ಸಂಪಾದಕೀಯ

ಕೆಂಭಾವಿ ಪೊಲೀಸ್ ಸ್ಟೇಷನ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದುರಹಂಕಾರಿ ಪೋಲಿಸ್ ಪೆದೆ ದೇಶಪಾಂಡೆಯವರ ಅನುಚಿತ ವರ್ತನೆ.

ಹುಣಸಗಿ ತಾಲೂಕಿನ ಕೆಂಬಾವಿ ಪೊಲೀಸ್ ಸ್ಟೇಷನ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದುರಹಂಕಾರಿ ಪೋಲಿಸ್ ಪೆದೆ ದೇಶಪಾಂಡೆಯವರ ಅನುಚಿತ ವರ್ತನೆ.

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೆಂಬಾವಿ ಪಟ್ಟಣದಲ್ಲಿ ಪೊಲೀಸ್ ಸ್ಟೇಷನ್ನಲ್ಲಿ ದೇಶಪಾಂಡೆ ಹೆಸರಿನ ಪೊಲೀಸ್ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಮುದನೂರು ಗ್ರಾಮದ ವಿಧವೆ ಹೆಂಗಸು ವೀಣಾ ಶಾಂತಗೌಡರ್ ಎಂಬ ಅಸಹಾಯಕ ಹೆಣ್ಣು ಮಗಳ ಕಟ್ಟಡವನ್ನು ಅವರ ಸಂಬಂಧಿಕರು ಒತ್ತುವರಿ ಮಾಡಿಕೊಂಡಿದ್ದಾರೆ. ವೀಣಾ ಶಾಂತಗೌಡರ್ ಇವರು ಮುದನೂರು ಗ್ರಾಮದಲ್ಲಿರುವ ಕಟ್ಟಡವನ್ನು ಉರಿಲಿಂಗಪೆದ್ದಿ ಶಿಕ್ಷಣ ಸಂಸ್ಥೆಗೆ ಬಾಲಕಿಯರ ವಿದ್ಯಾರ್ಥಿ ನಿಲಯ ಪ್ರಾರಂಭಿಸಲು 15 ವರ್ಷಕ್ಕೆ ಒಪ್ಪಿಗೆ ಪತ್ರ ಮಾಡಿಕೊಟ್ಟಿದ್ದಾರೆ.

ಆದರೆ ಮುದನೂರು ಗ್ರಾಮದ ಈ ಕಟ್ಟಡವನ್ನು ವೀಣಾ ಶಾಂತಗೌಡರ್ ಅವರ ಸಂಬಂಧಿಕರು ಆಕ್ರಮವಾಗಿ ತಮ್ಮ ವಶದಲ್ಲಿಟ್ಟುಕೊಂಡಿದ್ದಾರೆ.

ಬಾಲಕಿಯರ ವಸತಿ ನಿಲಯ ಪ್ರಾರಂಭಿಸಲು ಉರಿಲಿಂಗಪೆದ್ದಿ, ಶಿಕ್ಷಣ ಸಂಸ್ಥೆಗೆ ತುಂಬಾ ತೊಂದರೆಯಾಗುತ್ತಿದೆ . ಈ ವಿಷಯವಾಗಿ ಕೆಂಭಾವಿ ಪೊಲೀಸ್ ಸ್ಟೇಷನ ಕಾರ್ಯ ವ್ಯಾಪ್ತಿಗೆ ಬರುವ ಮುದನೂರು ಪಟ್ಟಣದ ಪೊಲೀಸ್ ಸ್ಟೇಷನ್ ಗೆ ವೀಣಾ ಶಾಂತಗೌಡರ ಅವರೊಂದಿಗೆ ಪತ್ರಕರ್ತರು ಶ್ರೀ ಶಂಕರ್ kodla ಮತ್ತು ಎಂ ಎ ಸುಗಂಧಿ ವಕೀಲರು ಠಾಣೆಗೆ ಬಂದು ವಿಷಯವನ್ನು ದೇಶಪಾಂಡೆ ಅವರತ್ರ ವಿವರಿಸಿದ್ದೆವು ಆಗ ದೇಶಪಾಂಡೆ ಅವರು ಮನವಿ ಪತ್ರ ಕೈಗೂ ತೆಗೆದುಕೊಳ್ಳದೆ ಇದು ಸಿವಿಲ್ ಕೇಸ್ ಎಂದು ಅಪಮಾನ ಮಾಡುತ್ತಾರೆ.

ವೀಣಾ ಶಾಂತ್ಗೌಡರು ಮತ್ತು ಉರಿಲಿಂಗಪೆದ್ದಿ, ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಶಂಕರ್ ಕೊಡ್ಲಾ ನಾವೆಲ್ಲ ಕೂಡಿಕೊಂಡು ಕೆಂಭಾವಿ ಪೊಲೀಸ್ ಸ್ಟೇಷನ್ ಗೆ ಬಂದು ವೀಣಾ ಶಾಂತಗೌಡರ ಅವರ ಕಟ್ಟಡವನ್ನು ಬಾಲಕಿಯರ ಹೊಸತಿ ನಿಲಯಕ್ಕೆ ಬಿಡಿಸಿಕೊಡಲು ಮನವಿ ಪತ್ರ ಕೊಡಲು ಸ್ಟೇಷನ್ ಗೆ ಬಂದಿದ್ದೆವು.

ಆದರೆ ಕೆoಬಾವಿ ಪೊಲೀಸ್ ಸ್ಟೇಷನ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ದೇಶಪಾಂಡೆ ಅವರು ನಮ್ಮ ಮನವಿಯನ್ನು ಕೈಗೆ ತೆಗೆದುಕೊಳ್ಳದೆ ಮನವಿ ಬಗ್ಗೆ ವಿಚಾರ ಮಾಡದೆ ಇದು ಸಿವಿಲ್ ಕೇಸ್ ಸಿವಿಲ್ ವ್ಯಾಪ್ತಿಗೆ ಬರುತ್ತದೆ ಉಡಾಫೆ ಮಾತಾಡುತ್ತಾ ಒಂದು ತರಹ ನುಲಿಯುತ್ತಾ, ಚಡಪಡಿಸುತ್ತಿದ್ದಾರೆ. ಸಾರ್ವಜನಿಕರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ.

ನ್ಯಾಯಯುತವಾಗಿರುವ ನಮ್ಮ ಸಮಸ್ಯೆಯನ್ನು ಪೊಲೀಸ್ ಇಲಾಖೆ ಪರಿಹರಿಸುತ್ತದೆ ಎಂಬ ನಂಬಿಕೆಯಿಂದ ಕೆಂಭಾವಿ ಪೊಲೀಸ್ ಸ್ಟೇಷನ್ ಗೆ ಮನವಿ ಪತ್ರ ಕೊಡಲು ಬಂದರೆ ಮನವಿ ಪತ್ರದ ಬಗ್ಗೆ ವಿಚಾರ ಮಾಡದೇನೆ ಇದು ಸಿವಿಲ್ ಕೇಸ್ ಎಂದು ಮೊದಲೇ ಘೋಷಿಸುವ ಈ ಪ್ರಭೂತಿ ದೇಶಪಾಂಡೆ ಕನಿಷ್ಠ ಕಾನೂನಿನ ಜ್ಞಾನ ಸಹ ತೋರಿಸ್ತಾ ಇಲ್ಲ ಈ ದೇಶಪಾಂಡೆಯವರು.

ಈ ವಿಚಾರವಾಗಿ ದೇಶಪಾಂಡೆಯವರ ನಿರ್ಲಕ್ಷಿತ, ಅನುಚಿತ ವರ್ತನೆ ಮತ್ತು ಸಾರ್ವಜನಿಕರೊಂದಿಗೆ ಸೌಜನ್ಯವಾಗಿ ನಡೆದುಕೊಳ್ಳಬೇಕೆಂಬ ಕನಿಷ್ಠ ಜ್ಞಾನ ಇಲ್ಲದೆ ಇರುವುದನ್ನು ಪೊಲೀಸ್ ಇಲಾಖೆಯ ಅಧಿಕಾರಿಗಳು ಸಮಗ್ರವಾಗಿ ಸಮಸ್ಯೆಯನ್ನು ಪರಿಶೀಲಿಸಿ , ದೇಶಪಾಂಡೆ ಅವರಿಗೆ ಪ್ರೋಟೋಕಾಲ್ ಅಂದರೆ ಏನು ಎಂಬ ವಿಷಯವನ್ನು ಇಲಾಖೆಯ ಮುಖ್ಯಸ್ಥರು ದಯವಿಟ್ಟು ತಿಳಿಸಿ ಕೊಡಬೇಕು. ಮತ್ತು ಇಲಾಖೆಯ ಮುಖ್ಯಸ್ಥರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ವಿಚಾರಣೆ ಕಾಯ್ದಿರಿಸಿ ಅಮಾನತ್ತಿನಲ್ಲಿ ಇಡಬೇಕಾಗಿ ಮನವಿ.

ಸಾರ್ವಜನಿಕರ ಮತ್ತು ನಮಗೆ ಪೊಲೀಸ್ ಸ್ಟೇಷನ್ನಲ್ಲಿ ಆಗಿರುವ ಅನುಭವವನ್ನು ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಮತ್ತು ಗೃಹ ಮಂತ್ರಿ ಪ್ರಿಯಾಂಕ ಖರ್ಗೆ ಅವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಎಂ ಎ ಸುಗಂಧಿ ವಕೀಲರು ಬೆಂಗಳೂರು.

Related Articles

Leave a Reply

Your email address will not be published. Required fields are marked *

Back to top button