ಸಂಪಾದಕೀಯ

ವಾಮನ್ ಬಾoಡಗೆ ಅವರು ಇಂದು ಬೆಳಿಗ್ಗೆ ನಿಧನರಾದರು.ಛಾಯಾಗ್ರಾಹಕರಾಗಿ ಸೇವೆ ಆರಂಭಿಸಿದ ವಾಮನ್.

ಹಿರಿಯ ಛಾಯಾಗ್ರಾಹಕರ ವಾಮನ ಬಾoಡಗೆ ಇನ್ನಿಲ್ಲ

ಹುಬ್ಬಳ್ಳಿ Prajakiran News . ಹುಬ್ಬಳ್ಳಿ ಮಾಧ್ಯಮ ಕ್ಷೇತ್ರದಲ್ಲಿ ಸುಮಾರು 30-35 ವರ್ಷಗಳ ಕಾಲ ಸೇವೆ ಸಲ್ಲಿಸುವ ಮೂಲಕ ಚಿರಪರಿಚಿತರಾಗಿದ್ದ
ವಾಮನ್ ಬಾoಡಗೆ ಅವರು ಇಂದು ಬೆಳಿಗ್ಗೆ ನಿಧನರಾದರು.
ಛಾಯಾಗ್ರಾಹಕರಾಗಿ ಸೇವೆ ಆರಂಭಿಸಿದ ವಾಮನ್
ಬಾoಡಗೆ ಅವರು ಸ್ಥಳೀಯ ಕೇಬಲ್ ನಲ್ಲಿ ಗುರುನಾಥ್ ಸಾ ಬಾoಡಗೆ ಸೇರಿದಂತೆ ಸ್ನೇಹಿತರ ತಂಡ ಕಟ್ಟಿ ಹುಬ್ಬಳ್ಳಿ ಧಾರವಾಡ ವಾರ್ತೆ ಪ್ರಾರಂಭಿಸಿ
ಜನಪ್ರಿಯರಾಗಿದ್ದರು .
ನಂತರ ಸಂಯುಕ್ತ ಕರ್ನಾಟಕ, ಪಿಟಿಐ ನಲ್ಲಿ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸಿ, ಈಗ ಟೈಮ್ ಆಫ್ ಇಂಡಿಯಾದಲ್ಲಿ ಫೋಟೋಗ್ರಾಫರ್ ಆಗಿ ಸೇವೆ ಮಾಡುತ್ತಿದ್ದರು.
ಉತ್ತಮ ಛಾಯಾಗ್ರಾಹಕರಾಗಿ ಗುರುತಿಸಿಕೊಂಡಿದ್ದ ಅವರು ತಮ್ಮ ಸ್ವಂತ ಫೋಟೋ ಸ್ಟುಡಿಯೋ ಸಹ ನಡೆಸುತ್ತಿದ್ದರು. ವಿವಿಧ ಸಂಘ-ಸಂಸ್ಥೆಗಳಿಂದ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ ಪಡೆದಿದ್ದರು.
ಎರಡು ಹೆಣ್ಣು ಮಕ್ಕಳ ಲಗ್ನ ಮಾಡಿದ್ದು, ಮಗನ ಲಗ್ನವು ಮುಂದಿನ ತಿಂಗಳು ಮಾಡಲು ನಿರ್ಧರಿಸಲಾಗಿತ್ತು.
ಆದರೆ, ಕಳೆದ ತಿಂಗಳು ಹುಬ್ಬಳ್ಳಿಯಲ್ಲಿ ಬೈಕ್
ಟ್ಯಾಕ್ಟರ್ ಟ್ರ್ಯಾಲಿಗೆ ಬಡಿದು ಕಿಮ್ಸ್ ಆಸ್ಪತ್ರೆಯಲ್ಲಿ ಸುಮಾರು ಒಂದು ತಿಂಗಳು ಆರೈಕೆ ಮಾಡಿಕೊಂಡಿದ್ದರು.
ಇಂದು ಶುಕ್ರವಾರ ಬೆಳಗಿನ ಜಾವ ಕಿಮ್ಸ್ ಆಸ್ಪತ್ರೆಯಲ್ಲಿ ಕೊನೆ ಉಸಿರು ಎಳೆದಿದ್ದು ಧಾರವಾಡ ಜಿಲ್ಲಾ ಪತ್ರಿಕಾ ರಂಗಕ್ಕೆ ತುಂಬಲಾರದ ನಷ್ಟವಾಗಿದೆ.

vaaman bhandage nanage ಅತ್ಯಂತ ಆತ್ಮೀಯ ತಮ್ಮ ಅಪಘಾತವಾದರೂ ನಮಗೆ ತಿಳಿಸದೆ ಈ ಅಕ್ಕಳಿಗೆ ವಿಷಯ ಹೇಳಿದ್ರೆ ನೋವಾಗುತ್ತೆ ಅಂತಾ ನಮ್ಮನ್ನೆಲ್ಲಾ ಬಿಟ್ಟು ಹೋದ sir ಬೇಜಾರಾಗಿದೆ…vaaman tanna modala ಫೋಟೋ ಸ್ಟುಡಿಯೋ ಕೇಶವಾಪುರದಲ್ಲಿ ನಮ್ಮ ಅಂಗಡಿ ಬಾಡಿಗೆ ತೆಗೆದುಕೊಂಡು ಅತ್ಯಂತ ಕಷ್ಟಪಟ್ಟು ಹಗಲು ರಾತ್ರಿ ಎನ್ನದೇ ದುಡಿದು ಮನೆ ಜವಾಬ್ದಾರಿಗಳನ್ನ ತನ್ನ ಚಿಕ್ಕ ವಯಸ್ಸಿನಲ್ಲಿಯೇ ಹೆಗಲ ಮೇಲೆ ಹೊತ್ತ ದಿಟ್ಟ ಧೀರ ಮನುಷ್ಯ sir ನಂತರ ನಾವು ಬೆಂಗಳೂರು ಹೋದನಂತರ ವಾಮನ್ ಪತ್ರಿಕೆ ಫೋಟೋಗ್ರಾಫರ್ ಆಗಿ ಯಶಸ್ವಿಯಾಗಿ ಕೆಲಸ ಮಾಡುತ್ತಿದ್ದ ಪ್ರಾಮಾಣಿಕ ಒಳ್ಳೆಯ ಮನಸ್ಸುಳ್ಳ ವ್ಯಕ್ತಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಅವರ ಕುಟುಂಬಕ್ಕೆ ಧೈರ್ಯ ತುಂಬಲು ದೇವರು ಶಕ್ತಿ ನೀಡಲಿ…😭😭😭😭😭😭😌🙏🙏🙏🙏🙏.
ವಿಜಯಲಕ್ಷ್ಮಿ ಧಾರವಾಡಕರ
ರಾಜ್ಯಾಧ್ಯಕ್ಷರು.
ACHRW, SCC, STWDS.
ಧಾರವಾಡ.

Related Articles

Leave a Reply

Your email address will not be published. Required fields are marked *

Back to top button