ಪರಮಪೂಜ್ಯ ಶ್ರೀಪಾದರು ತಮ್ಮ 15ನೆಯ ಚಾತುರ್ಮಾಸ್ಯ ವ್ರತವನ್ನು ಬೆಂಗಳೂರು ಮಹಾನಗರದ ನಮ್ಮ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ

ಪರಮಪೂಜ್ಯ ಶ್ರೀವಿದ್ಯೇಂದ್ರ ತೀರ್ಥಶ್ರೀ ಪಾದರಿಂದ 15ನೇ ಚಾತುರ್ಮಾಸ್ಯ ವ್ರತ-ಪೂರ್ಣಪ್ರಜ್ಞ ವಿದ್ಯಾಪೀಠ
ಬೆಂಗಳೂರು:ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದ ವತಿಯಿಂದ
ದಿನಾಂಕ
08-08-2026ರಿಂದ 26-09-2026
ಸ್ಥಳ ಪೂರ್ಣಪ್ರಜ್ಞ ವಿದ್ಯಾಪೀಠ ಬೆಂಗಳೂರಿನಲ್ಲಿ
ಸ್ವಸ್ತಿಶ್ರೀ ಪರಮಹಂಸ ಪರಿವ್ರಾಜಕೇತ್ಯಾದಿ ಬಿರುದಾಂಕಿತ
ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಶ್ರೀಮದಾನಂದತೀರ್ಥ ವೇದಾಂತ ಸಿಂಹಾಸನಾಧೀಶ್ವರ ಶ್ರೀಮದಧೋಕ್ಷಜತೀರ್ಥ ಶುಭಸಂಪ್ರದಾಯ ಪ್ರವರ್ತಕ ಪೇಜಾವರ ಮಠಾಧೀಶ
ಶ್ರೀವಿಜಯಧ್ವಜ ತೀರ್ಥಾರ್ಯ ಸ್ಥಾಪಿತ ಶ್ರೀ ಚಿತ್ರಾಪುರ ಮಠಾಧೀಶರಾದ ರುಶ್ಮಿಣೀಸತ್ಯಭಾಮಾ ಸಹಿತ ಕಾಳೀಯಮರ್ದನ ಶ್ರೀಕೃಷ್ಣ ದಿವ್ಯಪಾದಪದ್ಮಾರಾಧಕ
ಪರಮಪೂಜ್ಯ ಶ್ರೀ ಶ್ರೀವಿದ್ಯೆಂದ್ರ ತೀರ್ಥ ಶ್ರೀಪಾದರ
15ನೇ ಚಾತುರ್ಮಾಸ್ಯ ವ್ರತ
ಪರಮಪೂಜ್ಯ ಶ್ರೀಪಾದರು ತಮ್ಮ 15ನೆಯ ಚಾತುರ್ಮಾಸ್ಯ ವ್ರತವನ್ನು ಬೆಂಗಳೂರು ಮಹಾನಗರದ ನಮ್ಮ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಕೈಗೊಳ್ಳುತ್ತಿರುವುದು ನಮ್ಮೆಲ್ಲ ಆಸ್ತಿಕ ಮಹಾಜನತೆಯ ಸುಕೃತವೇ ಸರಿ. ಈ ಚಾತುರ್ಮಾಸ್ಯದ ಪರ್ವ ಕಾಲದಲ್ಲಿ ಭಕ್ತಮಹಾಜನರು ಪೂಜ್ಯಗುರುಗಳಿಂದ ಶ್ರೀಮಠದ ಪಟ್ಟದ ದೇವರಾದ ಶ್ರೀಕಾಳಿಂಗಮರ್ದನ ಕೃಷ್ಣನ ಸಂಸ್ಥಾನ ಪೂಜೆ, ರಾತ್ರಿ ತೊಟ್ಟಿಲು ಪೂಜೆ, ಗುರುಗಳ ಪಾದಪೂಜೆಯೇ ಮೊದಲಾದ ರೀತಿಯಲ್ಲಿ ಸೇವೆಸಲ್ಲಿಸಿ, ಶ್ರೀಮಠದ ನಾನಾ ಸಾಮಾಜಿಕ ಧಾರ್ಮಿಕ ಆಧ್ಯಾತ್ಮಿಕ ಯೋಜನೆಗಳಲ್ಲಿ ತನು ಮನ ಧನದಿಂದ ಸಹಕರಿಸಿ ಹರಿವಾಯುಗುರುಗಳ ಕೃಪೆಗೆ ಪಾತ್ರರಾಗಬೇಕಾಗಿ ಈ ಮೂಲಕ ವಿನಂತಿಸುತ್ತಾ ಪರಮಪೂಜ್ಯ ಶ್ರೀಪಾದರಿಗೆ ಸಾಷ್ಟಾಂಗ ಪ್ರಣಾಮ ಪೂರ್ವಕ ಹಾರ್ದಿಕ ಸ್ವಾಗತ ಬಯಸುತ್ತೇವೆ.
ಚಿತ್ರಾಪುರ ಶ್ರೀ ಚಾತುರ್ಮಾಸ್ಯ ಸ್ವಾಗತ ಸಮಿತಿ ಮಾಧ್ಯಮ ಹೇಳಿಕೆ ನೀಡಿದರು.






