ಪಡಿತರ ವಿತರಕರ ಸಮಸ್ಯೆಗಳನ್ನು ಬೇಗ ಪರಿಷ್ಕರಿಸಿ – ಡಿ. ಜಿ. ಶಿವಾನಂದ ಬೆಂಗಳೂ

ಪಡಿತರ ವಿತರಕರ ಸಮಸ್ಯೆಗಳನ್ನು ಬೇಗ ಪರಿಷ್ಕರಿಸಿ – ಡಿ. ಜಿ. ಶಿವಾನಂದ ಬೆಂಗಳೂರು. ರಾಜ್ಯದಲ್ಲಿ ತಮ್ಮ ಸರ್ಕಾರ ಬಂದ ಮೇಲೆ, 10 ಕೆ.ಜಿ. ಅಕ್ಕಿ ಕೊಡುವುದಾಗಿ ಭರವಸೆ ನೀಡಿರುವುದು ಸರಿ ಅಷ್ಟೆ ಇದುವರೆಗು ಸಮಸ್ಯೆ ಯನ್ನು ಬಗೆಹರಿಸಲಿಲ್ಲ ಎಂದು ರಾಜ್ಯ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘ ದ ಅದ್ಯಕ್ಷರಾದ ಕೃಷ್ಣ ಡಿ. ನಾಯಕ ಅವರು ಇಂದು ಪ್ರೆಸ್ ಕ್ಲಬ್ ನಲ್ಲಿ ದೂರಿದರು. ಕಾಂಗ್ರೆಸ್ವ. ಅಧಿಕಾರಕ್ಕೆ ಬಂದ ನಂತರ, ಜೂನ್ ತಿಂಗಳಲ್ಲಿ ಆಹಾರ ಸಚಿವರಾದ ಮಾನ್ಯ ಶ್ರೀ KH. ಮುನಿಯಪ್ಪ ಅವರನ್ನು ಭೇಟಿ ಮಾಡಿ, ನಮ್ಮ ಸಮಸ್ಯೆಗಳ ಬಗ್ಗೆ, ಸವಿವರವಾಗಿ ತಿಳಿಸಲಾಗಿತ್ತು. ಅದರಲ್ಲಿ ಬಹಳ ಮುಖ್ಯವಾಗಿ ಪ್ರತಿ ಚೀಟಿದಾರರಿಗೆ 10 ಕೆ.ಜಿ. ಅಕ್ಕಿ ನೀಡಬೇಕೆಂದು ಮನವಿ ಮಾಡಿದ್ದೆವು ಮತ್ತು ನಾವು ಕಳೆದ ನಾಲ್ಕು ವರ್ಷಗಳಿಂದ ಈ ಕೆವೈಸಿ ಮಾಡಿರುವ ಹಣವನ್ನು ಬಿಡುಗಡೆ ಮಾಡಲು ಕೋರಿರುತ್ತೇವೆ. ಆದರೆ, ಐದು ತಿಂಗಳಾದರೂ ನಮ್ಮ ಸಮಸ್ಯೆಗಳು ಯಾವುದೇ ರೀತಿ ಪರಿಹಾರ ಆಗಿರುವುದಿಲ್ಲ. ಇಲಾಖೆ ಅಧೀನ ಕಾರ್ಯದರ್ಶಿಯವರು ಆಗಸ್ಟ್ 18 ರಂದು ಎಲ್ಲಾ ನ್ಯಾಯ ಬೆಲೆ ಅಂಗಡಿಗಳಲ್ಲಿ ಸರ್ಕಾರದಿಂದ ನೀಡುವ ಆಹಾರ ಧಾನ್ಯಗಳ ಬಗ್ಗೆ ರಸೀದಿ ನೀಡಲು ಎಲ್ಲಾ ನ್ಯಾಯ ಬೆಲೆ ಅಂಗಡಿ ವಿತರಕರು ಪ್ರಿಂಟರನ್ನು ಖರೀದಿ ಮಾಡಬೇಕೆಂದು ಆದೇಶ ಮಾಡಿರುತ್ತಾರೆ. ಆದರೆ ನಾವು ಖರೀದಿ ಮಾಡಲು ಬಹಳ ಕಷ್ಟಕರವಾಗಿದೆ. ಆದ್ದರಿಂದ, ಸರ್ಕಾರದಿಂದ ಪ್ರಿಂಟರನ್ನು ನೀಡಬೇಕೆಂದು ಒತ್ತಾಯಿಸುತ್ತಿದ್ದೇವೆ, ಅದರ ಜೊತೆಗೆ ಸರ್ಕಾರದಲ್ಲಿ ಕಳೆದ ಮಾಹೆಯಿಂದ ಗೋಣಿ ಚೀಲದ, ಬದಲು ಪ್ಲಾಸ್ಟಿಕ್ ಚೀಲವನ್ನು ನೀಡುತ್ತಿದ್ದೀರಿ. ಇದರಿಂದ ವಿತರಕರಿಗೆ ಇನ್ನಷ್ಟು ತೊಂದರೆಯಾಗಿದೆ ಎಂದು ಎಂ. ಕೆ.ರಾಮಚಂದ್ರಪ್ಪ ತಿಳಿಸಿದರು.
ಒಂದು ಕಡೆ, ಅಕ್ಕಿಯನ್ನು ಕಡಿಮೆ ಮಾಡಿ ನಮಗೆ ಲಾಭಾಂಶ ಕಡಿಮೆಯಾಗಿದೆ. ಮತ್ತೊಂದು ಕಡೆ ಗೋಣಿ ಚೀಲದಿಂದ ನಮಗೆ ನಷ್ಟವಾಗುತ್ತಿದೆ, ಆದ್ದರಿಂದ ತಾವುಗಳು ನಮ್ಮ ಸಮಸ್ಯೆಗಳ ಬಗ್ಗೆ ಗಂಭೀರವಾಗಿ ಪರಿಗಣಿಸಿ, ನಾವು ಮಾಡಿರುವ ಇ.ಕೈ.ವೈ.ಸಿ ಹಣವನ್ನು ನೀಡಬೇಕು, ನಮಗೆ ಬರಬೇಕಾದ ಕಮೀಶನ್ ಹಣ ಪ್ರತಿ ತಿಂಗಳು ಬರಬೇಕು ಮತ್ತು ಬ್ಲಾಸ್ಟಿಕ್ ಚೀಲವನ್ನು ರದ್ದುಗೊಳಿಸಬೇಕು ಮತ್ತು ನಮಗೆ ಪ್ರತಿ ಕ್ವಿಂಟಾಲ್ಗೆ 250 ರೂಪಾಯಿ ಕಮೀಷನ್’ ನೀಡಬೇಕೆಂದು ಈ ಮೂಲಕ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದೇವೆ. ಎಂದು ಡಿ.ಜಿ. ಶಿವಾನಂದಪ್ಪ ಅವರು ತಿಳಿಸಿದರು . ವರದಿ . ಮಂಜುಳಾ ರೆಡ್ಡಿ.



