ಸಂಪಾದಕೀಯ

ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಪರಂಪರಾ ರಂಗ ಪುರಸ್ಕಾರ ಪ್ರಧಾನ ಮತ್ತು ಪಂಚವರ್ಣೆ ನಾಟಕ ಪ್ರದರ್ಶನ….

*ವಿಷಯ :  ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಪರಂಪರಾ ರಂಗ ಪುರಸ್ಕಾರ ಪ್ರದಾನ ಮತ್ತು ಪಂಚವರ್ಣೆ ನಾಟಕ ಪ್ರದರ್ಶನ….30.3.26 ಸೋಮವಾರ ಸಂಜೆ 5 ಗಂಟೆಗೆ ನಯನ ರಂಗಮಂದಿರದಲ್ಲಿ*

ಇದೇ ತಿಂಗಳ 30ರಂದು ಸಂಜೆ ನಯನ ರಂಗಮಂದಿರದಲ್ಲಿ ಪರಂಪರಾ ಕಲ್ಚರಲ್ ಫೌಂಡೇಶನ್ ವತಿಯಿಂದ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಪರಂಪರಾ ರಂಗಪುರಸ್ಕಾರ ಪ್ರದಾನ ಮತ್ತು ಪಂಚವರ್ಣೆ ಏಕವ್ಯಕ್ತಿ ನಾಟಕ ಪ್ರದರ್ಶನ ಇರುತ್ತದೆ.

ಹಿರಿಯ ರಂಗನಟ, ನಿರ್ದೇಶಕ ಹಾಗೂ ಆಕಾಶವಾಣಿ ಧ್ವನಿ ಕಲಾವಿದ ಹೆಚ್.ಎಸ್.ಶ್ರೀರಾಮಕೃಷ್ಣ ಮತ್ತು ಹಿರಿಯ ರಂಗನಟಿ, ನಿರ್ದೇಶಕಿ, ಗಾಯಕಿ ರತ್ನ ಸಕಲೇಶಪುರ ಅವರಿಗೆ ಪರಂಪರಾ ರಂಗಪುರಸ್ಕಾರ ನೀಡಿ ಗೌರವಿಸಲಾಗುತ್ತದೆ.

ಈ ಸಮಾರಂಭದಲ್ಲಿ ಹೆಸರಾಂತ ನಾಟಕಕಾರ, ನಟ, ಸಾಹಿತಿಗಳಾದ ಡಾ. ನಾ.ದಾಮೋದರ ಶೆಟ್ಟಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ಅಶೋಕ ಎನ್.ಚಲವಾದಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.  ಪರಂಪರಾದ ಅಧ್ಯಕ್ಷ ಜಿ ಪಿ ರಾಮಣ್ಣ ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ.

ಇದೇ ಸಂದರ್ಭದಲ್ಲಿ ಡಾ.ಎಚ್.ಎನ್.ಮೀರಾ ಅಭಿನಯದ ಪಂಚವರ್ಣೆ ನಾಟಕ ಪ್ರದರ್ಶನ ಇರಲಿದೆ. ಪ್ರಸಿದ್ಧ ನಾಟಕಕಾರ, ನಿರ್ದೇಶಕ ಡಾ.ಬೇಲೂರು ರಘುನಂದನ್ ನಿರ್ದೇಶನದಲ್ಲಿ ನಾಟಕ ಮೂಡಿಬರಲಿದೆ.

ಸಮಾರಂಭದ ಆಹ್ವಾನ ಪತ್ರಿಕೆಯನ್ನು ಇಲ್ಲಿ ಇರಿಸಲಾಗಿದೆ.

ತಾವು ದಯಮಾಡಿ ಬನ್ನಿ ಎಂದು ಬಿನ್ನಹ.

ಈ ಪ್ರಕಟಣೆಯನ್ನು ನಿಮ್ಮ ಪತ್ರಿಕೆಯಲ್ಲಿ ಪ್ರಕಟಿಸಿ ಉಪಕರಿಸಬೇಕೆಂದು ಕೋರುತ್ತೇವೆ.

ನಿಮ್ಮ ವಿಶ್ವಾಸಿ
ಜಿ ಪಿ ರಾಮಣ್ಣ
ಅಧ್ಯಕ್ಷ
ಪರಂಪರಾ ಕಲ್ಚರಲ್ ಫೌಂಡೇಶನ್
9448202708

Related Articles

Leave a Reply

Your email address will not be published. Required fields are marked *

Back to top button