ಸಂಪಾದಕೀಯ

ಮಹರ್ಷಿ ವಾಲ್ಮೀಕಿ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಬಸವರಾಜ್

ಮಹರ್ಷಿ ವಾಲ್ಮೀಕಿ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಬಸವರಾಜ್ ಡಣಾಪುರ್ ಆಯ್ಕೆ.

ಪ್ರಜಾಶ್ರೀ ವಾರ್ತೆ

ಸಿಂಧನೂರು ತಾಲೂಕಿನ ತುರುವಿಹಾಲ ಪಟ್ಟಣದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಸಂಘದ ಅಧ್ಯಕ್ಷ,ಉಪಾಧ್ಯಕ್ಷ, ಹಾಗೂ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು ಎಂದು ಸಂಘದ ನೂತನ ಅಧ್ಯಕ್ಷ ಬಸವರಾಜ ಡಣಾಪುರ ಮಾಹಿತಿ.
ನಂತರ ಮಾತನಾಡಿದ ನೂತನ ಅಧ್ಯಕ್ಷ ಬಸವರಾಜ ಡಣಾಪುರ ಸಮಾಜದ ಕೆಲಸಗಳಲ್ಲಿ ತನು ಮನ ಧನದಿಂದ ಕೆಲಸವನ್ನು ನಿರ್ವಹಿಸುತ್ತೇನೆ, ಎಲ್ಲಾ ಪದಾಧಿಕಾರಿಗಳನ್ನು ಸಮಚಿತ ಭಾವದಿಂದ ನಾವೆಲ್ಲರೂ ಒಂದೇ ಎನ್ನುವ ನುಡಿಯಂತೆ ನಡೆದುಕೊಂಡು ಹೋಗುತ್ತೇನೆ ನನ್ನನ್ನು ಸಮಾಜದ ನೂತನ ಅಧ್ಯಕ್ಷನನ್ನಾಗಿ ಮಾಡಿದ್ದಕ್ಕೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ನೆರೆದ ಸಮಾಜದ ಮುಖಂಡರನ್ನು ಉದ್ದೇಶಿಸಿ ಮಾತನಾಡಿದರು.

ತುರುವಿಹಾಲ ಪಟ್ಟಣದ ಮಹರ್ಷಿ ವಾಲ್ಮೀಕಿ ಭವನದಲ್ಲಿ ಸರ್ವ ಸದಸ್ಯರು,ಮುಖಂಡರು ಭಾಗಿತ್ವದಲ್ಲಿ ನೂತನ ಗೌರವಾಧ್ಯಕ್ಷರಾಗಿ ದೊಡ್ಡಪ್ಪ ಕಲ್ಗುಡಿ, ಅಧ್ಯಕ್ಷರಾಗಿ ಬಸವರಾಜ ಡಣಾಪುರ್, ಉಪಾಧ್ಯಕ್ಷರಾಗಿ ಹನುಮೇಶ ಬಾಗೋಡಿ, ಪ್ರಧಾನ ಕಾರ್ಯದರ್ಶಿಯಾಗಿ ಹನುಮಂತ ನಾಯಕ್ ಖಜಾಂಚಿ ನಾಗರಾಜ್ ತೆಕ್ಕಲಕೋಟೆ ರನ್ನು ನೂತನವಾಗಿ ಆಯ್ಕೆ ಮಾಡಲಾಗಿದೆ ಎಂದು ಸಂಘದ ನೂತನ ಅಧ್ಯಕ್ಷರಾದ ಬಸವರಾಜ್ ಡಣಾಪುರ್ ಅವರು ತಿಳಿಸಿದ್ದಾರೆ.
ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಆರ್ ಶಿವನಗೌಡ, ತಿರುಪತೆಪ್ಪ ನಾಯಕ,ತಿಮ್ಮಣ್ಣ ಕಲ್ಗುಡಿ,ದುರುಗೇಶ ವಕೀಲ,ದುರುಗಪ್ಪ ಮೇದಕಿನಾಳ,ಮಂಜುನಾಥ ಬಾಗೊಡಿ,ಮರಿಯಪ್ಪ ಶಿಕ್ಷಕರು,ನಾಗಪ್ಪ ಸಂದೂರಿ ಪಾಮೇಶ ಕಲ್ಗುಡಿ,ಹನುಮಂತ ಬಾದರ್ಲಿ,ವೆಂಕೋಬ ಡಿ ಎಂ ಸಿ,ಶಂಕರಲಿಂಗ ಬೆನಕನಾಳ,ರಂಗನಾಥ ನಾಯಕ್,ಪರಶುರಾಮ,ಶಂಕರಲಿಂಗ ಬಾದರ್ಲಿ,ನಾಗೇಶ ಡಣಾಪುರ್,ಕರಿಯಪ್ಪ ತಳವಾರ,ರವಿ ಶಿಕ್ಷಕ,ಲಕ್ಷ್ಮಣ,ದೇವಪ್ಪ, ಬಸವರಾಜ್ ವಕ್ರಾಣಿ ಈರಪ್ಪ ವಕ್ರಾಣಿ,ಸಿದ್ದು, ಯಮನೂರ,ಹನುಮೇಶ ನಾಯಕ್, ಮಲ್ಲಿಕಾರ್ಜುನ ಸೇರಿದಂತೆ ಸಮಾಜ ಮುಖಂಡರು,ಗುರು ಹಿರಿಯರು,ಯುವಕರು ಭಾಗಿಯಾಗಿದ್ದರು.

ಕಾಂಗ್ರೆಸ್ ಎಸ್ ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್ ಸಿದ್ದನಗೌಡ ತುರವಿಹಾಳ ನೂತನ ಗೌರವಾಧ್ಯಕ್ಷರಾದ ದೊಡ್ಡಪ್ಪ ಕಲ್ಗುಡಿ, ಅಧ್ಯಕ್ಷರಾದ ಬಸವರಾಜ ಡಣಾಪುರ್, ಉಪಾಧ್ಯಕ್ಷರಾದ ಹನುಮೇಶ ಬಾಗೋಡಿಗೆ ಸನ್ಮಾನಿಸಿ ಗೌರವಿಸಿದರು.

ವರದಿ:ವಿಜಯ್ ಹಿರೇಮಠ ತುರ್ವಿಹಾಳ.
ಪ್ರಜಾಶ್ರೀ ಕನ್ನಡ ರಾಷ್ಟ್ರೀಯ ದ್ವಿಭಾಷ ಪಾಕ್ಷಿಕ ಪತ್ರಿಕೆ.
9886962635
Prajasri news and YouTube channel ಬೆಂಗಳೂರು– ೦೧

Related Articles

Leave a Reply

Your email address will not be published. Required fields are marked *

Back to top button