ಸಂಪಾದಕೀಯ

ಸಹಕಾರ ಮಂಡಳಿಯ ಮಾಜಿ ಅಧ್ಯಕ್ಷರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು, 23ಕೋಟಿ 75ಲಕ್ಷ ವಸೂಲಿ ಮಾಡಿ – ಎಸ್. ಚೇಂದ್ರ ಶೇಖರ್

ಪತ್ತಿನ ಸಹಕಾರ ಮಂಡಳಿಯ ಮಾಜಿ ಅಧ್ಯಕ್ಷರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು, 23ಕೋಟಿ 75ಲಕ್ಷ ವಸೂಲಿ ಮಾಡಿ – ಎಸ್. ಚೇಂದ್ರ ಶೇಖರ್ ಬೆಂಗಳೂರು. ಪತ್ತಿನ ಸಹಕಾರ ಮಂಡಳಿಯ ಮಾಜಿ ಅಧ್ಯಕ್ಷರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು, 23ಕೋಟಿ 75ಲಕ್ಷ ವಸೂಲಿ ಮಾಡಿ ಎಂದುಎಸ್. ಚೇಂದ್ರ ಅವರು ಇಂದು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಸರ್ಕಾರ ವನ್ನು ಒತ್ತಾಯಿಸಿದರು. 2016-23 ವರೆಗೆ ಕ.ರಾ.ಪತ್ತಿನ ಸಹಕಾರ ಮಹಾ ಮಂಡಳದಲ್ಲಿ 23.75ಕೋಟಿ ಅವ್ಯವ ಹಾರವನ್ನು ಸಿಐಡಿ ಮತ್ತು ಕಾನೂನು ತನಿಖೆ ಶೀಘ್ರ ವಾಗಿ ಜರುಗಿಸಲು ಎಸ್.ಚಂದ್ರಶೇಖರ್ ಸರ್ಕಾರ ವನ್ನು ಡಿಮ್ಯಾಂಡ್ ಮಾಡಿದರು.
ಈ ಕುರಿತು ಇಂದು ಕ .ರಾ.ಪತ್ತಿನ ಸಹಕಾರ ಮಹಾ ಮಂಡಳದ ಅಧ್ಯಕ್ಷರು & ಇತರೆ ನಿ ರ್ದೇಶಕರುಗಳು ಸುದ್ದಿಗೋಷ್ಠಿಯಲ್ಲಿ ಮಾ ತನಾಡಿ 2015-16 ರಿಂದ 2023-24ವರೆಗೆ ಮಹಾ ಮಂಡಳದಲ್ಲಿ ಅಧ್ಯಕ್ಷ ರುಗಳಾಗಿದ್ದ ಕೆ. ಲಲಿತಾ ಜಿ.ಟಿ.ದೇವೇಗೌಡ & ಸಿ.ಎಂ. ಮಾರೇಗೌಡ ಮತ್ತು ಸಿ ಇ ಒ ಗಳಾಗಿದ್ದ ನಾರಾಯಣಗೌಡ, ಗುರುಪ್ರಸಾದ್ ಕೆ ಎನ್, & ಲೆಕ್ಕಾಧಿಕಾರಿ ಆಶಾ ಲತಾ,& ವಿ ರಾಜು ರವರ ಅವಧಿಯಲ್ಲಿ ಒಟ್ಟು ₹23,75,14,481-00 ರಷ್ಟು ಹಣ ದುರುಪ ಯೋಗವಾಗಿದ್ದು, ಈ ಅವಧಿಯ ಲೆಕ್ಕಪರಿಶೋಧನೆಯಲ್ಲೂ ಇದು ಸಾಬೀತಾಗಿದ್ದು; ಸಚಿವರು, ಸರ್ಕಾರಿ ನಿಬಂಧಕರಿಗೂ ತಿಳಿಸಿದ್ದು; ಕೋರ್ಟ್ ನಲ್ಲು ದಾವೆ ಹೂಡಲಾಗಿದೆ ಎಂದರು.
ಮೇಲೆ ಹೇಳಿದ 3 ಮಾಜಿ ಅಧ್ಯಕ್ಷರುಗಳು; ಈ ಪ್ರಕರಣ, ದಾವೆಯ ಮೇಲೆ ಹಣದ & ರಾಜಕೀಯ ಪ್ರ ಭಾವ ಬೀರುತ್ತಿದ್ದು, ದಾವೆ ಇತ್ಯರ್ಥಗೊಂಡಿಲ್ಲದಿ. ರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ತಿಳಿಸಿದರು .
ಈಪ್ರಕರಣವನ್ನು ಸಿಐಡಿ ಮತ್ತು ಕಾನೂನುತನಿಖೆಯಲ್ಲಿ ಚುರುಕುಗೊಳಿಸಬೇಕೆಂದು ಅವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ,ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು, ಅತೀ ಶೀಘ್ರದಲ್ಲಿ ಚಾರ್ಜ್ ಶೀಟ್ ಸಲ್ಲಿಸಿ ತ್ವರಿತ ಇತ್ಯರ್ಥ ಗೊಳಿಸಿ ವಸೂಲಾತಿಗಾ ಗಿ ಕಾಯ್ದಿರಿಸಿದ ಸಂಘಗ ಳಎಫ್.ಡಿ.,ಮೊತ್ತ ಕೋಟಿ 23,75,14,481-00 ರಷ್ಟು ಹಣವನ್ನು ವಾಪಸ್ ಕ.ರಾ.ಪತ್ತಿನ ಸಹಕಾರ ಮಹಾ ಮಂಡಳಕ್ಕೆ ಕೊಡಿಸಬೇಕಾಗಿ ಸರ್ಕಾರ ವನ್ನು ಡಿಮ್ಯಾಂಡ್ ಮಾಡಿದರು. ಅಧ್ಯಕ್ಷರಾದ ಎಸ್. ಚಂದ್ರಶೇಖರ್ ಮತ್ತು ಇತರೆ ನಿರ್ದೇಶಕರುಗಳು ಆಗ್ರಹಹಿಸಿ, ಮುಂದೆ ಹೋರಾಟ ತೀವ್ರಗೊಳಿಸಲು ಸಜ್ಜಾಗಿದ್ದೇವೆಂದು ತಿಳಿಸಿದರು. ಈ ಪತ್ರಿಕಾಗೋಷ್ಟಿ ಯಲ್ಲಿ ಮಹಾಮಂಡಲದ ಸದಸ್ಯರು ಉಪಸ್ಥಿತರಿದ್ದರು . ವರದಿ. ಮಂಜುಳಾ ರೆಡ್ಡಿ.

Related Articles

Leave a Reply

Your email address will not be published. Required fields are marked *

Back to top button