ಸರ್ವಾಧಿಕಾರಿ ಧೋರಣೆಯತ್ತ ಸಾರ್ವಜನಿಕ ಗ್ರಂಥಾಲಯ ಇಲಾಖೆ.
ದಿನಾಂಕ 19 2025 ರಂದು ಹೊರಡಿಸಿದ ಸುತ್ತೋಲೆ ಕೂಡಲೇ ಹಿಂಪಡೆದುಕೊಳ್ಳಬೇಕು.
ಸರ್ವಾಧಿಕಾರಿ ಧೋರಣೆಯತ್ತ ಸಾರ್ವಜನಿಕ ಗ್ರಂಥಾಲಯ ಇಲಾಖೆ. ಸಚಿವರು ಸಾರ್ವಜನಿಕ ಗ್ರಂಥಾಲಯ ಇಲಾಖೆಯು ದಿನಾಂಕ 19 2025 ರಂದು ಹೊರಡಿಸಿದ ಸುತ್ತೋಲೆ ಕೂಡಲೇ ಹಿಂಪಡೆದುಕೊಳ್ಳಬೇಕೆಂದು ಕಲ್ಯಾಣ ಕರ್ನಾಟಕದ ಸಾಹಿತಿ ಚಿಂತಕರು ಹಾಗೂ ಪ್ರಕಾಶಕರು ಈ ಮೂಲಕ ಆಗ್ರಹಿಸುತ್ತೇವೆ ಈ ಸುತ್ತೋಲೆಯನ್ನು ಗಮನಿಸಿದಾಗ ಸರ್ಕಾರ ಏಕ ಗವಾಕ್ಷ ಪುಸ್ತಕ ಖರೀದಿ ಯೋಜನೆಯನ್ನು ಕ್ರಮೇಣವಾಗಿ ನಿಲ್ಲಿಸುವ ಷಡ್ಯಂತರ ನಡೆಸಿದೆ ಅಷ್ಟೇ ಅಲ್ಲ ಸಾರ್ವಜನಿಕ ಗ್ರಂಥಾಲಯ ಪ್ರಧಾನ ಕಛೇರಿ ಮುಚ್ಚಿ ಆಯುಕ್ತರ ಹುದ್ದೆಯನ್ನು ರದ್ದು ಪಡಿಸುವ ಸಾಧ್ಯತೆಗಳಿವೆ ಇದನ್ನು ನೋಡಿದರೆ ಈ ಮುಂಚೆ ನಿರ್ದೇಶಕರು ಕೈಗೊಳ್ಳುವ ಯೋಚನೆಗಳು ಸರಿಯಾಗಿದ್ದವು ಎಂಬ ಪಶ್ಚಾತಾಪದ ಮನೋಭಾವನೆ ಮೂಡುತ್ತಿದೆ ಈ ಕ್ರಮ ಕೈಗೊಳ್ಳುವರು ಎಂಬುದು ಮೇಲ್ನೋಟಕ್ಕೆ ತಿಳಿದು ಬರುತ್ತದೆ ಅಲ್ಲದೇ ಬೆಂಗಳೂರು ನಗರದ ವಲಯ ಗ್ರಂಥಾಲಯಗಳಿಗೆ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಪ್ರಾರ್ಥನೆಕವಾಗಿ ಪುಸ್ತಕ ಖರೀದಿಸುವ ಪರಮಾಧಿಕಾರವನ್ನು ನೀಡಿ ಕೆಲವು ಜಿಲ್ಲೆಗಳನ್ನು ಅವರಿಗೆ ವಹಿಸಲಾಗಿದೆ ಸಂಪೂರ್ಣ ಪುಸ್ತಕ ಖರೀದಿ ಅಧಿಕಾರವನ್ನು ವಲಯ ಗ್ರಂಥ ಪಾಲಕರಿಗೆ ವಹಿಸಿರುವುದರಿಂದ ಅವರು ಹೆಚ್ಚಿನ ಅನುಕೂಲವಾಗುತ್ತದೆ ಪಕ್ಷಪಾತ ಪ್ರಾದೇಶಿಕತೆ ಗುಂಪುಗಾರಿಕೆ ಜಾತೀಯತೆ ಧೋರಣೆಯನ್ನು ಅನುಸರಿಸುವ ಮೂಲಕ ತಮಗೆ ಬೇಕಾದವರನ್ನು ಒಲಿಸಲು ಕೊಳಲು ಪುಸ್ತಕ ಖರೀದಿ ನಡೆಯುತ್ತದೆ ಲೇಖಕರು ಬೆಂಗಳೂರು ಮೂಲದ ಲೇಖಕ ಹಾಗೂ ಪ್ರಕಾಶಕರಿಗೆ ಇದು ಹೆಚ್ಚಿನ ಅನುಕೂಲವಾಗುತ್ತದೆ ಕರ್ನಾಟಕದ ಉಳಿದ ಜಿಲ್ಲೆಯ ಎಲ್ಲಾ ಲೇಖಕರು ಸಾಹಿತಿಗಳು ಪ್ರಕಾಶಕರು ನಿರ್ನಾಮವಾಗುವುದರಲ್ಲಿ ಸಂದೇಹವಿಲ್ಲ ಮತ್ತು ಎಲ್ಲ ಜಿಲ್ಲೆಯ ಗ್ರಂಥ ಪಾಲಕರು ಪುಸ್ತಕ ಖರೀದಿಸುವ ಅಧಿಕಾರ ಕಳೆದುಕೊಂಡು ಅವರಿಗೆ ಖರೀದಿ ಮಾಡಲಿಕ್ಕೆ ಅವಕಾಶವಿಲ್ಲದಂತಾಗಿದೆ ವಲಯ ಗ್ರಂಥ ಪಾಲಕರು ಖರೀದಿಸಿ ಬಿಟ್ಟು ಉಳಿದಿದ್ದನ್ನು ಖರೀದಿಸಲು ಹೇಳಿ ತುಟಿಗೆ ತುಪ್ಪ ಹಚ್ಚುವ ಕೆಲಸವನ್ನು ಮಾಡಲಾಗಿದೆ ಇದರಿಂದ ಜಿಲ್ಲಾ ಗ್ರಂಥಾಲಯಗಳು ನಿರ್ನಾಮವಾಗುತ್ತವೆ ಮತ್ತು ಅಲ್ಲಿಯ ಗ್ರಂಥ ಪಾಲಕರು ಸ್ಥಳೀಯ ಸಾಹಿತಿಗಳ ಪ್ರೀತಿ ವಿಶ್ವಾಸ ಕಳೆದುಕೊಳ್ಳುತ್ತಾರೆ ಪ್ರಕಾಶಕರು ಯಾವ ಜಿಲ್ಲೆಗಳಲ್ಲಿ ಬೆಳೆಯದಂತೆ ಸರ್ಕಾರ ಒಂದು ರೀತಿ ಒಳಸಂಚು ಮಾಡಿದೆ ಎಂದು ಹೇಳಬಹುದು ಮತ್ತೆ ಪುನಃ ಏಕಗವಾಕ್ಷ ಪುಸ್ತಕ ಖರೀದಿ ಯೋಜನೆಯ ಪರಮಾಧಿಕಾರ ಆಯುಕ್ತರಿಗೆ ಅಥವಾ ನಿರ್ದೇಶಕರಿಗೆ ನೀಡಬೇಕು ಅಲ್ಲಿ ಖರೀದಿಯಾದ ಪುಸ್ತಕಗಳು ಎಲ್ಲ ಜಿಲ್ಲಾ ಗ್ರಂಥಗಳು ಹಾಗೂ ವಲಯಗಳು ಖರೀದಿ ಮಾಡುವ ಮೊದಲಿನ ಪದ್ದತಿಯನ್ನೇ ಪುನಹ ಜಾರಿಗೆ ತರಬೇಕೆಂದು ಆಗ್ರಹಿಸುತ್ತೇವೆ ಮತ್ತು 2021 ಆಯ್ಕೆ ಪಟ್ಟಿ ಪುಸ್ತಕ ಖರೀದಿ ಪಾವತಿಯನ್ನು ಕೂಡಲೇ ಮಾಡಬೇಕೆಂದು ವಿನಂತಿಸಿಕೊಳ್ಳುತ್ತೇವೆ ಮುಂದಿನ ದಿನಗಳಲ್ಲಿ 2021 ರಿಂದ ಇದುವರೆಗೆ ಎಲ್ಲ ಪುಸ್ತಕಗಳ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಿ ಕರ್ನಾಟಕದ ಎಲ್ಲಾ ಲೇಖಕರನ್ನು ಹಾಗೂ ಪ್ರಕಾಶಕರನ್ನು ಪ್ರತಿ ವರ್ಷ ಬಿಲ್ಲನ್ನು ಪಾವತಿಸಿ ಲೇಖಕರಿಗೆ ಮತ್ತು ಪ್ರೋತ್ಸಾಹಿಸಬೇಕೆಂದು ಕೇಳಿಕೊಳ್ಳುತ್ತೇವೆ ಒಂದು ವೇಳೆ ಸಾರ್ವಜನಿಕ ಗ್ರಂಥಾಲಯ ಸಚಿವರು ಕ್ರಮ ಕೈಗೊಳ್ಳದಿದ್ದರೆ ರಾಜ್ಯದಾದಂತೆ ಉಗ್ರ ಹೋರಾಟ ಕೈಗೊಳ್ಳುತ್ತೇವೆಂದು ಈ ಮೂಲಕ ಎಚ್ಚರಿಸುತ್ತೇವೆ



