ಸಾಮರ್ ಇಂಟರ್ನ್ಯಾಷನಲ್ ಇಸ್ಲಾಮಿಕ್ ಮಾನ್ಯತೆ ರದ್ದು ಪಡಿಸಿ – ಕರ್ನಾಟಕ ರಕ್ಷಣಾ ವೇದಿಕೆ ಬೆಂಗಳೂರು.

ಸಾಮರ್ ಇಂಟರ್ನ್ಯಾಷನಲ್ ಇಸ್ಲಾಮಿಕ್ ಮಾನ್ಯತೆ ರದ್ದು ಪಡಿಸಿ – ಕರ್ನಾಟಕ ರಕ್ಷಣಾ ವೇದಿಕೆ ಬೆಂಗಳೂರು. ಸಾಮರ್ ಇಂಟರ್ನ್ಯಾಷನಲ್ ಇಸ್ಲಾಮಿಕ್ ಶಾಲೆಯ ಮಾನ್ಯತೆ ಮತ್ತು ಮಾನ್ಯತೆ ನವೀಕರಣ ರದ್ದುಪಡಿಸುವ ಬಗ್ಗೆ ಇಂದು ಬೆಂಗಳೂರು ಪ್ರೆಸ್ಸ್ ಕ್ಲಬ್ ನಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ಸರ್ಕಾರವನ್ನು ಡಿಮ್ಯಾಂಡ್ ಮಾಡಿದರು. ಇಂಟರ್ನ್ಯಾಷನಲ್ ಇಸ್ಲಾಮಿಕ್ ಶಾಲೆಯ ಮಾನ್ಯತೆ ಮತ್ತು ಮಾನ್ಯತೆ ನವೀಕರಣ ರದ್ದುಪಡಿಸುವ ಬಗ್ಗೆ ಉಪನಿರ್ದೇಶಕರ ಕಛೇರಿ, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ದಕ್ಷಿಣ ಜಿಲ್ಲೆ, ಕಲಾಸಿಪಾಳ್ಯ ರವರು ನಮ್ಮಗಳ ದೂರನ್ನು ಕೂಲಂಕುಷವಾಗಿ ಪರಿಶೀಲಿಸಿ ಈ ಶಾಲೆಗೆ ಕರ್ನಾಟಕ ಶಿಕ್ಷಣ ಕಾಯ್ದೆ-1983ರ ಸೆಕ್ಷನ್ 7(ಎ) 39 ರನ್ವಯ ಶಾಲೆಗೆ ನೀಡಿರುವ ಮಾನ್ಯತೆ ಹಿಂಪಡೆಯಲು ಹಾಗೂ ನಿಯಮ-34ರ ಪ್ರಕಾರ ಈ ಶಾಲೆಗೆ ನೀಡಿರುವ ನೊಂದಣಿಯನ್ನು ರದ್ದುಪಡಿಸಲು ಉಪನಿರ್ದೇಶಕರ ಕಛೇರಿ, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ದಕ್ಷಿಣ ಜಿಲ್ಲೆ, ಕಲಾಸಿಪಾಳ್ಯ ರವರು ದಿನಾಂಕ: 26/05/2025 ರಂದು ಮೇಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಿದ್ದು ಈ ಶಾಲೆಯು ಈಗಲೂ ಕೂಡ ತಮ್ಮ ಶಾಲೆಯ ಹೆಸರನ್ನು ಜಾಮಿಯಾ ಮೊಹಮ್ಮದಿಯಾ ಮನ್ಸೂರ ಉರ್ದು ಶಾಲೆ ಮತ್ತು ಸಾಮರ್ ಇಂಟರ್ ನ್ಯಾಷನಲ್ ಇಸ್ಲಾಮಿಕ್ ಶಾಲೆ ಎಂದು ಸಲಾರ್ ದಿನ ಪತ್ರಿಕೆಯಲ್ಲಿ ನೀಡುತ್ತಿರುವ ಬಗ್ಗೆ ಪತ್ರಿಕಾ ಪ್ರಕಟಣೆ/ಹೇಳಿಕೆ ನೀಡಿದ್ದರು ಸರ್ಕಾರ ಕ್ರಮ ತೆಗುಡುಕೊಳ್ಳ ಬೇಕೆಂದು ಶ್ರೀನಿವಾಸ್ ಒತ್ತಾಯಿಸಿದರು.
ಕರ್ನಾಟಕ ರಕ್ಷಣ ವೇದಿಕೆ(ರಿ) ಕಡೆಯಿಂದ ಸಾಮರ್ ಇಂಟರ್ನ್ಯಾಷನಲ್ ಇಸ್ಲಾಮಿಕ್ ಶಾಲೆಯ ಮಾನ್ಯತೆ ಮತ್ತು ಮಾನ್ಯತೆ ನವೀಕರಣ ರದ್ದುಪಡಿಸುವ ಬಗ್ಗೆ ನೀಡಿದ ದೂರಿನನ್ವಯ ಉಪನಿರ್ದೇಶಕರ ಕಛೇರಿಯವರು ಈ ಶಾಲೆಗೆ ಕರ್ನಾಟಕ ಶಿಕ್ಷಣ ಕಾಯ್ದೆ-1983ರ ಸೆಕ್ಷನ್ 7(ಎ) 39 ರನ್ವಯ ಶಾಲೆಗೆ ನೀಡಿರುವ ಮಾನ್ಯತೆ ಹಿಂಪಡೆಯಲು ಹಾಗೂ ನಿಯಮ-34ರ ಪ್ರಕಾರ ಈ ಶಾಲೆಗೆ ನೀಡಿರುವ ನೊಂದಣಿಯನ್ನು ರದ್ದುಪಡಿಸಲು ಮೇಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಿದ್ದು, ಹಾಗೂ ಇದಕ್ಕೆ ಸಂಬಂಧಿಸಿದಂತೆ ಸೂಕ್ತ ನಿರ್ದೇಶನವನ್ನು ಕೋರಿ ಮಾನ್ಯ ಆಯುಕ್ತರಿಗೆ ದಿನಾಂಕ: 26/05/2025 ರಲ್ಲಿ ಪತ್ರ ಬರೆದಿರುತ್ತಾರೆ.
ಈ ಶಾಲೆಯವರು ಈಗಲೂ ಕೂಡ ಸಲಾರ್ ದಿನ ಪತ್ರಿಕೆಯಲ್ಲಿ ಜಾಮಿಯಾ ಮೊಹಮ್ಮದಿಯಾ ಮನ್ನೂರ ಉರ್ದು ಶಾಲೆ ಮತ್ತು ಸಾಮರ್ ಇಂಟರ್ ನ್ಯಾಷನಲ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆ ಎಂದು ದಿನಾಂಕ: 25/05/2025 ರಂದು ಪತ್ರಿಕೆ ಪ್ರಕಟಣೆ ನೀಡಿರುತ್ತದೆ.
ಈ ಶಾಲೆಯವರು 2022-2023 ನೇ ಸಾಲಿನಲ್ಲಿ ಜಾಮಿಯಾ ಮೊಹಮ್ಮದಿಯಾ ಮನ್ಸೂರ ಇಂಗ್ಲಿಷ್ ಹೈಸ್ಕೂಲ್ (ಆಡಳಿತ: “ಜಾಮಿಯಾ ಮೊಹಮ್ಮದಿಯಾ ಎಜುಕೇಷನ್ ಅಕ್ರಮವಾಗಿ ನಡುಸುವುದಲ್ಲದೆ ಮಕ್ಕಳ ಜೊತೆಯಲ್ಲಿ ಆಟವಾಡುತ್ತಿದ್ದ ಎಂದರು. ವರದಿ. ಮಂಜುಳಾ ರೆಡ್ಡಿ.



