸ್ ಇದೆ ಅದರೆ ಬೇರೆ ಪಾಲಿಕೆ ನೌಕರರಿಗೆ ಇಲ್ಲಿ ಸಿಗಲು ಸಾಧ್ಯವಿಲ್ಲ.
ಕಳೆದ ಒಂದು ವರ್ಷದಲ್ಲಿ ಬಡ್ತಿ ಸಿಗುತ್ತಿಲ್ಲ, ಕಡತಗಳು ಉನ್ನತ ಅಧಿಕಾರಿಗಳ ಬಳಿ ಹೋದರೆ ಚರ್ಚಿಸಿ, ಮಂಡಿಸಿ ಎಂದು ಬರೆದು ಕಳುಹಿಸುತ್ತಾರೆ.ಕಡತಗಳು ಸರಿಯಾಗಿ ವಿಲೇವಾರಿಯಾಗದೇ ಹಲವಾರು ಅಧಿಕಾರಿ, ನೌಕರರು ಮುಂಬಡ್ತಿ ಸಿಗದೇ ನಿವೃತ್ತಿ ಹೊಂದಿದರು ನಮ್ಮ ಸಮಸ್ಯೆಗಳ ನಿವಾರಣೆ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಕೃಷ್ಣಬೈರೇಗೌಡರಿಗೆ ಮನವಿ ಸಲ್ಲಿಸಲಾಯಿತು ಎಂದು ಹೇಳಿದರು.





