ಪಿಯು ಉಪನ್ಯಾಸಕರ ಸಂಘದ ಅಧ್ಯಕ್ಷ ನಿಯಮಬಾಹಿರ ಮುಂದುವರಿಕೆ;ಕೂಡಲೇ ಚುನಾವಣೆಗೆ ಉಪನ್ಯಾಸಕರ ಆಗ್ರಹ.

ಪಿಯು ಉಪನ್ಯಾಸಕರ ಸಂಘದ ಅಧ್ಯಕ್ಷ ನಿಯಮಬಾಹಿರ ಮುಂದುವರಿಕೆ;ಕೂಡಲೇ ಚುನಾವಣೆಗೆ ಉಪನ್ಯಾಸಕರ ಆಗ್ರಹ.
ಬೆಂಗಳೂರು ಏಪ್ರಿಲ್ 3; ಪ್ರಚಾರ ಮತ್ತು ಅಧಿಕಾರದ ಹಪಾಹಪಿಯಿಂದ ರಾಜ್ಯ ಉಪನ್ಯಾಸಕರ ಸಂಘದ ಹಂಗಾಮಿ ಅಧ್ಯಕ್ಷ ನಿಂಗೇಗೌಡ ನಿವೃತ್ತರ ಜೊತೆಗೂಡಿ ಮುಂದುವರೆಯುತ್ತಿರುವುದು ನಿಯಮ ಬಾಹಿರ ಕ್ರಮವಾಗಿದ್ದು ಸಂಘ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ಸಮಸ್ತ ಉಪನ್ಯಾಸಕರ ಹಿತದೃಷ್ಟಿಯಿಂದ ನಿಂಗೇಗೌಡ ಮತ್ತು ಇತರ ಪದಾಧಿಕಾರಿಗಳು ಕೂಡಲೇ ತಮ್ಮ ಸ್ಥಾನ ತೊರೆದು ನ್ಯಾಯಸಮ್ಮತ, ಪಾರದರ್ಶಕ ಹಾಗೂ ಪ್ರವಾಸತ್ತಾತ್ಮಕ ನೆಲೆಯಲ್ಲಿ ಚುನಾವಣೆ ನಡೆಸಿ, ಕ್ರಿಯಾಶೀಲ ನೂತನ ಪದಾಧಿಕಾರಿಗಳು ಆಯ್ಕೆಗೊಳ್ಳಲು ಅನುವು ಮಾಡಿಕೊಡಬೇಕು ಕರ್ನಾಟಕ ಪದವಿ ಪೂರ್ವ ಉಪನ್ಯಾಸಕರ ಸಂಘ ಆಗ್ರಹಿಸಿದೆ.
ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಪನ್ಯಾಸಕರಾದ ಮಂಜುನಾಥ್, ಮಂಜೇಗೌಡ,ಪುರುಷೋತ್ತಮ್ ಜಿ.ಎಸ್.ಶಶಿಧರ್,ಹಂ.ಗು.ರಾಜೇಶ್,ಕರ್ನಾಟಕ ರಾಜ್ಯ ಶಿಕ್ಷಣ ನೀತಿ’ ಸಮಿತಿಯ ಮುಖೇನ ಪಿಯು ಅಸ್ಥಿತೆಯನ್ನು ಉಳಿಸಿಕೊಳ್ಳಲು ಒಂದು ಸುವರ್ಣ ಅವಕಾಶ ಸಂಘದ ಮುಂದಿತ್ತು. ನಾಡೋಜ ಬರಗೂರು ರಾಮಚಂದ್ರಪ್ಪ ಅವರ ಸಲಹೆಯಂತೆ ಸಂಘವು ಎಸ್ ಇಪಿ ಸಮಿತಿಯ ಮುಂದೆ ಸಮರ್ಥನೀಯವಾದ ತಾರ್ಕಿಕ ಹಾಗೂ ಸಾಂಖ್ಯಿಕ ವಿಚಾರ ಮಂಡನೆ ಮಾಡಿದ್ದೆ ಆಗಿದ್ದರೆ ಪಿಯು ಅಸ್ಮಿತೆ ಉಳಿಸಿಕೊಳ್ಳಲು ಅವಕಾಶವಿತ್ತು. ದುರಂತವೆಂದರೆ ಸಮಿತಿಯ ಮುಂದೆ ಸಮರ್ಥ ಮಂಡನೆ ಇರಲಿ, ಒಂದೇ ಒಂದುಮನವಿ ಅಹವಾಲುನ್ನಾಗಲಿ ಅಧ್ಯಕ್ಷರು ಸಲ್ಲಿಸದೆ ಅದಕ್ಷತೆ ಮೆರೆದಿದ್ದು ನಮ್ಮ ಹಾಗೂ ಸಂಘದ ದೌರ್ಭಾಗ್ಯವಾಗಿದೆ. ಇವತ್ತಿನ ಪದವಿ ಪೂರ್ವ ಶಿಕ್ಷಣ ಇಲಾಖೆಯ ದುಸ್ಥಿತಿಗೂ ಕಾರಣವಾಗಿದೆ.ಉಪನ್ಯಾಸಕರ ಸಂಘದ ಹಂಗಾಮಿ ಅಧ್ಯಕ್ಷ ನಿಂಗೇಗೌಡ ಅವರು ರಾಮನಗರ ತಾಲ್ಲೂಕಿನ ಅವೇರಹಳ್ಳಿಯಂತಹ ಗ್ರಾಮೀಣ ಪ್ರದೇಶದ ಕಾಲೇಜಿನಲ್ಲಿ ಸಂಬಳ ಪಡೆಯುತ್ತಾ, ಬೆಂಗಳೂರು ಮಹಾನಗರದ ಹೃದಯಭಾಗವಾದ ಬಸವನಗುಡಿ ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನಲ್ಲಿ ನಿಯೋಜನೆ ಮೇರೆಗೆ ಕಾಲಕಳೆಯುತ್ತಿದ್ದಾರೆ ಬಸವನಗುಡಿ ಕಾಲೇಜಿನಲ್ಲಿ ಖಾಯಂ ಉಪನ್ಯಾಸಕರು ಇದ್ದಾಗಿಯೂ, ಕಾರ್ಯಭಾರವೇ ಇಲ್ಲದ ಕಾಲೇಜಿನಲ್ಲಿ ನಿಂಗೇಗೌಡರು ಕಳೆದ ನಾಲ್ಕು ವರ್ಷಗಳಿಂದ ಹೆಚ್ಚುವರಿಯಾಗಿಯೇ ಉಳಿದುಕೊಂಡು ಉಚಿತ ಸಂಬಳ ಪಡೆಯುತ್ತಿದ್ದಾರೆ. ಇಂತಹ ವ್ಯಕ್ತಿಗೆ ಹೆಚ್ಚುವರಿ ಉಪನ್ಯಾಸಕರ ಸಮಸ್ಯೆಗಳು ಹೇಗೆ ತಾನೆ ಅರ್ಥವಾಗುತ್ತದೆ ಎಂದು ಹೇಳಿದರು.
ಸಚಿವರ ಸ್ಪಷ್ಟಿಕರಣ ನಂತರವೂ ಕೂಡ ಕೆಲಸವೇ ಇಲ್ಲದ ಈ ವ್ಯಕ್ತಿಯು ಪಿಯು ಕಾಲೇಜುಗಳನ್ನು ಸಿಇಒ ಅಧೀನಕ್ಕೆ ಒಳಪಡಿಸಲಾಗುತ್ತಿದೆ ಎಂದು ಉಪನ್ಯಾಸಕ ಸಮುದಾಯಕ್ಕೆ ತಪ್ಪು ಮಾಹಿತಿ ನೀಡಿ, ಸರ್ಕಾರದ ವಿರುದ್ಧವೇ ಪ್ರತಿಭಟನೆ ನಡೆಸುವ ವಿಫಲ ಪ್ರಯತ್ನ ನಡೆಸಿದ್ದು ಅಕ್ಷಮ್ಯ ಅಪರಾಧವಾಗಿದೆ. ಮಿಗಿಲಾಗಿ ಶೈಕ್ಷಣಿಕವಾಗಿ ಹಿಂದುಳಿದಿರುವ ಗ್ರಾಮೀಣ ಪ್ರದೇಶದ ಆವ್ವೇನಹಳ್ಳಿ ಕಾಲೇಜಿನಲ್ಲಿ ಕೇವಲ ಇಬ್ಬರು ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದು, ಅಲ್ಲಿನ ಶೈಕ್ಷಣಿಕ ಪ್ರಗತಿ ಸಂಪೂರ್ಣ ಕುಂಟಿತಗೊಂಡಿದೆ. ಆದ್ದರಿಂದ ನಿಂಗೇಗೌಡ ಅವರನ್ನು ಕೂಡಲೇ ಬಿಡುಗಡೆಗೊಳಿಸಿ ಮೂಲ ಕಾಲೇಜಿಗೆ ಕಳುಹಿಸಬೇಕೆಂದು ಈ ಮೂಲಕ ಸರ್ಕಾರವನ್ನು ಒತ್ತಾಯಿಸಲಾಗುತ್ತಿದೆ ಎಂದು ತಿಳಿಸಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವರಾದ ಮಧು ಬಂಗಾರಪ್ಪ ಅವರು ಇತ್ತೀಚೆಗೆ ವಿಧಾನ ಪರಿಷತ್ತಿನಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿ ಪದವಿ ಪೂರ್ವ ಶಿಕ್ಷಣ ಇಲಾಖೆಯನ್ನು ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳ ಆಧೀನಕ್ಕೆ ವಹಿಸುವ ಯಾವ ಪ್ರಸ್ತಾಪವೂ ಸರ್ಕಾರದ ಮುಂದಿರುವುದಿಲ್ಲ ಎಂದು 2023ರ ಬೆಳಗಾವಿ ಅಧಿವೇಶನದಲ್ಲಿಯೇ ಸ್ಪಷ್ಟಪಡಿಸಿದ್ದು ಜೊತೆಗೆ ಇತ್ತೀಚೆಗೆ ಎಂ.ಎಲ್.ಸಿಗಳ ಜೊತೆಗೆ ನಡೆಸಿದ ಸಭೆಯಲ್ಲಿ ಸಹ ಯಾವುದೇ ಪ್ರಸ್ತಾವನೆ ಇಲ್ಲವೆಂದು ಸ್ಪಷ್ಟಪಡಿಸಿರುವುದಾಗಿ ತಿಳಿಸಿದ್ದಾರೆ.ಆದರೆ ಉಪನ್ಯಾಸಕರ ಸಂಘ ಮೌಲ್ಯಮಾಪನವನ್ನು ಬಹಿಷ್ಕರಿಸುವ `ಬ್ಲಾಕ್ ಮೆಲ್’ ತಂತ್ರವನ್ನು ಸರ್ಕಾರದ ವಿರುದ್ಧ ಮಾಡುತ್ತಿದ್ದಾರೆ. ಸಂಘದ ಪದಾಧಿಕಾರಿಗಳ ಅವಧಿ ಮುಗಿದು 2 ವರ್ಷಗಳೇ ಕಳೆದಿವೆ. ನಿವೃತ್ತರಾಗಿರುವವರೂ ಕೂಡ ಸಂಘದಲ್ಲಿ ಹಂಗಾಮಿಯಾಗಿಯೇ ಮುಂದುವರೆಯುತ್ತಿದ್ದಾರೆ. ಇದಕ್ಕೆ ಸಂಘದ ನಿಬಂಧನೆಗಳಲ್ಲಿ ಅವಕಾಶವಿರುವುದಿಲ್ಲವಾದ್ದರಿಂದ ಇದೊಂದು ಕಾನೂನುಬಾಹಿರ ಕ್ರಮವಾಗಿದೆ. ಈ ಸಂಬಂಧ ಸಹಕಾರ ಸಂಘದ ಉಪನಿಬಂಧಕರಿಗೂ ನಾವುಗಳು ದೂರು ನೀಡಿ, ಅವಧಿ ಮುಗಿದ ನಂತರ ಮಾಡಿರುವ ಸಂಘದ ಬೈಲ ತಿದ್ದುಪಡಿಯು ನಿಯಮ ಬಾಹಿರವಾಗಿದ್ದು, ಯಾವುದೇ ಕಾರಣಕ್ಕೂ ಅನುಮೋದನೆ ನೀಡಬಾರದು. ಅವಧಿ ಮುಗಿದಿರುವುದರಿಂದ ಆಡಳಿತಾಧಿಕಾರಿಗಳನ್ನು ನೇಮಿಸಬೇಕು ಎಂದು ಆಗ್ರಹಿಸಿದರು. ವರದಿ. ಮಂಜುಳಾ ರೆಡ್ಡಿ.



