ಶ್ರದ್ಧಾ ಭಕ್ತಿಯಿಂದ ಪೇಟೆ ಬಸವೇಶ್ವರ ಕಾರ್ತಿಕ ಮಹೋತ್ಸವ* ಕನಕಗಿರಿ

ಶ್ರದ್ಧಾ ಭಕ್ತಿಯಿಂದ ಪೇಟೆ ಬಸವೇಶ್ವರ ಕಾರ್ತಿಕ ಮಹೋತ್ಸವ*
ಕನಕಗಿರಿ ಪಟ್ಟಣದ ಪೇಟೆ ಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಮತ್ತು ಶ್ರದ್ಧಾಭಕ್ತಿಯಿಂದ ಭಕ್ತರಿಂದ ಕಾರ್ತಿಕ ದೀಪ ಹಚ್ಚುವ ಕಾರ್ಯಕ್ರಮ ಜರಗಿತು.
ಈ ವೇಳೆ ಮಾತನಾಡಿದ ಮಾತನಾಡಿದ ಶರಣಮ್ಮ ಸಜ್ಜನ್ ಅವರು ಕನಕಗಿರಿ ಆದ್ಯಂತ ಹಿಂದೂ ದೇವಾಲಯಗಳಲ್ಲಿ ಕಾರ್ತಿಕ ದೀಪೋತ್ಸದ ಆಚರಣೆ ಭಕ್ತಿ ಸಂಭ್ರಮದಿಂದ ನಡೆಯುತ್ತದೆ. ದೀಪಾವಳಿಯಂದ ತೊಡಗಿ ಆಚರಿಸಲ್ಪಡುವ ಈ ದೀಪೋತ್ಸವದಲ್ಲಿ ದೀಪಗಳ ಸಂಖ್ಯೆ ವರ್ಧಿಸುತ್ತಾ ಬರುವುದನ್ನು ಕಾಣಬಹುದು ಎಂದು ಹೇಳಿದರು.
ಇಲ್ಲಿ ಭಕ್ತರು ಶಿವನ ಹಾಗೂ ಬಸವಣ್ಣನ ಭಜನೆಯನ್ನು ಭಜಿಸಿ ಸಂಜೆಯ ವೇಳೆ ಝಗಝಗಿಸುವ ದೀಪಗಳಿಂದ ದೇವಾಲಯವನ್ನು ಬೆಳಗುತ್ತಾರೆ. ಭಕ್ತಿಸಾಂದ್ರವಾದ ಸಂಗೀತದೊಂದಿಗೆ, ಅಬ್ಬರದ ಪಟಾಕಿಗಳನ್ನು ಸಿಡಿಸಿ ಪೇಟೆ ಬಸವೇಶ್ವರ ದೀಪೋತ್ಸವ ಎಂದು ಕರೆಯಲ್ಪಡುವ ಈ ದೇವಸ್ಥಾನದಲ್ಲಿ ಹೆಚ್ಚು ರಂಜನೀಯವಾಗಿರುತ್ತದೆ. ಕನಕಗಿರಿಯಲ್ಲಿ ಈ ಆಚರಣೆಯು ಪ್ರಧಾನವಾಗಿ ದೇವಾಲಯಗಳಲ್ಲಿ ಮಾತ್ರ ಸೀಮಿತವಾಗಿರುತ್ತದೆ. ಅಂದು ದೇವಾಲಯಗಳಲ್ಲಿ ಭಕ್ತರು ತೈಲದೀಪಗಳನ್ನು ಬೆಳಗಿಸಿ ತಮ್ಮ ಇಷ್ಟ ದೇವರನ್ನು ಪ್ರಾರ್ಥಿಸಿ ಭಕ್ತಿಯಿಂದ ಕೊಂಡಾಡುತ್ತಾರೆ.
ನಂತರ ಮಾತನಾಡಿದ ದೇವಸ್ಥಾನದ ಅರ್ಚಕರಾದ ಶರಣಯ್ಯ ತಾತ ಚೂಡಮಣಿ ಅವರು ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಕಾರ್ತಿಕ ಮಾಸದ ದೀಪದ ಜ್ಯೋತಿ ಹಚ್ಚುವ ಕಾರ್ಯಕ್ರಮ ಜರಗುತ್ತದೆ ಕಾರ್ಯಕ್ರಮದಲ್ಲಿ ಅನೇಕ ಭಕ್ತರು ಪಾಲ್ಗೊಂಡು ವಿಶೇಷ ಪೂಜೆ ನೈವೇದ್ಯಗಳಿಂದ ಮತ್ತು ಭಜನೆ ಹಾಗೂ ಅಲಂಕಾರದಿಂದ ಬಸವೇಶ್ವರನನ್ನು ಭಕ್ತಿಯಿಂದ ಪೂಜೆ ಸಲ್ಲಿಸಲಾಗುತ್ತದೆ ಎಂತೆಂದರು.
ಈ ಸಂದರ್ಭದಲ್ಲಿ ಹಲವು ಭಕ್ತರು ಕೂಡಿ ಸೇವಾ ಸಮಿತಿ ಹಾಗೂ ಗುರು ಹಿರಿಯರು ಉಪಸ್ಥಿತರಿದ್ದರು.
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ 8867257737




