ಬಲಾಡ್ಯರ ಓಲೈಕೆಗಾಗಿ ಸಾಮಾಜಿಕ ನ್ಯಾಯದ ಸಮಾಧಿ – ಸಿದ್ದರಾಮಯ್ಯನವರ ಬಜೆಟ್ ನಲ್ಲಿ ಅಲೆಮಾರಿಗಳಿಗೆ ಅನ್ಯಾಯ.

ಬಲಾಡ್ಯರ ಓಲೈಕೆಗಾಗಿ ಸಾಮಾಜಿಕ ನ್ಯಾಯದ ಸಮಾಧಿ – ಸಿದ್ದರಾಮಯ್ಯನವರ ಬಜೆಟ್ ನಲ್ಲಿ ಅಲೆಮಾರಿಗಳಿಗೆ ಅನ್ಯಾಯ – ಮಂಜುನಾಥ್
ಬೆಂಗಳೂರು. ಬಲಾಡ್ಯರ ಓಲೈಕೆಗಾಗಿ ಸಾಮಾಜಿಕ ನ್ಯಾಯದ ಸಮಾಧಿ ಮಾಡಿದ್ದಾರೆಂದು ಸಿದ್ದರಾಮಯ್ಯನವರ ಬಜೆಟ್ ನಲ್ಲಿ ಅಲೆಮಾರಿಗಳಿಗೆ ಅನ್ಯಾಯ ಎಂದು ಮಂಜುನಾಥ್ ಡಯಟ್ಕರ್ ಅವರು ಇಂದು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಆಗ್ರಸಿದರು. ಸಿದ್ದರಾಮಯ್ಯನವರ ಬಜೆಟ್ ನಲ್ಲಿ ಅಲೆಮಾರಿಗಳಿಗೆ ಅನ್ಯಾಯ
1% ಒಳಮೀಸಲಾತಿಯಂತೂ ಇಲ್ಲ. ಮುಖ್ಯಮಂತ್ರಿಗಳು ಮತ್ತು ಸಮಾಜ ಕಲ್ಯಾಣ ಸಚಿವರು ನಮಗೆ ಈ ಹಿಂದೆ ಭರವಸೆ ಕೊಟ್ಟಂತೆ ಪ್ರತ್ಯೇಕ ನಿಗಮವೂ ಇಲ್ಲ. ಸಬಲೀಕರಣದ ವಿಶೇಷ ಪ್ಯಾಕೇಜೂ ಇಲ್ಲ.
ಕರ್ನಾಟಕ ಸರಕಾರವು ದಿ: 06.ರಂದು ತನ್ನ ವಾರ್ಷಿಕ ಆಯವ್ಯಯವನ್ನು ಮಂಡಿಸಿದೆ. ಈ ಅಯವ್ಯಯದಲ್ಲಿ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಯಾವ ಬೇಡಿಕೆಗಳನ್ನೂ ಈಡೇರಿಸಿಲ್ಲ. ಈ ಹಿಂದೆ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ಅನುಸಾರ 49 ಅಲೆಮಾರಿ ಸಮುದಾಯಗಳನ್ನು ಪ್ರವರ್ಗ ‘ಎ’ನಲ್ಲಿ ಇರಿಸಿ ಶೇ 14ರಷ್ಟು ಮೀಸಲಾತಿಯನ್ನು ನೀಡಬೇಕಿತ್ತು. ಆದರೆ ಕರ್ನಾಟಕ ಸರಕಾರ ಅಲೆಮಾರಿ ಸಮುದಾಯಗಳನ್ನು ಬಲಾಡ್ಯರ ಗುಂಪಿಗೆ ಸೇರಿಸಿ, ಮೀಸಲಾತಿಯನ್ನು ನೀಡದೆ ವಂಚಿಸಿತ್ತು. ಆ ಮೂಲಕ ಸರ್ವೋಚ್ಚ ನ್ಯಾಯಾಲಯವು ಒಳಮೀಸಲಾತಿಯನ್ನು ಕುರಿತು ನೀಡಿದ್ದ ಚಾರಿತ್ರಿಕ ತೀರ್ಪನ್ನೇ ಮೂಲೆಗುಂಪು ಮಾಡಿತ್ತು. ಇದನ್ನು ಪ್ರತಿಭಟಿಸಿ 49 ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಒಕ್ಕೂಟದಿಂದ 2025ರ ಅಕ್ಟೋಬರ್ 2ರಂದು ನಮ್ಮ ಮಹಾಒಕ್ಕೂಟದಿಂದ ‘ದೆಹಲಿ ಚಲೋ’ ಪ್ರತಿಭಟನೆಯನ್ನು ಮಾಡಿದ್ದೆವು. ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ ನಮ್ಮ ಅಹವಾಲುಗಳನ್ನು ಹೇಳಿಕೊಳ್ಳಲು 15ದಿನಗಳ ಕಾಲ ದೆಹಲಿಯ ಬೀದಿಗಳಲ್ಲಿ, ಎಐಸಿಸಿ ಕಛೇರಿಯ ಕಾಂಪೌಂಡಿನಲ್ಲಿ ಧರಣಿ ಕುಳಿತೆವು ಎಂದು ಶೇಷಪ್ಪ ಆಂದೋಲು ಅವರು ತಿಳಿಸಿದರು.
ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಸಮಾಜ ಕಲ್ಯಾಣ ಸಚಿವರಾದ ಡಾ. ಎಚ್. ಸಿ. ಮಹದೇವಪ್ಪನವರು ‘ಅಲೆಮಾರಿಗಳಿಗೆ ಶೇ%, ಪ್ರತ್ಯೇಕ ಅಭಿವೃದ್ಧಿ ನಿಗಮ ಮತ್ತು ಅಭಿವೃದ್ಧಿಯ ವಿಶೇಷ ಪ್ಯಾಕೇಜನ್ನು ನೀಡಲು ನಮ್ಮ ಸರಕಾರಕ್ಕೆ ತಾತ್ವಿಕ ಒಪ್ಪಿಗೆ ಇದೆ’ ಎಂದು ಭರವಸೆ ನೀಡಿ ದೆಹಲಿಯಿಂದ ನಮ್ಮನ್ನು ವಾಪಸ್ ಕರೆಯಿಸಿಕೊಂಡಿದ್ದರು. ನಂತರ ಅಕ್ಟೋಬರ್ 31ರಂದು ಅಲೆಮಾರಿ ಸಮುದಾಯಗಳ ಮುಖಂಡರನ್ನು ಮಾನ್ಯ ಮುಖ್ಯಮಂತ್ರಿಗಳು ಸಭೆ ಕರೆದು ಶೇ 1% ಮೀಸಲಾತಿಯನ್ನು ಮತ್ತು ಪ್ರತ್ಯೇಕ ಅಭಿವೃದ್ಧಿ ನಿಗಮ ಮತ್ತು ಅಭಿವೃದ್ಧಿಯ ವಿಶೇಷ ಪ್ಯಾಕೇಜನ್ನು ನೀಡುವ ಭರವಸೆಯನ್ನು ಸಭೆಯಲ್ಲಿ ನೀಡಿದ್ದರು. ದಿ: 05.ರಂದು ಸಮಾಜ ಕಲ್ಯಾಣ ಸಚಿವರಾದ ಡಾ. ಎಚ್. ಸಿ. ಮಹದೇವಪ್ಪನವರು ಆಲೆಮಾರಿ ಸಮುದಾಯಗಳ ಪ್ರತಿನಿಧಿಗಳನ್ನು ಕರೆದು 2026-27ನೇ ಸಾಲಿನ ಆಯವ್ಯಯದಲ್ಲಿ ಅಲೆಮಾರಿ ಸಮುದಾಯಗಳಿಗೆ ನೀಡಬೇಕಿರುವ ಅಭಿವೃದ್ಧಿ ಯೋಜನೆಗಳನ್ನು ಕುರಿತು ಚರ್ಚಿಸಿದರು. ಈ ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಶ್ರೀ ರಂದೀಪ್, ಶ್ರೀ ರಾಕೇಶ್ ಕುಮಾರ್, ಶ್ರೀ ವೆಂಕಟಯ್ಯ ಮತ್ತು ಇತರೆ ಅಧಿಕಾರಿಗಳು ಇದ್ದರು. ನಾವು ಅಂದಿನ ಸಭೆಯಲ್ಲಿ ಇಟ್ಟ ಬೇಡಿಕೆಗಳು ಹೀಗಿದ್ದವು;….. ಕರ್ನಾಟಕ ಸರಕಾರದ ವಿರುದ್ಧ ನಮ್ಮ ಹೋರಾಟ ನಿಲ್ಲುವುದಿಲ್ಲ. ನಾವು ಸಂಖ್ಯೆಯಲ್ಲಿ ಕಡಿಮೆ ಇರಬಹುದು. ನಿಮ್ಮನ್ನು ಚುನಾವಣೆಗಳಲ್ಲಿ ಗೆಲ್ಲಿಸಲು ಬೇಕಾದ ಸಂಖ್ಯೆ ನಮ್ಮಲ್ಲಿ ಇಲ್ಲದೇ ಇರಬಹುದು. ಆದರೆ ನಿಮ್ಮ ಆಷಾಡಭೂತಿ ಅವಕಾಶವಾದಿ ರಾಜಕಾರಣವನ್ನು ಜನತೆಯ ಮುಂದೆ ಇಡುತ್ತೇವೆ. ಒಳಮೀಸಲಾತಿಯಲ್ಲಿ ಸರಿಯಾದ ಪಾಲನ್ನು ಪಡೆಯಲು ನಾವು ಬೀದಿ ಹೋರಾಟಗಳನ್ನು ಮುಂದುವರೆಸುತ್ತೇವೆ. ಹಾಗೆಯೇ ನ್ಯಾಯಾಲಯದಲ್ಲಿ ನಮ್ಮ ನ್ಯಾಯಬದ್ಧ ಹಕ್ಕಿಗಾಗಿ ಹೋರಡುತ್ತಲೇ ಇರುತ್ತೇವೆ. ಮುಂದೆ ಕರ್ನಾಟಕದ ಜನ ನಿಮ್ಮ ಜಾತಿವಾದಿ. ಡೋಂಗಿ ರಾಜಕಾರಣಕ್ಕೆ ಪಾಠ ಕಲಿಸುತ್ತಾರೆ ಎಂದು ಮಂಜುನಾಥ್ ಡಯಟ್ಕರ್ ತಿಳಿಸಿದರು.
ಕರ್ನಾಟಕ ಸರಕಾರದಿಂದ ವಂಚನೆಗೀಡಾದವರು
49 ಅಸ್ಪಶ್ಯ ಅಲೆಮಾರಿ ಸಮುದಾಯಗಳು ಮತ್ತು 10 ಸೂಕ್ತ ಪರಿಶಿಷ್ಟ ಜಾತಿಗಳು
ಎಂದು ತಿಳಿಸಿದರು. ಈ ಪತ್ರಿಕಾಗೋಷ್ಟಿ ಯಲ್ಲಿ ಕೃಷ್ಣಪ್ಪ ಆಂದೋಲ್ , ಮಂಜುನಾಥ್ ದತ್ಕರ್ , ಬಸವರಾಜ್ ನಾರಾಯಣಕರ್ , ಡಿ ಆರ್. ಚಿನ್ನ ಮುಂತಾದವರು ಉಪಸ್ಥಿತರಿದ್ದರು . ವರದಿ. ಮಂಜುಳಾ ರೆಡ್ಡಿ.



